Site icon Vistara News

Shikshan Habba | ಶಿಕ್ಷಣ ಹಬ್ಬಕ್ಕೆ ಮರು ಚಾಲನೆ; ಜನವರಿ 7ರಂದು ಅಭಿನಂದನಾ ಸಮಾರಂಭ

ಬೆಂಗಳೂರು: ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ ಕಲಿತ ಮಕ್ಕಳಿಗೆ ಪ್ರತಿ ವರ್ಷ ನಮ್ಮ ಶಿಕ್ಷಣ ತಂಡದಿಂದ ಆಯೋಜನೆಗೊಳ್ಳುತ್ತಿದ್ದ ಅಭಿನಂದನೆ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಜನವರಿ ೭ರಂದು ಬೆಳಗ್ಗೆ ೯.೩೦ಕ್ಕೆ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ನಯನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ನಮ್ಮ ಶಿಕ್ಷಣ ತಂಡವು ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಪ್ರತಿ ಶನಿವಾರ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡುತ್ತಾ ಬಂದಿದೆ. ಹಾಗೆಯೇ ಪ್ರತಿ ವರ್ಷದ ಕೊನೆಯಲ್ಲಿ ಶಿಕ್ಷಣ ಹಬ್ಬದ ಹೆಸರಿನಲ್ಲಿ (Shikshan Habba) ಎಲ್ಲ ಸರ್ಕಾರಿ (ಕಂಪ್ಯೂಟರ್ ಕಲಿತ) ಶಾಲಾ ಮಕ್ಕಳಿಗೆ ಅಭಿನಂದನೆ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು, ಕೋವಿಡ್‌ ಕಾರಣದಿಂದಾಗಿ ಸಮಾರಂಭವನ್ನು ಏರ್ಪಡಿಸಲಾಗಿರಲಿಲ್ಲ.

ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಪುಟ್ಟ ಗೌರಿ ಖ್ಯಾತಿಯ ರಂಜಿನಿ ರಾಘವನ್‌ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಜತೆಗೆ ತಂಡದ ಗೌರವ ಅಧ್ಯಕ್ಷ ರವಿ ಡಿ ಚನ್ನಣ್ಣನವರ್‌, ಮಾರ್ಗದರ್ಶಿ ಶ್ರೀನಿವಾಸನ್‌ ಹಾಜರಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | ABVP | ಎಬಿವಿಪಿ ಉತ್ತರ-ದಕ್ಷಿಣ ಪ್ರಾಂತಕ್ಕೆ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ

Exit mobile version