Site icon Vistara News

Shimoga News | ನಮಗೆ ಸಂಸ್ಕೃತಿ ಕಲಿಸುವುದೇ ಭಾಷೆ: ಪ.ರಾ.ಕೃಷ್ಣಮೂರ್ತಿ

Shimoga Samskruti Ustva Konanduru rashtrotthana

ಶಿವಮೊಗ್ಗ: ಭಾಷೆ ನಮಗೆ ಸಂಸ್ಕೃತಿ ಕಲಿಸಿಕೊಡುತ್ತದೆ. ಸಮಾಧಾನ ಕೊಡುತ್ತದೆ ಎಂದು ಸಂಸ್ಕಾರ ಭಾರತಿ ಅಖಿಲ ಭಾರತ ಪೂರ್ವ ಸಂಘಟನಾ ಮಂತ್ರಿ ಪ.ರಾ. ಕೃಷ್ಣಮೂರ್ತಿ ಹೇಳಿದರು.

ಕೋಣಂದೂರಿನ ರಾಷ್ಟ್ರೋತ್ಥಾನ ಬಳಗ ಹಾಗೂ ರಾಷ್ಟ್ರೀಯ ಪ್ರೌಢಶಾಲೆ ಆಶ್ರಯದಲ್ಲಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಶ್ರೀ ವಾದಿರಾಜ ಸಂಸ್ಕೃತಿ ಸಂವರ್ಧನ ಸಭಾ ಹಾದಿಗಲ್ಲುನಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದ ಸಂಸ್ಕೃತಿ ಉತ್ಸವವನ್ನು ಸಂಸ್ಕಾರ ಭಾರತಿ ಅಖಿಲ ಭಾರತ ಪೂರ್ವ ಸಂಘಟನಾ ಮಂತ್ರಿ ಪ.ರಾ.ಕೃಷ್ಣಮೂರ್ತಿ ಉದ್ಘಾಟಿಸಿದರು.


ಕನ್ನಡದಲ್ಲೇ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಈ ನಾಡಿನಲ್ಲಿ ಬಹಳಷ್ಟು ಜನರಿದ್ದಾರೆ. ಕನ್ನಡದಲ್ಲೇ ಕಲಿತು, ವಿದ್ಯಾವಂತರಾಗಿ ಎತ್ತರಕ್ಕೇರಿ ಈ ನಾಡು, ದೇಶವನ್ನು ಬೆಳಗಿದವರಿದ್ದಾರೆ. ಕೇವಲ ಇಂಗ್ಲಿಷ್ ಓದಿದರೆ ಮಾತ್ರ ಸಾರ್ಥಕತೆಯಲ್ಲ, ಕನ್ನಡದಲ್ಲೇ ಹಾಡಿ, ಆಟ-ಊಟ ಮಾಡಿ ಬೆಳಗಿದರೆ ಮಾತ್ರ ಸಾರ್ಥಕತೆ ಸಿಗುತ್ತದೆ ಎಂದರು.‌

ಇದನ್ನೂ ಓದಿ | Kannada Flag | ತಮಿಳುನಾಡಿನಲ್ಲೂ ಕಿರಿಕ್; ಕನ್ನಡ ಬಾವುಟ ಕಟ್ಟಿದ್ದಕ್ಕೆ ಕನ್ನಡಿಗರ ವಾಹನಕ್ಕೆ ಕಲ್ಲು ತೂರಾಟ

ಕಾರ್ಯಕ್ರಮ ಸಂಘಟಕರಾದ ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಅವನತಿಯತ್ತ ಸಾಗುತ್ತಿರುವ ಕನ್ನಡ ಭಾಷೆಯ ರಕ್ಷಣೆಗಾಗಿ ಇಂತಹ ಕಾರ್ಯಕ್ರಮವನ್ನು 1969ರಿಂದ ಪ್ರತಿ ವರ್ಷ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ವಿಸ್ತಾರ ನ್ಯೂಸ್‌ನ ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ವಿವೇಕ ಮಹಾಲೆ, ವಿಸ್ತಾರ ನ್ಯೂಸ್ ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ವಿಸ್ತಾರ ಕನ್ನಡ ಸಂಭ್ರಮ ಆಚರಿಸುವ ಮೂಲಕ ಕನ್ನಡದ ಅಸ್ಮಿತೆಗಾಗಿ ಪ್ರಯತ್ನಿಸುತ್ತಿದೆ. ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಸ್ತಾರ ನ್ಯೂಸ್ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತಿದೆ ಎಂದರು.

ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಮಕ್ಕಳ ನಡುವೆ ನಡೆದ ಕಾರ್ಯಕ್ರಮವು ಪ್ರೌಢಶಾಲೆಯ ವಿದ್ಯಾರ್ಥಿನಿಯರ ರಾಷ್ಟ್ರಗೀತೆ ಮತ್ತು ನಾಡಗೀತೆಯೊಂದಿಗೆ ಆರಂಭಗೊಂಡಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಚ್.ಎನ್. ಸುಬ್ರಹ್ಮಣ್ಯ (ಮಾಧ್ಯಮ), ಡಾ. ಸದಾಶಿವ ನಿಲುವಾಸೆ (ಗೀತ ಗಾಯನ), ಎಚ್.ಆರ್.ರತ್ನಾಕರ (ಹೋಟೆಲ್ ಉದ್ಯಮಿ), ಬಿ.ವಿ. ಚಂದ್ರಶೇಖರ (ಶಿಕ್ಷಣ), ಜಯರಾಮ ಹೊರಬೈಲು (ಛಾಯಾಗ್ರಹಣ), ಶ್ರೀನಿವಾಸ ಪುತಲಿಕೊಪ್ಪ (ಧ್ವನಿ ಮತ್ತು ಬೆಳಕು ನಿರ್ವಹಣೆ), ದೇವರಾಜ ಶೆಟ್ಟಿ (ಕನ್ನಡ ಪರಿಚಾರಕ) ಮತ್ತು ಡಾ.ಸುಮೇಧ ಕಟ್ಟೆ (ವೈದ್ಯಕೀಯ) ಅವರನ್ನು ಸಂಸ್ಕೃತಿ ಸಂವಾಹಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಇದನ್ನೂ ಓದಿ | Crime news | ಬೆಂಗಳೂರಿನ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ, ಹೊಯ್ಸಳ ಗಸ್ತು ಎಲ್ಲಿದೆ?

ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ದಿ.ಕುಂಬಳೆ ಸುಂದರರಾವ್, ಸಾಹಿತಿ ದಿ.ಚಂದ್ರಶೇಖರ್ ಭಂಡಾರಿ ಮತ್ತು ಪದ್ಮಶ್ರೀ ಪುರಸ್ಕೃತ ದಿ.ಆರ್.ಎಲ್.ಕಶ್ಯಪ ಅವರಿಗೆ ಯಕ್ಷಗಾನ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಎಚ್.ರಾಮಚಂದ್ರ ಜೋಯಿಸ್, ತೀರ್ಥಹಳ್ಳಿಯ ಪೂಜ್ಯಪಾದ ಆಯುರ್ಧಾಮದ ಡಾ.ಜೀವಂಧರ ಜೈನ್, ಸನ್ಮಾನಿತರ ಪರವಾಗಿ ಎಚ್.ಎನ್.ಸುಬ್ರಹ್ಮಣ್ಯ, ಬಿ.ವಿ.ಚಂದ್ರಶೇಖರ ಮಾತನಾಡಿದರು. ಡಾ.ಸದಾಶಿವ ನಿಲುವಾಸೆ ಕನ್ನಡ ಗೀತೆಗಳನ್ನು ಹಾಡಿದರು.

ರಾಷ್ಟ್ರೀಯ ಪ್ರೌಢಶಾಲೆಯ ಸಹ ಶಿಕ್ಷಕರಾದ ಜಿ.ಎಚ್.ರವಿಕುಮಾರ್ ಸ್ವಾಗತಿಸಿದರು. ಟಿ.ಕೆ.ಸಂಪತ್ ಸನ್ಮಾನಿತರನ್ನು ಪರಿಚಯಿಸಿದರು. ಸಂತೋಷ್‌ ಕುಮಾರ್ ವಂದಿಸಿದರು. ಕೆ.ಬಿ.ಪ್ರಕಾಶ್ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಸಿದ್ದಾಪುರ ಅಶೋಕ ಭಟ್, ಸಂಜಯ ಬೆಳೆಯೂರು, ಚಪ್ಪರಮನೆ ಶ್ರೀಧರ ಭಟ್ ಇವರ ಹಾಸ್ಯ ಲಹರಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿತು.

ಇದನ್ನೂ ಓದಿ | Gadaga zoo | ಗದಗ ಮೃಗಾಲಯದಿಂದ ಒಂದು ತೋಳ ಹೋಗಿ ಎರಡು ಸಿಂಹ ಬಂತು: ಶಿವ-ಗಂಗಾ ಜೋಡಿ ಗರ್ಜನೆಗೆ ರೆಡಿ!

Exit mobile version