Site icon Vistara News

ಭೀಮಾನದಿಗೆ ಸೇರುತ್ತಿದೆ ಕೊಳಚೆ ನೀರು; ಯಾದಗಿರಿ ನಗರಸಭೆ ನಿರ್ಲಕ್ಷ್ಯಕ್ಕೆ ಜೀವಜಲಕ್ಕೂ ಕುತ್ತು

ಭೀಮಾನದಿಗೆ

ವಿಶ್ವಕುಮಾರ್‌, ಯಾದಗಿರಿ
ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಹರಿಸುತ್ತಿರುವುದರಿಂದ ಭೀಮಾ ನದಿ ಕಲುಷಿತವಾಗುತ್ತಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರಕ್ಕೆ ಸರಬರಾಜು ಆಗುವ ಕುಡಿಯುವ ನೀರು ಕುಲುಷಿತವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಯಾದಗಿರಿ ನಗರಕ್ಕೆ ಹತ್ತಿರವಾಗಿಯೇ ಭೀಮಾನದಿ‌ಹರಿಯುತ್ತದೆ. ಚರಂಡಿ ನೀರು ಶುದ್ಧೀಕರಿಸಿ ಬಳಿಕ ನದಿಗೆ ಬಿಡಬೇಕಾಗುತ್ತದೆ. ಆದರೆ ಈ‌ ನಿಯಮ ಗೊತ್ತಿದ್ದರೂ ನಗರಸಭೆ ಅಧಿಕಾರಿಗಳು ಚರಂಡಿ ನೀರು ನೇರವಾಗಿ ಭೀಮಾನದಿಗೆ ಸೇರುವಂತೆ ಮಾಡಿದ್ದಾರೆ.

ನಗರಸಭೆ ಕಚೇರಿ ಹಿಂಭಾಗದಲ್ಲಿ ಹಳ್ಳ ಹರಿಯುತ್ತಿದ್ದು, ಇದಕ್ಕೆ ಚರಂಡಿ ನೀರು ಬಂದು ಸೇರುತ್ತದೆ. ಬಳಿಕ ನಗರದ ಹೊರಭಾಗದ ಡಾನ್ ಬಾಸ್ಕೋ ಶಾಲೆಯ ಸಮೀಪದ ಹಳ್ಳಕ್ಕೆ ಚರಂಡಿ ನೀರು ಹರಿ ಬಿಡಲಾಗುತ್ತಿದೆ. ಇದರಿಂದಾಗಿ ಕಲುಷಿತ ನೀರು ನೇರವಾಗಿ ಭೀಮಾನದಿಗೆ ಸೇರುತ್ತಿದೆ. ಇನ್ನು ಇದೆ ಭೀಮನದಿ ನೀರು ಯಾದಗಿರಿ ನಗರದ ಜನತೆಗೆ ಕುಡಿಯಲು ಸರಬರಾಜು ಆಗುತ್ತಿರುವುದರಿದ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ.

ಇದನ್ನೂ ಓದಿ | ಅಂಗಳದಲ್ಲೇ ಉದ್ಯಾನ| ಬರೀ 60×80 ಸೈಟಲ್ಲಿ ಮನೆ, ಹೈನುಗಾರಿಕೆ, ಹಣ್ಣಿನ ತೋಟ, ವರ್ಷವಿಡೀ ಬಗೆ ಬಗೆಯ ಫ್ರುಟ್ಸ್‌!

ಚರಂಡಿ ನೀರು ನೇರವಾಗಿ‌ ನದಿಗಳಿಗೆ ಬಿಡಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಆದರೂ ಯಾದಗಿರಿ ನಗರಸಭೆ ಅಧಿಕಾರಿಗಳು ಚರಂಡಿ ನೀರು ನೇರವಾಗಿ ಭೀಮಾ ನದಿಗೆ ಸೇರುವಂತೆ ಮಾಡಿದ್ದಾರೆ. ಯಾದಗಿರಿ‌ ಜನತೆಯ ಜೀವನಾಡಿಯಾಗಿರೋ ಭೀಮೆ ನೀರು ನಗರದ ಕೂಗಳತೆ ದೂರದ ಹೊಸಳ್ಳಿ‌ ಕ್ರಾಸ್ ಬಳಿ ಫಿಲ್ಟರ್ ಬೆಡ್‌ಗೆ ಬಂದು ಸೇರುತ್ತೆ. ಬಳಿಕ ಅಲ್ಲಿ ನೀರು ಶುದ್ಧೀಕರಣಗೊಂಡ ಮೇಲೆ ಅಧಿಕಾರಿಗಳು ನೀರನ್ನು ಪರೀಕ್ಷಿಸಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ.

