ಶಿವಮೊಗ್ಗ: ಮಹಾನಗರ ಪಾಲಿಕೆಯ ಸದಸ್ಯ ಶಾಮೀರ್ ಖಾನ್ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು 40 ಕೆ.ಜಿ. ಗೋಮಾಂಸ ಪತ್ತೆಯಾಗಿದೆ.
ಶಿವಮೊಗ್ಗದ ಟಿಪ್ಪುನಗರದ ಮೂರನೇ ತಿರುವಿನಲ್ಲಿರುವ ಶಾಮೀರ್ ಖಾನ್ ಮನೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಪುತ್ರ ಇಬಾದ್ ಮತ್ತು ಇತರೆ ಸಹಚರರನ್ನು ಇಟ್ಡುಕೊಂಡು 40 ಕೆ.ಜಿ. ಗೋಮಾಂಸ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ತುಂಗನಗರ ಪೊಲೀಸರು ದಾಳಿ ನಡೆಸಿದ್ದರು.
ಶಾಮೀರ್ ಖಾನ್ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾಗಿದ್ದು, ಅವರ ಪತ್ನಿ ಖುರ್ಷಿದಾ ಬಾನು ಮೇಯರ್ ಆಗಿದ್ದವರು. ದಾಳಿ ವೇಳೆ ಶಾಮೀರ್ ಖಾನ್ ಮತ್ತು ಇಬಾದ್ ಹಾಗೂ ಸಹಚರರು ಪರಾರಿಯಾಗಿದ್ದಾರೆ.
ಪ್ರಕರಣ ತುಂಗನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮಾಹಿತಿ ಪಡೆದ ಬಿಜೆಪಿ ಪ್ರತಿಭಟನೆ ನಡೆಸಿದೆ.
ಇದನ್ನೂ ಓದಿ | Reservation demand | ಸಚಿವರ ಮಾತಿಗೆ ಒಪ್ಪದ ಹೋರಾಟಗಾರರು, ಮಾದಾರ ಚನ್ನಯ್ಯ ಶ್ರೀಗಳ ಮಾತಿನಿಂದ ಧರಣಿ ಅಂತ್ಯ
ಕಾರ್ಪೊರೇಟರ್ ಶಾಮೀರ್ ಖಾನ್, ಮಾಜಿ ಮೇಯರ್ ಖುರ್ಷಿದಾ ಬಾನು ಹಾಗೂ ಅವರ ಪುತ್ರನನ್ನು ಬಂಧಿಸುವಂತೆ ಆಗ್ರಹಿಸಿ ಎಸ್‌ಪಿ ಕಚೇರಿ ಎದುರು ಬಿಜೆಪಿ ಯುವ ಮೋರ್ಚಾ ಘಟಕ ಪ್ರತಿಭಟನೆ ನಡೆಸಿತು.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೂ ಬಿಜೆಪಿ ಘಟಕಗಳಿಂದ ಮನವಿ ಸಲ್ಲಿಸಲಾಗಿದ್ದು, ಕಾರ್ಪೊರೇಟರ್ ಶಾಮೀರ್ ಖಾನ್ ಅವರ ಸದಸ್ಯತ್ವ ವಜಾಗೊಳಿಸಲು ಆಗ್ರಹಿಸಲಾಗಿದೆ. ಅಕ್ರಮ ಮಾಂಸದ ಅಡ್ಡೆಯ ಜಾಗ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿರುವ ಬಿಜೆಪಿ, ಜಾಗ ಅಕ್ರಮವಾಗಿದ್ದರೆ ಬುಲ್ಡೋಜರ್ ಕಾರ್ಯಾಚರಣೆ ಮಾಡುವಂತೆ ಆಗ್ರಹಿಸಿದೆ.
ಇದನ್ನೂ ಓದಿ | Online Loan App | ಸೋಷಿಯಲ್ ಮೀಡಿಯಾದಲ್ಲಿ ಬೆತ್ತಲೆ ಫೋಟೊ ಹರಿಬಿಟ್ಟ ಆನ್‌ಲೈನ್ ಲೋನ್ ಆ್ಯಪ್; ವ್ಯಕ್ತಿ ಆತ್ಮಹತ್ಯೆ ಯತ್ನ