Site icon Vistara News

ಮುರುಘಾಶ್ರೀ ಪ್ರಕರಣ | ಶ್ರೀಗಳ ಕೇಸ್‌ ತೆಗೆದುಕೊಂಡ ವಕೀಲ ಶಂಕರಪ್ಪ ಸಿಪಿಐ(ಎಂ)ನಿಂದ ಉಚ್ಚಾಟನೆ!

murugha mutt

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಮುರುಘಾ ಮಠದ ಶ್ರೀಗಳ ಪರ ವಾದ ಮಂಡಿಸಲು ಕೇಸ್‌ ತೆಗೆದುಕೊಂಡ ಕಾರಣ ವಕೀಲ ಶಂಕರಪ್ಪ ಅವರನ್ನು ಸಿಪಿಐ(ಎಂ) ಉಚ್ಚಾಟಿಸಿದೆ. ಶಂಕರಪ್ಪ ಅವರು ಪಕ್ಷದ ಸದಸ್ಯರಾದ ಕಾರಣ ಅವರನ್ನು ಉಚ್ಚಾಟನೆಗೊಳಿಸಿದೆ.

“ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯದ ಎಸಗಿದ ಆರೋಪಿಯ ಪರವಾಗಿ ಕೇಸ್‌ ತೆಗೆದುಕೊಂಡ ಹಿನ್ನೆಲೆಯಲ್ಲಿ ಶಂಕರಪ್ಪ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಪಕ್ಷದ ನಿಲುವು ಹಾಗೂ ಧೋರಣೆಗಳ ವಿರುದ್ಧವಾಗಿ ನಡೆದುಕೊಂಡ ಕಾರಣ ಉಚ್ಚಾಟಿಸಲಾಗಿದೆ” ಎಂದು ಸಿಪಿಐ (ಎಂ) ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.

Exit mobile version