Site icon Vistara News

Shikaripura News: ನನ್ನ ತಂದೆ ಬಂಗಾರಪ್ಪನವರು ಸಿಎಂ ಆಗಿದ್ದಾಗ ಲೂಟಿ ಹೊಡೆದಿದ್ದರು: ಮಧು ಬಂಗಾರಪ್ಪ

Madhu Bangarappa Shikaripura

#image_title

ಶಿಕಾರಿಪುರ: “ನಮ್ಮ ತಂದೆ ಮುಖ್ಯಮಂತ್ರಿ ಆದಾಗ ಲೂಟಿ ಹೊಡೆದಿದ್ದರು. ಅವರು ಲೂಟಿ ಹೊಡೆದಿದ್ದು, ಜನರ ಹೃದಯವನ್ನು, ಅವರ ಸ್ನೇಹವನ್ನು ಮತ್ತು ಪ್ರೀತಿಯನ್ನು” ಎಂದು ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಬ್ರಾಂತೇಶ್ ಭವನದಲ್ಲಿ ಮಧು ಬಂಗಾರಪ್ಪನವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಬಂಗಾರಪ್ಪನವರು ನಿಮ್ಮೆಲ್ಲರ ಹೃದಯದಲ್ಲಿದ್ದಾರೆ. ಅದನ್ನು ಕಿತ್ತು ಹಾಕಲು ಸಾಧ್ಯವಿಲ್ಲ, ಅವರು ಸಿಎಂ ಆದಾಗ ಕೊಟ್ಟ ಉಚಿತ ಪಂಪ್‌ಸೆಟ್ ಸೇರಿದಂತೆ ನೂರಾರು ಜನಪ್ರಿಯ ಕಾರ್ಯಕ್ರಮಗಳು ಇಂದಿನ ಸರ್ಕಾರದಲ್ಲಿ ಹೊಸ ಹೆಸರಿನೊಂದಿಗೆ ನಿಮಗೆ ತಲುಪುತ್ತಿದೆ ಎಂದರು.

ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣವು ಬಿಜೆಪಿಗೆ ಕಪ್ಪು ಚುಕ್ಕೆ. ಮಗನೇ ಅಷ್ಟೊಂದು ಭ್ರಷ್ಟಾಚಾರ ಮಾಡಿರುವಾಗ ತಂದೆ ಎಷ್ಟು ಭ್ರಷ್ಟಾಚಾರ ಮಾಡಿರಬಹುದು ಎಂಬುದರ ತನಿಖೆಯಾಗಲಿ ಎಂದು ಮಧು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬಂದು ಕುವೆಂಪು ಅವರು ಬರೆದ ಸಾಲಗಳನ್ನು ತಪ್ಪಾಗಿ ಉಚ್ಚರಿಸಿ ಕುವೆಂಪು ಅವರಿಗೆ ದೊಡ್ಡ ಅವಮಾನ ಮಾಡಿದ್ದಾರೆ. ಮೊದಲು ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟ ರೈತರಿಗೆ ಪರಿಹಾರ ಕೊಡಲಿ ಎಂದ ಮಧು ಬಂಗಾರಪ್ಪ, ಅದೇ ರೀತಿ ಉದ್ಘಾಟನೆಯಾದ ಶಿಕಾರಿಪುರದ ಏತ ನೀರಾವರಿಯಿಂದ ಶೇ. 90ರಷ್ಟು ಕೆರೆಗಳನ್ನು ಇನ್ನೂ ಯಾಕೆ ತುಂಬಿಸಿಲ್ಲ ಎಂದು ಪ್ರಶ್ನಿಸಿದರು.

ಪುರಸಭಾ ಸದಸ್ಯ ನಾಗರಾಜ್ ಗೌಡ ಮಾತನಾಡಿ, ಶಿಕಾರಿಪುರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಚುನಾವಣೆಗೆ ಬಂದು ನಿಂತರೆ ನಾವು ಹತ್ತೂ ಜನ ಆಕಾಂಕ್ಷಿಗಳು ಅರ್ಜಿಯನ್ನು ವಾಪಸ್ ಪಡೆದು ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತೇವೆ. 40 ವರ್ಷಗಳ ಕಾಲ ಸ್ವಾರ್ಥ ರಾಜಕಾರಣ ಮಾಡಿರುವ ಬಿ.ಎಸ್‌.ಯಡಿಯೂರಪ್ಪ ಕುಟುಂಬದ ರಾಜಕಾರಣಕ್ಕೆ ಮುಕ್ತಿ ದೊರಕಿಸಬೇಕು” ಎಂದರು.

