ಶಿರಾ: ಹುಲಿಕುಂಟೆ (Hulikunte) ಹೋಬಳಿಗೆ ವಸತಿ ಶಾಲೆ (residential school) ಜತೆಗೆ ಅಲೆಮಾರಿ, ಅರೆ ಅಲೆಮಾರಿಗಳ ವಸತಿ ಶಾಲೆಯನ್ನು ಶೀಘ್ರವಾಗಿ ಮಂಜೂರು ಮಾಡಿಸುವೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ತಾಲೂಕಿನ ಪಟ್ಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಕೊಡುಗೆಯಾಗಿ ನೀಡಿದ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ತಾಲೂಕಿನ ವಸತಿಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಇಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಪೈಪೋಟಿ ಇದೆ, ಈ ನಿಟ್ಟಿನಲ್ಲಿ ಎರಡು ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Viral Video: ಮಹಿಳೆಯನ್ನು ನದಿಗೆ ಎಳೆದೊಯ್ದು, ಸಜೀವವಾಗಿ ತಿಂದ ಮೊಸಳೆ!
ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್ ಕಾಲೇಜ್, ಪಶುವೈದ್ಯಕೀಯ ಕಾಲೇಜು, ಕೃಷಿ ಕಾಲೇಜ್ ತೆರೆಯಲು ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Virat Kohli: ರಜೆಯಲ್ಲಿದ್ದರೂ ಓಟ ಮಾತ್ರ ನಿರಂತರ; ಕೊಹ್ಲಿಯ ಈ ಮಾತಿನ ರಹಸ್ಯವೇನು?
ಜೀನಿ ಕಂಪನಿ ಎಂ.ಡಿ. ದಿಲೀಪ್ ಕುಮಾರ್ , ನಾದೂರು ಗ್ರಾ.ಪಂ.ಅಧ್ಯಕ್ಷೆ ರಕ್ಷಿತಾ ಮಾರುತಿ, ಉಪಾಧ್ಯಕ್ಷೆ ತುಳಸಿ ಮಧುಸೂದನ್, ಸದಸ್ಯರಾದ ಶ್ರೀಮತಿ, ಮೆಹರ್ ತಾಜ್ ಬಾಬು, ಭೂತರಾಜ್, ನಾಗರಾಜ್, ಮುಖಂಡರಾದ ಕೆ.ಎನ್.ಮಂಜುನಾಥ್, ಪಿ.ಎಸ್.ಗಂಗಾಧರ್, ಸೋಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಪಿಡಿಓ ತಿಪ್ಪೇಸ್ವಾಮಿ ,ಇಸಿಓ ಚಂದ್ರಶೇಖರ್, ಉಪ ಪ್ರಾಂಶುಪಾಲ ರಾಮಚಂದ್ರಪ್ಪ, ಸಿ.ಅರ್.ಪಿ ಅಂಬಿಕಾ, ಮುಖ್ಯ ಶಿಕ್ಷಕಿ ಭಾಗ್ಯಮ್ಮ, ಶಿಕ್ಷಕರಾದ ಮನೋಹರ್, ಶುಕೂರ್, ರಾಕೇಶ್ ,ಕವಿತಾ ಮತ್ತಿತರರು ಇದ್ದರು.