Site icon Vistara News

Shanimahathma Temple: ಚಿಕ್ಕ ಮಧುರೆಯಲ್ಲಿ ಅದ್ಧೂರಿ ಶನಿಮಹಾತ್ಮ ಬ್ರಹ್ಮರಥೋತ್ಸವ; ಹರಿದುಬಂದ ಭಕ್ತಸಾಗರ

Chikka Madhure Shani Mahatma Brahma Rathotsava

ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕ ಮಧುರೆಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ 69ನೇ ವರ್ಷದ ಇತಿಹಾಸ ಪ್ರಸಿದ್ಧ ಶನಿಮಹಾತ್ಮ ಬ್ರಹ್ಮರಥೋತ್ಸವವು (Shanimahathma Temple) ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು, ರಥಕ್ಕೆ ಭಕ್ತಿಯಿಂದ ಹೂವು, ಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಮಾಡಿದರು.

ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಹಮ್ಮಿಕೊಳ್ಳಲಾಗಿತ್ತು. ಶನಿಮಹಾತ್ಮನಿಗೆ ಪೂರ್ಣಕುಂಭ ಕಳಸದೊಂದಿಗೆ ಪೂಜಾ ಕಾರ್ಯ ನಡೆಸಲಾಯಿತು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವ ಹಿನ್ನೆಲೆಯಲ್ಲಿ ಭಕ್ತರಿಗೆ ಮುದ್ದೆ, ಕಾಳು ಸಾರು, ಪಾಯಸದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ | ತತ್ತ್ವ ಶಂಕರ: ಭವತಿ ಭಿಕ್ಷಾಂ ದೇಹಿ ಎಂದು ಹೊರಟ ಶಂಕರ ಮಾಡಿದ್ದೇನು?

ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ಇಂದಿನಿಂದ ಹೆಚ್ಚುವರಿ ವಿಶೇಷ ಬಸ್

ಕಾರವಾರ: ಶಿರಸಿಯಲ್ಲಿ ಮಾರ್ಚ್ 19ರಿಂದ (ಇಂದಿನಿಂದ) ಮಾ.27ರವರೆಗೆ ಜರುಗುವ ಶ್ರೀ ಮಾರಿಕಾಂಬಾ ದೇವಿ (Sri Marikamba Devi) ಜಾತ್ರೆಯ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ವಾ.ಕ.ರ.ಸಾ. ಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಹೆಚ್ಚುವರಿ ವಿಶೇಷ ಬಸ್‌ಗಳು ಕಾರ್ಯಾಚರಣೆ (Uttara Kannada News) ನಡೆಸಲಿವೆ ಎಂದು ಶಿರಸಿ ಉಪ ವಿಭಾಗದ ವಾ.ಕ.ರ.ಸಾ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶಿರಸಿ ಹಳೆ ಬಸ್ ನಿಲ್ದಾಣದ ಸುತ್ತಮುತ್ತ ಜಾತ್ರಾ ಅಂಗಡಿ-ಮುಂಗಟ್ಟು ಹಾಕುವುದರಿಂದ ಬಸ್ ಸಂಚಾರಕ್ಕೆ ತೊಂದರೆಯಾಗಲಿದ್ದು, ಹಳೆ ಬಸ್ ನಿಲ್ದಾಣದ ಸಾರಿಗೆ ಕಾರ್ಯಾಚರಣೆಗಳನ್ನು ಹೊಸ ಬಸ್ ನಿಲ್ದಾಣದಿಂದ ಮಾಡಲಾಗುವುದು. ಶ್ರೀ ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತಾದಿಗಳಿಗೆ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲು ಹೆಚ್ಚುವರಿಯಾಗಿ ಶಿರಸಿಯಿಂದ ಹಾನಗಲ್, ಹಾವೇರಿ, ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ, ಯಲ್ಲಾಪುರ, ದಾಂಡೇಲಿ, ಅಂಕೋಲಾ, ಕಾರವಾರ ಮತ್ತು ಪ್ರಮುಖ ಊರುಗಳಿಗೆ ವಿಶೇಷ ಸಾರಿಗೆ ಸೌಲಭ್ಯವಿದೆ.

