ಶಿರಾ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಶಿರಾ (Shira News) ನಗರದ ಸಮೀಪ ಪ್ರಾರಂಭಿಸಲು ಜಮೀನು ಗುರುತಿಸಲಾಗಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು. ನಗರದ ಶಿವಾಜಿ ನಗರ ಬಡಾವಣೆ ಸಮೀಪದಲ್ಲಿ ಮಂಗಳವಾರ ಕೆ.ಎಸ್.ಸಿ.ಎ. ಪ್ರತಿನಿಧಿಗಳಿಗೆ ಕ್ರೀಡಾಂಗಣಕ್ಕಾಗಿ ಕಾಯ್ದಿರಿಸಿದ ಜಮೀನಿನ್ನು ಪರಿಶೀಲಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Fortis Hospital: 32 ವರ್ಷದ ಮಹಿಳೆಗೆ ಯಶಸ್ವಿ ಕಿಡ್ನಿ ಕಸಿ
ಖೇಲೋ ಭಾರತ್ ಯೋಜನೆಯಡಿ ಕ್ರೀಡಾ ಗ್ರಾಮ ನಿರ್ಮಾಣಕ್ಕಾಗಿ ಭುವನಹಳ್ಳಿ, ಕಲ್ಲುಕೋಟೆ ವಿವಿಧ ಸರ್ವೆ ನಂಬರ್‌ಗಳಲ್ಲಿ 100 ಎಕರೆ ಜಮೀನಿದ್ದು, ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸಲುವಾಗಿ 20 ಎಕರೆ ನೀಡಲು ಉದ್ದೇಶಿಸಲಾಗಿದೆ. ಅಂತಯೇ ಈ ಕ್ರೀಡಾಂಗಣಕ್ಕೆ ಬರಲು 100 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕೆ.ಎಸ್.ಸಿ.ಎ ಪ್ರತಿನಿಧಿ ರಘುರಾಮ್ ಭಟ್ ಮಾತನಾಡಿ, ಕ್ರೀಡಾಂಗಣ ನಿರ್ಮಿಸಲು ಈ ಸ್ಥಳ ಸೂಕ್ತವಾಗಿದೆ. ಮುಂದಿನ ವಾರದಲ್ಲಿ ಕೆ.ಎಸ್.ಸಿ.ಎ. ಎಂಜಿನಿಯರ್‌ಗಳ ತಂಡ ಆಗಮಿಸಿ, ವರದಿ ನೀಡಿದ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Banavasi News: ಹೆಬ್ಬತ್ತಿ ಗ್ರಾಮದಲ್ಲಿ ಕಾಡುಹಂದಿ ಬೇಟೆ; ಇಬ್ಬರ ಬಂಧನ
ಈ ಸಂದರ್ಭದಲ್ಲಿ ತಹಸೀಲ್ದಾರ್ ದತ್ತಾತ್ರೇಯ ಜೆ. ಗಾದ, ನಗರಸಭೆ ಅಯುಕ್ತ ರುದ್ರೇಶ್, ನಗರಸಭಾ ಸದಸ್ಯರಾದ ಬುರಾನ್ ಅಹಮದ್, ಬಿ.ಎಂ.ರಾಧಕೃಷ್ಣ, ಮುಖಂಡರಾದ ಸುಧಾಕರ್ ಗೌಡ ಸೇರಿದಂತೆ ಹಲವರು ಇದ್ದರು.