Site icon Vistara News

Karnataka Weather: ರಾಜ್ಯದ ಅಲ್ಲಲ್ಲಿ ಭಯಂಕರ ಚಳಿ; ಕನಿಷ್ಠ ತಾಪಮಾನ ಇನ್ನೂ 4 ಡಿಗ್ರಿ ಸೆಲ್ಸಿಯಸ್‌ ಕುಸಿತ?

Karnataka Weather in Bangalore

ಬೆಂಗಳೂರು: ಮುಂದಿನ 48 ಗಂಟೆ (ಗುರುವಾರ ಮತ್ತು ಶುಕ್ರವಾರ) ರಾಜ್ಯದ ಹಲವು ಕಡೆ ಭಾರಿ ಪ್ರಮಾಣದಲ್ಲಿ ಚಳಿ ಬೀಳಲಿದೆ. ಈಗಿರುವ ಕನಿಷ್ಠ ತಾಪಮಾನಕ್ಕಿಂತ ಕನಿಷ್ಠ 4 ಡಿಗ್ರಿ ಸೆಲ್ಸಿಯಸ್‌ಗಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು, ಉತ್ತರ ಒಳನಾಡಿನಲ್ಲಿ ಎಲ್ಲ ಕಡೆ ಒಣ ಹವೆಯ ಜತೆಗೆ ಚಳಿಯೂ ಭರ್ಜರಿ ಇರಲಿದೆ.

ಇನ್ನು ಜನವರಿ 26ಕ್ಕೆ ಗಣರಾಜ್ಯೋತ್ಸವ ರಜೆ ಇದೆ. ಹೀಗಾಗಿ ಮಲೆನಾಡಿನ ಪ್ರದೇಶಗಳು ಸೇರಿದಂತೆ ಕೆಲವು ಕಡೆ ಟ್ರಿಪ್‌ ಹೋಗುತ್ತೇವೆ ಎಂದು ಪ್ಲಾನ್‌ ಹಾಕಿಕೊಂಡಿದ್ದರೆ ಸೂಕ್ತ ತಯಾರಿ ಮಾಡಿಕೊಳ್ಳುವುದು ಒಳಿತು. ಏಕೆಂದರೆ ಆ ಪ್ರದೇಶಗಳಲಿ ತುಂಬಾ ಚಳಿ ಇದೆ!

ಬಿಸಿಲಿನ ಹೊಡೆತವೂ ಇರಲಿದೆ!

ಚಳಿಯಂದ ಮಾತ್ರ ಬಿಸಿಲು ಇಲ್ಲವೇ ಎಂದು ಅಂದುಕೊಳ್ಳುವುದೇ ಬೇಡ. ಬಿಸಿಲು ಸಹ ಇರಲಿದೆ. ದಕ್ಷಿಣ, ಉತ್ತರ ಒಳನಾಡುಗಳು ಸೇರಿದಂತೆ ಕರಾವಳಿ ಪ್ರದೇಶಗಳ ಕೆಲವು ಕಡೆ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳ ಕಾಣಲಿದೆ. ಹೀಗಾಗಿ ಒಂದೇ ದಿನಗಳಲ್ಲಿ ಎರಡೆರಡು ರೀತಿಯ ಹವಾಮಾನವನ್ನು ನಾಗರಿಕರು ನೋಡಬೇಕಾಗಿದೆ.

ಇದನ್ನೂ ಓದಿ: Star Fashion: ಬೆಂಗಳೂರಿನ ಚುಮು ಚುಮು ಚಳಿಗೆ ಬದಲಾಯಿತು ನಟ ಶೈನ್‌ ಶೆಟ್ಟಿ ವಿಂಟರ್‌ ಫ್ಯಾಷನ್‌!

ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ಭಯಂಕರ ಚಳಿ

ದಕ್ಷಿಣ ಒಳನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಕೆಲವು ಕಡೆ ಮುಂಜಾನೆ ದಟ್ಟ ಮಂಜು ಆವರಿಸಿರಲಿದೆ. ಅಲ್ಲದೆ, ಚಿಕ್ಕಮಗಳೂರಿನಲ್ಲಿ ಇನ್ನೆರಡು ದಿನ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಅದೇ ಶನಿವಾರ ಮತ್ತು ಭಾನುವಾರ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. ಹೀಗಾಗಿ ಈ ಭಾಗದಲ್ಲಿ ಚಳಿ ಭಯಂಕರವಾಗಿ ಕಾಡಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ತುಮಕೂರು, ವಿಜಯನಗರದಲ್ಲಿ ಒಣಹವೆ ಇರಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಹಾಗೂ ಉಡುಪಿಯಲ್ಲೂ ಚಳಿ ಪ್ರಮಾಣ ಕಡಿಮೆ ಇದ್ದು, ಬೆಳಗ್ಗೆ ಬಿಸಿಲಿನ ತೀವ್ರತೆ ಇರಲಿದೆ.

ಉತ್ತರ ಒಳನಾಡಿನಲ್ಲಿ ಒಣ ಹವೆ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ ಹಾಗೂ ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣ ಹವೆ ಮುಂದುವರಿಯಲಿದೆ. ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಬೆಂಗಳೂರಲ್ಲಿ ಚಳಿ ಚಳಿ

ಬೆಂಗಳೂರಲ್ಲಿ ಗುರುವಾರ ಹಾಗೂ ಶುಕ್ರವಾರ ಚಳಿಯ ವಾತಾವರಣ ತುಸು ಹೆಚ್ಚೇ ಇರಲಿದೆ. ರಾತ್ರಿಯಾಗುತ್ತಿದ್ದಂತೆ ಶುರುವಾಗುವ ಚಳಿ ಗಾಳಿಯು ಮುಂಜಾನೆವರೆಗೂ ಬೀಸುತ್ತದೆ. ಅಲ್ಲದೆ, ಕೆಲವು ಕಡೆ ಬೆಳಗಿನ ಜಾವದವರೆಗೆ ಮಂಜಿನಿಂದ ಕೂಡಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Ear Pain During Winter: ಚಳಿಗೆ ಕಿವಿನೋವೇ? ಇಲ್ಲಿ ಕೇಳಿ!

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 30 ಡಿ.ಸೆ -17 ಡಿ.ಸೆ
ಮಂಗಳೂರು: 32 ಡಿ.ಸೆ – 21 ಡಿ.ಸೆ
ಚಿತ್ರದುರ್ಗ: 33 ಡಿ.ಸೆ – 17 ಡಿ.ಸೆ
ಗದಗ: 32 ಡಿ.ಸೆ – 15 ಡಿ.ಸೆ
ಹೊನ್ನಾವರ: 31 ಡಿ.ಸೆ- 18 ಡಿ.ಸೆ
ಕಲಬುರಗಿ: 33 ಡಿ.ಸೆ – 20 ಡಿ.ಸೆ
ಬೆಳಗಾವಿ: 31 ಡಿ.ಸೆ – 10 ಡಿ.ಸೆ
ಕಾರವಾರ: 33 ಡಿ.ಸೆ – 18 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version