Site icon Vistara News

Shimoga News | ಈಶ್ವರಪ್ಪ ಸದನಕ್ಕೆ ಗೈರು: ಮಾಜಿ ಶಾಸಕ ಪ್ರಸನ್ನ ಕುಮಾರ್ ಆಕ್ರೋಶ

Former MLA Prasanna Kumar K.S. Eshwarappa

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸದನಕ್ಕೆ ಗೈರು ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಶಾಸಕ ಪ್ರಸನ್ನ ಕುಮಾರ್ ಶಿವಮೊಗ್ಗದಲ್ಲಿ (Shimoga News) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿಯ ವಿರುದ್ಧವೇ ಈಶ್ವರಪ್ಪ ಬ್ಲ್ಯಾಕ್‌ಮೇಲ್ ತಂತ್ರ ಮಾಡುತ್ತಿದ್ದಾರೆ. ಶಿವಮೊಗ್ಗದ ಶಾಸಕರು ಅಧಿವೇಶನದಲ್ಲಿ ಭಾಗಿಯಾಗುತ್ತಿಲ್ಲ. ಅಲ್ಲಿ ಶಿವಮೊಗ್ಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಬೆಳಗಾವಿಗೆ ಹೋದರೂ ಅಧಿವೇಶನದಲ್ಲಿ ಭಾಗಿಯಾಗಿಲ್ಲ. ಸೋಮವಾರ (ಡಿ.೧೯) ಮೌನ ಪ್ರತಿಭಟನೆ ನಡೆಸಿ, ಸದನಕ್ಕೆ ಗೈರಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ತಮಗೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ಹೇಳಿದ್ದಾರೆಂದು ಪ್ರಸನ್ನ ಆರೋಪಿಸಿದ್ದಾರೆ.

ಮಂಗಳವಾರ (ಡಿ.೨೦) ಕೂಡ ಪತ್ರಿಕಾಗೋಷ್ಠಿ ನಡೆಸಿ, ಪಕ್ಷಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆಂದು ದೂರಿದ್ದಾರೆ. ಮಂತ್ರಿಗಿರಿಗಾಗಿ ಈಶ್ವರಪ್ಪ ದುಂಬಾಲು ಬಿದ್ದಿದ್ದು, ಶಿವಮೊಗ್ಗದ ಜನರು ಇವರನ್ನು ಶಾಸಕರಾಗಿ ಮಾಡಿದ್ದಾರೆ. ಅಧಿವೇಶನದಲ್ಲಿ ಶಾಸಕರಾಗಿ ಭಾಗಿಯಾಗಬೇಕು. ಇವರು ನೋಡಿದರೆ, ಮಂತ್ರಿಯಾಗಿಲ್ಲ ಎಂದುಕೊಂಡು ಸದನಕ್ಕೆ ಗೈರು ಹಾಜರಿಯಾಗಿದ್ದಾರೆ ಎಂದು ಕಿಡಿಕಾರಿದರು.

ಈಶ್ವರಪ್ಪ ಅಧಿವೇಶನದಲ್ಲಿ ಪಾಲ್ಗೊಂಡು ಶಿವಮೊಗ್ಗದ ಜನರ ಗೌರವ ಉಳಿಸಬೇಕು. ಇವರಿಗೆ, ಕ್ಲೀನ್‌ಚಿಟ್ ಸಿಕ್ಕಿರುವುದು ಪೊಲೀಸರಿಂದ ಮಾತ್ರ. ಆದರೆ, ನ್ಯಾಯಾಲಯದಿಂದ ಇನ್ನೂ ಕ್ಲೀನ್‌ಚಿಟ್‌ ಸಿಕ್ಕಿಲ್ಲ. ಹೀಗಾಗಿ ಈಶ್ವರಪ್ಪ ಮತ್ತೊಮ್ಮೆ ತಮಗೆ ಕ್ಲೀನ್‌ಚಿಟ್ ಸಿಕ್ಕಿದೆ ಎಂದು ಹೇಳುವುದು ಬೇಡವೆಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಸಭಾಪತಿಯಾಗಲು ಬಸವರಾಜ ಹೊರಟ್ಟಿ ನಾಮಪತ್ರ: ಯಡಿಯೂರಪ್ಪಗೆ ಮಾತು ಉಳಿಸಿಕೊಂಡ ಗರಿ

Exit mobile version