ಜಾತ್ರೆಯ ದಿನಗಳಲ್ಲಿ ಹಾನಗಲ್, ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಸಾರಿಗೆ ಬಸ್‌ಗಳು ಶಿರಸಿ ಹೊಸ ಬಸ್ ನಿಲ್ದಾಣದಿಂದ ಅಶ್ವಿನಿ ಸರ್ಕಲ್- ಮಾಸ್ತಿಕಟ್ಟಾ ಸರ್ಕಲ್ -ಎಪಿಎಂಸಿ- ಶಿರಸಿ ಘಟಕ-ವಿವೇಕಾನಂದ ಕ್ರಾಸ-ಚಿಪಗಿ ಸರ್ಕಲ್ ಮಾರ್ಗವಾಗಿ ಸಂಚರಿಸಲಿವೆ. ಶಿರಸಿ ಮಾರಿಕಾಂಬಾ ದೇವಸ್ಥಾನದ ಮುಂದಿನ ರಸ್ತೆಯನ್ನು ಬಸ್ ಸಂಚಾರಕ್ಕೆ ನಿಷೇಧಿಸಿರುವುದರಿಂದ ಬನವಾಸಿ ಮಾರ್ಗದ ಸಾರಿಗೆಗಳನ್ನು ರಾಮನಬೈಲ್ ಕ್ರಾಸ್‌ನಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಬಸ್‌ಗಳು ಶಿರಸಿ ಹೊಸ ಬಸ್ ನಿಲ್ದಾಣದಿಂದ ಪದ್ಮಶ್ರೀ ಸರ್ಕಲ್, ಹನುಮಾನ ವ್ಯಾಯಾಮ ಶಾಲೆ, ಐದು ರಸ್ತೆ ಸರ್ಕಲ್ ಮುಖಾಂತರ ಸಂಚರಿಸುತ್ತವೆ. ಪ್ರಯಾಣಿಕರು ಶಿರಸಿ ಹೊಸ ಬಸ್ ನಿಲ್ದಾಣ ಅಥವಾ ಹನುಮಾನ ವ್ಯಾಯಾಮ ಶಾಲೆ ಆವರಣ ಬಸ್ ತಂಗುದಾಣದಿಂದ ಪ್ರಯಾಣಿಸಬಹುದಾಗಿದೆ. ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಭಾಗದಿಂದ ಶಿರಸಿಗೆ ಬರುವ ಪ್ರಯಾಣಿಕರು ರಾಯಪ್ಪಾ ಹುಲೇಕಲ್ ಶಾಲಾ ತಂಗುದಾಣಕ್ಕೆ ಅಥವಾ ಹೊಸ ಬಸ್ ನಿಲ್ದಾಣದಲ್ಲಿ ಇಳಿಯಬಹುದಾಗಿದೆ.

ಇದನ್ನೂ ಓದಿ | ತಾತಯ್ಯ ತತ್ವಾಮೃತಂ ಅಂಕಣ: ಶ್ರೀರಾಮಭಜನೆ ಭವರೋಗಕ್ಕೆ ಔಷಧಿ

ಅಶ್ವಿನಿ ವೃತ್ತ, ರಾಮನಬೈಲ್ ಕ್ರಾಸ್‌, ಎಪಿಎಂಸಿ ಕ್ರಾಸ್ (ಹುಬ್ಬಳ್ಳಿ ರಸ್ತೆ) ಹನುಮಾನ ವ್ಯಾಯಾಮ ಶಾಲೆ ಆವರಣ ಮತ್ತು ರಾಯಪ್ಪಾ ಹುಲೇಕಲ್ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ತಂದುದಾಣಗಳನ್ನು ನಿರ್ಮಿಸಲಾಗಿದೆ. ಈ ವ್ಯವಸ್ಥೆಯು ಹಳೆ ಬಸ್ ನಿಲ್ದಾಣದ ಜಾಗವನ್ನು ಖುಲ್ಲಾಪಡಿಸುವವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.

ಸಾರಿಗೆ ವ್ಯವಸ್ಥೆಗಳ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760991725, 7760991702, 7760991713, 9980430323, 7795984168 ಮತ್ತು 08344-229952 ನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Exit mobile version