Site icon Vistara News

ದೇವನಹಳ್ಳಿ ಜಿಲ್ಲಾ ಕೇಂದ್ರ ಪ್ರಸ್ತಾವನೆ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

prathibhatene

ದೊಡ್ಡಬಳ್ಳಾಪುರ: ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವುದನ್ನು ವಿರೋಧಿಸಿ ಶನಿವಾರ ದೊಡ್ಡಬಳ್ಳಾಪುರದಲ್ಲಿ ಕರಾಳ ದಿನವಾಗಿ ಆಚರಣೆ ಮಾಡಲಾಯಿತು. ವಿವಿಧ ಕನ್ನಡಪರ ಪ್ರಗತಿಪರ ಸಂಘಟನೆಳು ಇದರಲ್ಲಿ ಭಾಗಿಯಾಗಿವೆ.

ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯುತ್ತಿರುವ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮದ ಕಡೆಗೆ ಇವರು ಪ್ರತಿಭಟನಾ ಮೆರವಣಿಗೆ ಮೂಲಕ ಹೊರಟಾಗ ಪೊಲೀಸರು ತಡೆದು ಬಂಧಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವಾಗಿ ದೊಡ್ಡಬಳ್ಳಾಪುರವೇ ಇರಬೇಕು. ದೇವನಹಳ್ಳಿ ಬೇಡ ಎನ್ನುವುದು ಪ್ರತಿಭಟನಾಕಾರರ ಆಗ್ರಹ. ಹೀಗೆ ಪ್ರತಿಭಟಿಸುತ್ತಾ ಬಂದ ಅವರನ್ನು ನಗರದ ಕನ್ನಡ ಜಾಗೃತ ಭವನದ ಬಳಿ ಪೋಲೀಸರು ವಶಕ್ಕೆ ಪಡೆದರು. ಬಳಿಕ 150ಕ್ಕೂ ಹೆಚ್ಚು ಪ್ರತಿಭಟನಾ ಕಾರರನ್ನು ಮೂರು ಬಸ್ ನಲ್ಲಿ ತುಂಬಿಕೊಂಡು ಕರೆದೊಯ್ಯಲಾಯಿತು.

Exit mobile version