ಇದನ್ನೂ ಓದಿ: Adani stocks : ಅದಾನಿ ಷೇರುಗಳಲ್ಲಿ 15,000 ಕೋಟಿ ರೂ. ಹೂಡಿ, 2 ದಿನಗಳಲ್ಲಿ 3,100 ಕೋಟಿ ರೂ. ಲಾಭ ಗಳಿಸಿದ ರಾಜೀವ್‌ ಜೈನ್

ಮಾಜಿ ಎಂಎಲ್‌ಸಿ ಪ್ರಸನ್ನ ಕುಮಾರ್ ಮಾತನಾಡಿ, ಈ ಬಾರಿ ಜಿಲ್ಲೆಯ ಏಳು ಕ್ಷೇತ್ರಗಳು ಕಾಂಗ್ರೆಸ್ ಪರವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ನೂರರಷ್ಟು ಬರುವುದು ಸತ್ಯ ಎಂದರು.

ಮಾಜಿ ಎಮ್ಮೆಲ್ಸಿ ಶಾಂತವೀರಪ್ಪ ಗೌಡರು ಮಾತನಾಡಿ, “ನಾನು ಕಳೆದ 40 ವರ್ಷಗಳಿಂದ ಬಂಗಾರಪ್ಪನವರ ನಿಸ್ವಾರ್ಥ ರಾಜಕಾರಣ ನೋಡಿಕೊಂಡು ಬಂದಿದ್ದೇನೆ. ಆದರೆ, ನಂತರದ ಬಿಜೆಪಿಯ ಭ್ರಷ್ಟ ವ್ಯವಸ್ಥೆಯಿಂದ ಅವರು ಸೋಲಬೇಕಾಯತೇ ಹೊರತು ಜನರ ಮನಸ್ಸಿನಲ್ಲಿ ಎಂದೆಂದಿಗೂ ಗೆಲುವಿನ ಸರದಾರರಾಗಿ ನೆಲೆಸಿದ್ದಾರೆ” ಎಂದರು.

ಇದನ್ನೂ ಓದಿ: Sumalatha Ambareesh : ಬಿಜೆಪಿ ಫ್ಲೆಕ್ಸ್‌ನಲ್ಲಿ ಸುಮಲತಾ!; ಕಮಲ ಪಕ್ಷ ಸೇರ್ಪಡೆ ಫಿಕ್ಸಾ? ಎರಡು ಕಂಡಿಷನ್‌ಗಳೇನು?

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ, “ಬಿಜೆಪಿ ಕುಟುಂಬ ರಾಜಕಾರಣ ಬಿಟ್ಟು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕು. ಆದರೆ, ಆ ಸಂಸ್ಕೃತಿ ಅವರಲ್ಲಿ ಇಲ್ಲ, ನಾವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ದುಡಿದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಲು ಶ್ರಮಿಸೋಣ” ಎಂದರು.

ಇದನ್ನೂ ಓದಿ: Garbha Sanskar: ಗರ್ಭದಲ್ಲಿರುವ ಶಿಶುವಿಗೇ ಭಗವದ್ಗೀತೆ, ರಾಮಾಯಣ ಶಿಕ್ಷಣ; ಆರೆಸ್ಸೆಸ್ ಅಂಗಸಂಸ್ಥೆಯಿಂದ ಅಭಿಯಾನ

ಕೆಪಿಸಿಸಿ ಸದಸ್ಯ ಗೋಣೆ ಮಾಲತೇಶ್, ಚುನಾವಣಾ ವೀಕ್ಷಕ ರಮೇಶ್, ಭಾರತ್ ಜೋಡು ಸಂಯೋಜಕಿ ನಿರ್ಮಲಾ ಪಾಟೀಲ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಮಾರ್ವಳ್ಳಿ ಉಮೇಶ್, ಮಾತನಾಡಿದರು. ಮಾಜಿ ಶಾಸಕ ಮಹಾಲಿಂಗಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಚ್. ಎಸ್ ರವೀಂದ್ರ, ಎಸ್. ಟಿ. ಘಟಕದ ಜಿಲ್ಲಾಧ್ಯಕ್ಷ ವೀರೇಶ್, ಭಂಡಾರಿ ಮಾಲತೇಶ್ ಸೇರಿದಂತೆ ಇತರರು ಹಾಜರಿದ್ದರು.

ಇದನ್ನೂ ಓದಿ: Nagaland Election Result: ನಾಗಾಲ್ಯಾಂಡ್‌ ಅಸೆಂಬ್ಲಿಯಲ್ಲಿ ಪ್ರತಿಪಕ್ಷವೇ ಇಲ್ಲ! ಇದು ಎಲ್ಲ ಪಕ್ಷಗಳ ಸರ್ಕಾರ

Exit mobile version