ಬೆಂಗಳೂರು: ಇಲ್ಲಿನ ತುರಹಳ್ಳಿ ಅರಣ್ಯಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದೆ. 4 ದಿನಗಳು ಕಳೆದರೂ ಅವುಗಳನ್ನು ಪತ್ತೆ ಮಾಡಿ ಹಿಡಿಯಲು ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಇಂದೂ ಕೂಡ ಚಿರತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕಗ್ಗಲೀಪುರ ವಲಯದ RFO ನೇತೃತ್ವದಲ್ಲಿ, ಮೂರು ತಂಡಗಳನ್ನು ಮಾಡಿಕೊಂಡು ಚಿರತೆಗಾಗಿ ಶೋಧ ನಡೆಸಲಾಗುತ್ತಿದೆ. ಎಲ್ಲೆಲ್ಲಿ ಹೆಜ್ಜೆ ಗುರುತುಗಳಿವೆಯೋ, ಅಲ್ಲೆಲ್ಲ ಹುಡುಕಾಟ ನಡೆಸಲಾಗುತ್ತಿದೆ. ಚಿರತೆ ಸುಳಿವು ಇರುವ ಕಡೆಗಳಲ್ಲೆಲ್ಲ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯೆಲ್ಲ ಗಸ್ತು ತಿರುಗುತ್ತಿದ್ದಾರೆ.
ಇನ್ನು ರಾಜಧಾನಿ ಸಮೀಪದ ಅರಣ್ಯ ಪ್ರದೇಶಗಳಲ್ಲಿ ಜನರು ಅನಗತ್ಯವಾಗಿ ಓಡಾಡದಂತೆ ಎಚ್ಚರಿಕೆ ನೀಡಿದ್ದಾರೆ. ಜೀಪ್ನಲ್ಲಿ ಸಂಚರಿಸುತ್ತ, ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ. ಚಿರತೆಗಳು ಎಲ್ಲಿ ಹೋಗಿವೆ ಎಂಬುದೂ ಗೊತ್ತಾಗುತ್ತಿಲ್ಲದ ಕಾರಣ, ಆತಂಕ ಮುಂದುವರಿದಿದೆ.
ಇದನ್ನೂ ಓದಿ: Leopard attack | ಓಂಕಾರ ಹಿಲ್ಸ್ ಹಿಂಭಾಗದಲ್ಲಿರುವ ಜಾಗ ನಟ ರಕ್ಷಿತ್ ಶೆಟ್ಟಿಗೆ ಸೇರಿದ್ದು; ಚಿರತೆ ಸೆರೆ ಕಾರ್ಯಕ್ಕೆ ಚುರುಕು