ಬೆಂಗಳೂರು: ಬೇಗೂರು ಬೆಂಗಾಲಿ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ವಿಜಯದಶಮಿ ಪ್ರಯುಕ್ತ ‘ಶರದ್ ಉತ್ಸವ-2022’ ಕಾರ್ಯಕ್ರಮವನ್ನು ಅಕ್ಷಯ ನಗರದ ಡಿಎಲ್ಎಫ್ ನ್ಯೂಟೌನ್ ನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 5ರವರೆಗೆ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ. ಈ ಉತ್ಸವದ ಪೂರ್ವಭಾವಿ ಸಭೆ ಇಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆಯಿತು.
ಶರದ್ ಉತ್ಸವ -2022ರ ನಿಮಿತ್ತ ಮಹಾಪಂಚಮಿ ಪೂಜೆ, ಮಹಾಸಸ್ತಿ, ಮಹಾ ಸಪ್ತಮಿ, ಮಹಾ ಅಸ್ತಮಿ, ಮಹಾ ನವಮಿ ಹಾಗೂ ಮಹಾ ದಶಮಿ ಪೂಜೆಗಳನ್ನ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 30 ರಂದು ಶರದ ಉತ್ಸವ ಕಾರ್ಯಕ್ರಮವನ್ನ ರಾಮಕೃಷ್ಣ ಮಿಷನ್ನ ಸ್ವಾಮಿ ಆತ್ಮವಿದಾನಂದಜಿ ಮಹಾರಾಜ್, ಸಂಸದ ತೇಜಸ್ವಿ ಸೂರ್ಯ, ನಟಿ ಪ್ರಿಯಾಂಕಾ ಉಪೇಂದ್ರ, ಶಾಸಕ ಸತೀಶ್ ರೆಡ್ಡಿ ಉದ್ಘಾಟಿಸುವರು. ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ದುರ್ಗಾದೇವಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನ ಹಮ್ಮಿಕೊಂಡಿದ್ದು, 2 ಗಂಟೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ ಉತ್ಸವದಲ್ಲಿ ಅಪಾರ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂದು ಬೇಗೂರು ಬೆಂಗಾಲಿ ಕಲ್ಚರಲ್ ಅಸೋಸಿಯೇಷನ್ನ ಸದಸ್ಯೆಯರಾದ ಶ್ವೇತಾ ಮತ್ತು ಅನುಶ್ರೀ ತಿಳಿಸಿದ್ದಾರೆ.
ಇದನ್ನೂ ಓದಿ: Navratri Colours Trend | ನವರಾತ್ರಿಯ 9 ಬಣ್ಣದ ಟ್ರೆಡಿಷನಲ್ ಔಟ್‌ಫಿಟ್ಸ್‌ಗೆ ಸಿಂಪಲ್ ಐಡಿಯಾ