ಆದರೆ ಇಲ್ಲಿ ನದಿ‌ನೀರು ಹೇಗೆ ಬರುತ್ತದೆ ಅದೇ ರೀತಿಯಾಗಿಯೇ ನಗರದಲ್ಲಿ ನೀರು ಸರಬರಾಜು ಆಗುವಂತೆ ಕಾಣುತ್ತಿದೆ. ನಗರದಲ್ಲಿ‌ ಸರಬರಾಜಾಗುತ್ತಿರುವ ನೀರಿನಲ್ಲಿ ಸಾಕಷ್ಟು ರಾಡಿ ಮಿಶ್ರಿತವಾಗಿ ಬರುತ್ತಿದೆ. ಅಷ್ಟೇ ಅಲ್ಲಾ, ನೀರಿನಲ್ಲಿ ಸಣ್ಣ ಸಣ್ಣ ಹುಳುಗಳು ಸಹ ಬರುತ್ತಿವೆ. ಇದರಿಂದಾಗಿ ಜನರು ಆತಂಕ ಪಡುವಂತಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ ಇದೆ ಯಾದಗಿರಿ ಜಿಲ್ಲೆಯವರು. ಆದರೂ ಇದರ ಬಗ್ಗೆ ಮಾತ್ರ ನಿಷ್ಕಾಳಜಿ ತೋರುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿವೆ. ಅಷ್ಟೆ ಅಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಸಹ ಜಿಲ್ಲೆಗೆ ತಿಂಗಳಿಗೆ ಒಮ್ಮೆ ಎನ್ನುವಂತೆ ಬಂದು ಹೋಗುತ್ತಿದ್ದಾರೆ, ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎನ್ನುವ ಗಂಭೀರ ಆರೋಪ ಸಹ ಕೇಳಿ ಬಂದಿವೆ. ಇನ್ನಾದರೂ ಚರಂಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಒಳಚರಂಡಿ ಕಾಮಗಾರಿಗಾಗಿ 15ನೇ ಹಣಕಾಸು ಯೋಜನೆಯಲ್ಲಿ 80 ಲಕ್ಷ ರೂಪಾಯಿ ಮೀಸಲಿಟ್ಟಿದ್ದೇವೆ. ಒಳಚರಂಡಿ ಕಾಮಗಾರಿ ಬಳಿಕ ಚರಂಡಿ‌ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಚಿಂತನೆ ಮಾಡಲಾಗಿದೆ. ನಗರದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಪ್ರತಿದಿನ ನೀರು ಪರಿಶೀಲನೆ ಮಾಡಿ, ಶುದ್ಧೀಕರಣ ಮಾಡಲಾಗುತ್ತದೆ. ಸಾರ್ವಜನಿಕರು ಇದೇ ನೀರನ್ನು ಕುಡಿಯುತ್ತಿದ್ದಾರೆ, ಯಾವುದೇ ಸಮಸ್ಯೆಯಾಗಿಲ್ಲ.
-ಸುರೇಶ್ ಅಂಬಿಗರ, ನಗರಸಭೆ ಅಧ್ಯಕ್ಷ

ನಗರದಲ್ಲಿನ ಚರಂಡಿ ನೀರು ಭೀಮಾನದಿಗೆ ನೇರವಾಗಿ ಬಿಡುತ್ತಿದ್ದಾರೆ. ನದಿ‌ ನೀರು ಕಲುಷಿತವಾದರೆ ಜಲಚರ, ಆ ನೀರು ಕುಡಿಯುವ ಜನ, ಜಾನುವಾರುಗಳ ಜೀವಕ್ಕೆ ಕಂಟಕವಾಗುತ್ತದೆ. ಚರಂಡಿ‌ನೀರು ಶುದ್ಧೀಕರಣ ಘಟಕ ಇಲ್ಲದಿರುವುದರಿಂದ ನೇರವಾಗಿ ಬೀಡಲಾಗುತ್ತಿದೆ. ಇದರಿಂದ ನದಿ ನೀರು ಕಲುಷಿತವಾಗುತ್ತಿದ್ದು, ಹುಳ, ರಾಡಿ ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತದೆ.
-ಲಿಂಗಪ್ಪ, ಜಾಲಗಾರ

ಇದನ್ನೂ ಓದಿ | ವರುಣಾರ್ಭಟಕ್ಕೆ ದೇವರೂ ತತ್ತರ: ಚೌತಿ ಹಬ್ಬಕ್ಕೆ ಮುನ್ನವೇ ನೀರಲ್ಲಿ ಕರಗಿ ಹೋದವು ಗಣೇಶ ಮೂರ್ತಿಗಳು!

Exit mobile version