ಶಿಕಾರಿಪುರ: ತಾಲೂಕಿನಲ್ಲಿ ನಡೆಯುತ್ತಿರುವ ಗೋ ಹತ್ಯೆ (cow slaughter) ಹಾಗೂ ರಾಜ್ಯದ ಅಲ್ಲಲ್ಲಿ ಗೋರಕ್ಷರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಪಟ್ಟಣದಲ್ಲಿ ಸೋಮವಾರ ಶಿಕಾರಿಪುರ ಬಂದ್ (Shikaripura Bandh) ನಡೆಸಲಾಗಿದ್ದು, ಸ್ವಯಂ ಪ್ರೇರಿತವಾಗಿ ಜನರು ಬೆಂಬಲವನ್ನು ಸೂಚಿಸಿ ಯಶಸ್ವಿಗೊಳಿಸಿದ್ದಾರೆ.
ಹಿಂದು ಜಾಗರಣಾ ವೇದಿಕೆ (Hindu Jagaran Vedike) ಬಂದ್‌ಗೆ ಕರೆಕೊಟ್ಟಿದ್ದ ಹಿನ್ನೆಲೆಯಲ್ಲಿ ಸೋಮವಾರ (ಜುಲೈ 10) ಹಿಂದುಪರ ಸಂಘಟನೆಗಳು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ (Protest against Karnataka state Government) ವಿರುದ್ಧ ಆಕ್ರೋಶವನ್ನು ಹೊರಹಾಕಿದರು. ಅಂಗಡಿ-ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಮುಚ್ಚಿ ಬೆಂಬಲ ಸೂಚಿಸಿದರು.
ಇದನ್ನೂ ಓದಿ: Jain muni Murder : ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ: ಡಾ. ಜಿ. ಪರಮೇಶ್ವರ
ಮೊದಲಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಗೋವುಗಳನ್ನು ತಂದು ಅದಕ್ಕೆ ಪೂಜೆ ಮಾಡುವ ಮೂಲಕ ಗೋವು ನಮ್ಮ ಸಂಸ್ಕೃತಿಯ ಪ್ರತೀಕ ಎಂಬ ಸಂದೇಶವನ್ನು ಸಾರಲಾಯಿತು. ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬಕ್ರೀದ್ ಹಬ್ಬದ (Bakrid Festival) ಸಂದರ್ಭದಲ್ಲಿ ಗೋ ಹತ್ಯೆ ನಡೆಸಲಾಗಿದ್ದು, ಇದು ಖಂಡನೀಯ. ಅಂದು ಗೋಹತ್ಯೆ ಮಾಡದಂತೆ ಆದೇಶವನ್ನು ಹೊರಡಿಸಿದರೂ ಈ ರೀತಿಯ ಕೃತ್ಯಗಳು ನಡೆಯುತ್ತಲೇ ಇವೆ. ಇದು ನಿಜಕ್ಕೂ ಖಂಡನೀಯ. ಅಲ್ಲದೆ, ಸಂಘ ಪರಿವಾರದ ಕಾರ್ಯಕರ್ತ (Assualt on RSS Activist) ಹರೀಶ್ ಮೇಲೆ ಹಲ್ಲೆ ನಡೆಸಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣದಿಂದ, ಕಿರಣ್ ಟಾಕೀಸ್, ಅಲ್ಲಿಂದ ಸಾಂಸ್ಕೃತಿಕ ಭವನದ ತನಕ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಗೋ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Jain muni Murder : ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ: ಡಾ. ಜಿ. ಪರಮೇಶ್ವರ
ಜಾಗೃತ ನಾಗರಿಕ ವೇದಿಕೆ (Jagruta Nagarika vedike) ಪ್ರಮುಖರಾದ ಕಿರಣ್ ಶೆಟ್ಟಿ, ಸತೀಶ್ ದಾವಣಗೆರೆ, ಸದ್ಗುಣ, ಶರತ್, ದೇವರಾಜ ಮತ್ತಿತರರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.