ಶಿವಮೊಗ್ಗ: ಕೆಎಸ್‍ಐಐಡಿಸಿ ನಿಗಮದ ಅಧ್ಯಕ್ಷ ಡಾ.ಕೆ.ಶೈಲೇಂದ್ರ ಬೆಲ್ದಾಳೆ ಅವರು ಬುಧವಾರ (ಫೆ.೧) ನೂತನ ವಿಮಾನ ನಿಲ್ದಾಣದ (Shivamogga Airport) ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು.
3050 ಮೀ. ಉದ್ದ, 45 ಮೀ. ಅಗಲದ ರನ್‍ವೇ, ಆರ್‌ಇಎಸ್‍ಎ, ಬಾಹ್ಯ (ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಏರಿಯಾ, ಇತರೆ ಕಾಮಗಾರಿಗಳು ಹಾಗೂ 4340 ಚದರ ಮೀಟರ್ ಅಳತೆಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2347 ಚದರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 2 ಇಲೆಕ್ಟ್ರಿಕ್ ಸಬ್ ಸ್ಟೇಷನ್, 1 ಫೈಯರ್ ಸ್ಟೇಷನ್ ಹಾಗೂ ಇತರೆ ಕಾಮಗಾರಿಗಳನ್ನು ಅವರು ಪರಿವೀಕ್ಷಿಸಿದರು.
ಇದನ್ನೂ ಓದಿ | UPSC Recruitment 2023 : ಐಎಎಸ್, ಐಎಫ್‌ಎಸ್ ನೇಮಕಕ್ಕೆ ಅಧಿಸೂಚನೆ; ಈ ಬಾರಿ ಸಾವಿರ ಹುದ್ದೆಗಳಿಗೆ ನೇಮಕ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ವಿಮಾನ ಹಾರಾಟದ ಅನುಮತಿಗೆ ಬೇಕಾದ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕೆಎಸ್‍ಐಐಡಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್ ರವಿ, ನಿಗಮದ ನಿರ್ದೇಶಕರಾದ ಸಿ.ಎನ್.ಗಾಯತ್ರಿ ದೇವಿ, ಭಾರತಿ ಮಲ್ಲಿಕಾರ್ಜುನಪ್ಪ ಅಲವಂಡಿ, ಎಸ್. ಮಹಾದೇವಿಸ್ವಾಮಿ ಉಪಸ್ಥಿತರಿದ್ದರು.