ಬೆಂಗಳೂರು: ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರ ಹೊಸ ಪುಸ್ತಕ ‘ಸ್ಟ್ರೇಂಜ್ ಬರ್ಡನ್ಸ್ – ದಿ ಪಾಲಿಟಿಕ್ಸ್ ಆ್ಯಂಡ್ ಪ್ರೆಡಿಕಮೆಂಟ್ಸ್ ಆಫ್ ರಾಹುಲ್ ಗಾಂಧಿ’ (Strange Burdens- The Politics and Predicaments of Rahul Gandhi) ಸೆಪ್ಟೆಂಬರ್ 12ರಂದು ಬೆಂಗಳೂರಿನಲ್ಲಿ (Book Release) ಬಿಡುಗಡೆಯಾಗಲಿದೆ. ಪೆಂಗ್ವಿನ್ ರ್ಯಾಂಡಮ್ ಹೌಸ್ ಪ್ರಕಟಿಸಿರುವ ಈ ಕೃತಿಯು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಆಡಿಟೋರಿಯಮ್ನಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ.
ಬರಹಗಾರ ಹಾಗೂ ಹೋರಾಟಗಾರ ಪ್ರೊಫೆಸರ್ ಜಿ ಎನ್ ದೇವಿ, ಇತಿಹಾಸಕಾರ ಹಾಗೂ ಮನಶಾಸ್ತ್ರಜ್ಞ ಡಾ. ಸಂಜೀವ್ ಜೈನ್, ನಟಿ ಹಾಗೂ ಸಾಹಿತಿ ಪದ್ಮಾವತಿ ರಾವ್, ಮಾಜಿ ಐಎಎಸ್ ಅಧಿಕಾರಿ ಹಾಗೂ ಬರಹಗಾರ ಚಿರಂಜೀವಿ ಸಿಂಘ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಪೆಂಗ್ವಿನ್ ವೆಬ್ಸೈಟ್ನಲ್ಲಿ ನೀಡಿದ ವಿವರಣೆಯ ಸಂಕ್ಷಿಪ್ತ ರೂಪ ಇಲ್ಲಿದೆ
“ಸ್ಟ್ರೇಂಜ್ ಬರ್ಡನ್ಸ್ʼ ಇದು ಜೀವನ ಚರಿತ್ರೆಯಲ್ಲ. ರಾಜಕೀಯ ವ್ಯಾಖ್ಯಾನದ ಪುಸ್ತಕ. ಮಾರ್ಚ್ 2004ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದ ರಾಹುಲ್ ಗಾಂಧಿ ಅವರ ಆಲೋಚನೆಗಳು ಮತ್ತು ನಾಯಕತ್ವವನ್ನು ಕೃತಿಯು ವಿಶ್ಲೇಷಿಸುತ್ತದೆ. ಇದು 2023ರ ಜನವರಿ 30ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಮುಕ್ತಾಯದವರೆಗೂ ಇದು ಸಾಗುತ್ತದೆ. ರಾಹುಲ್ ಗಾಂಧಿ ಅವರ ಹಲವು ಸಂದಿಗ್ಧತೆಯನ್ನು ಸೆರೆ ಹಿಡಿಯುತ್ತದೆ. ಒಂದೆರಡು ತಿಂಗಳ ಅನರ್ಹತೆ ವಿಚಾರವೂ ಇದೆ.
ಇದನ್ನೂ ಓದಿ : Book Release : ಗೋವಾ ರಾಜ್ಯಪಾಲರ ಅನುವಾದಿತ ‘ಗಿಳಿಯು ಬಾರದೇ ಇರದು’ ಕೃತಿ ಸೆ. 10ರಂದು ಬಿಡುಗಡೆ
ರಾಹುಲ್ ಗಾಂಧಿಯವರ ರಾಜಕೀಯ ಮತ್ತು ಬಿಕ್ಕಟ್ಟುಗಳು, ಗೊಂದಲಗಳು ಮತ್ತು ವಿರೋಧಾಭಾಸಗಳು, ತುಂಟತನ ಮತ್ತು ಗೆಲುವು, ಜೊತೆಗೆ ಅವರ ಸೌಮ್ಯತೆಯನ್ನು ಅರ್ಥಮಾಡಿಕೊಳ್ಳುವ ನಿರೂಪಣೆಗಳು ಪುಸ್ತಕದಲ್ಲಿವೆ. ಪುಸ್ತಕವು ಸಾರ್ವಜನಿಕವಾಗಿ ಅವರ ಸೂಕ್ತತೆ ಅಥವಾ ಸೂಕ್ತವಲ್ಲದ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವುದಿಲ್ಲ. ಆದರೆ ಅವರು ಇತಿಹಾಸದ ಪ್ರವಾಹಗಳಲ್ಲಿ ಹೇಗೆ ಸಿಕ್ಕಿಬಿದ್ದಿದ್ದಾರೆ ಎಂಬುದನ್ನು ಕೇಂದ್ರೀಕರಿಸಿದೆ. ಇದು ಮಿಥ್ಯೆಯನ್ನು ಮುರಿಯುವ ಅಥವಾ ಮಿಥ್ಯೆಯನ್ನು ಸೃಷ್ಟಿಸುವ ಪ್ರಯತ್ನವಲ್ಲ, ಬದಲಾಗಿ ರಾಜಕೀಯ ಒಳನೋಟದ ಅನ್ವೇಷಣೆಯಾಗಿದೆ.
ಈ ಪುಸ್ತಕವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಇದೆ. ಹಾಗೆಂದು ಇದು ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಕುರಿತಾಗಿಲ್ಲ. ಈ ಪುಸ್ತಕವು ಇಬ್ಬರು ವ್ಯಕ್ತಿಗಳು ಮತ್ತು ಅವರು ಪ್ರತಿನಿಧಿಸುವ ಎರಡು ಪಕ್ಷಗಳ ವೈರುಧ್ಯಗಳು ಮತ್ತು ಒಮ್ಮತದ ಕುರಿತಾಗಿವೆ.