ಬೆಂಗಳೂರು: ಶಾಲಾ ಪ್ರವೇಶಾತಿ ಶುಲ್ಕವನ್ನು (School Fee hike) ಇತ್ತೀಚೆಗಷ್ಟೇ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೆಚ್ಚಳ ಮಾಡಿದ್ದವು. ಆರ್ಥಿಕ ಸಂಕಷ್ಟದ ಹೊಡೆತಕ್ಕೆ ನಲುಗಿದ್ದ ಪೋಷಕರು, ಖಾಸಗಿ ಶಾಲಾ ಒಕ್ಕೂಟಗಳು ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದವು. ಆದರೆ ಈಗ ಶಾಲಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಬೆನ್ನಲ್ಲೇ ಪೋಷಕರಿಗೆ ನೋಟ್ಸ್ ಬುಕ್ ದರ (School stationery rate) ಏರಿಕೆಯಾಗುವ ಮೂಲಕ ಮತ್ತೊಂದು ಆಘಾತವನ್ನುಂಟು ಮಾಡಿದಂತೆ ಆಗಿದೆ.
ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಡಬ್ಬಲ್ ಶಾಕ್ ಸಿಕ್ಕಿದೆ. ಪಠ್ಯ ಪುಸ್ತಕ ಬಳಿಕ, ಮಕ್ಕಳ ಶಾಲಾ ಶುಲ್ಕದಲ್ಲಿ ಏರಿಕೆಯಾಗಿತ್ತು. ಈಗ ಮಕ್ಕಳ ನೋಟ್ಸ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಎಲ್ಲದರ ಬೆಲೆಯೂ ಶೇ. 30-40ರಷ್ಟು ಏರಿಕೆಯಾಗಿದ್ದು, ಪೋಷಕರು ಪರಿತಪಿಸುವಂತಾಗುತ್ತಿದೆ.
ಇದನ್ನೂ ಓದಿ: Kichcha Sudeepa: ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್
ಕಳೆದ ಒಂದು ತಿಂಗಳ ಹಿಂದೆಯೇ ಶೈಕ್ಷಣಿಕ ಚಟುವಟಿಕೆ ನಿರ್ವಹಣೆ ಹಾಗೂ ಇನ್ನಿತರ ಕಾರಣಗಳ ನೆಪವೊಡ್ಡಿ, ಶೇ.20-30ರಷ್ಟು ಶಾಲಾ ಪ್ರವೇಶ ಶುಲ್ಕವನ್ನು ಖಾಸಗಿ ಶಾಲಾ ಒಕ್ಕೂಟಗಳು ಏರಿಕೆ ಮಾಡಿತ್ತು. ಆದರೆ, ಈಗ ಮಕ್ಕಳ ನೋಟ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಬೆಲೆ ಸಹ ಹೆಚ್ಚಾಗಿರುವುದು ಪೋಷಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಿಎಸ್‌ಟಿ ಹೊರೆ, ತೈಲ ದರ ಏರಿಕೆ
ಒಂದೊಂದು ಮಗುವಿಗೆ ಹತ್ತರಿಂದ ಹದಿನೈದು ನೋಟ್ ಬುಕ್, ವರ್ಕ್ ಬುಕ್ ಅವಶ್ಯಕತೆ ಎದುರಾಗುತ್ತದೆ. ಆದರೆ, ಈಗ ಮಾರುಕಟ್ಟೆಯಲ್ಲಿ ದರ ಏರಿಕೆ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಪಾಲ್ ಬುಕ್ ಸ್ಟೋರ್ಸ್ ಮಾಲೀಕ ಭವಾನಿ ಸಿಂಗ್, ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಹೊರೆ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ, ತಯಾರಕರಿಂದ ಬೆಲೆ ಹೆಚ್ಚಳ ಮತ್ತು ಕಳೆದ ಒಂದು ವರ್ಷದಿಂದ ನಿರಂತರವಾಗಿ ಉಕ್ರೇನ್ ರಷ್ಯಾ ವಾರ್ ಹಿನ್ನೆಲೆಯಲ್ಲಿ ಪೇಪರ್ ಬೇಡಿಕೆ ಸಾಕಷ್ಟು ಎದುರಾಗಿದೆ. ಹೀಗಾಗಿ ಅನಿರ್ವಾಯವಾಗಿ ಬುಕ್‌ಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Water Crisis: ಪಂಪಿಂಗ್ ಸ್ಟೇಷನ್‌ಗಳಲ್ಲಿ ವಿದ್ಯುತ್ ಅಡಚಣೆ; ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ
ಸದ್ಯ ಬೆಲೆ ಏರಿಕೆ ಆದರೂ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದು ಪೋಷಕರಿಗಂತೂ ಅನಿವಾರ್ಯ ಆಗಿದೆ. ಮಕ್ಕಳ ಓದು ಬರಹದಲ್ಲಿ ಯಾರೂ ಕಾಂಪ್ರಮೈಸ್ ಆಗುವುದಿಲ್ಲ. ಒಟ್ಟಿನಲ್ಲಿ ಪೋಷಕರಿಗೆ ಶಾಲೆಗಳ ಆರಂಭಕ್ಕೂ ಮೊದಲೇ ಈ ವರ್ಷ ಒಂದರ ಮೇಲೊಂದು ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಇದರ ಮಧ್ಯೆ ಖಾಸಗಿ ಶಾಲೆಗಳು ಶುಲ್ಕ ಏರಿಕೆ ಜತೆಗೆ ಪಠ್ಯ ಪುಸ್ತಕ, ನೋಟ್ಸ್ ಖರೀದಿಯನ್ನು ಶಾಲೆಯಲ್ಲಿಯೇ ಮಾಡುವಂತೆ ಡಿಮ್ಯಾಂಡ್ ಮಾಡುತ್ತಿರುವುದು ಪೋಷಕರ ಸಂಕಷ್ಟಕ್ಕೆ ಕಾರಣವಾಗಿದೆ.