Site icon Vistara News

Shivamogga Airport: ವಿಮಾನ ನಿಲ್ದಾಣ ಉದ್ಘಾಟನೆ; ಫೆ. 25ರಂದು ಮುಗಿಲೆತ್ತರಕ್ಕೆ ಮಲೆನಾಡು ಕಾರ್ಯಕ್ರಮ ಆಯೋಜನೆ

Shivamogga Airport

#image_title

ಶಿವಮೊಗ್ಗ: ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ (Shivamogga Airport) ಸ್ಥಾಪನೆಯಾಗುತ್ತಿರುವುದನ್ನು ಸ್ವಾಗತಿಸಿ ಮತ್ತು ಅದನ್ನು ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ಫೆ. 25ರ ಸಂಜೆ 4 ಗಂಟೆಗೆ ಮುಗಿಲೆತ್ತರಕ್ಕೆ ಮಲೆನಾಡು ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಫ್ರೀಡಂ ಪಾರ್ಕ್‍ನಲ್ಲಿ ಫ್ಲೈ ಶಿವಮೊಗ್ಗ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫ್ಲೈ ಶಿವಮೊಗ್ಗ ತಂಡದ ಸಂಚಾಲಕ ಹರಿಕೃಷ್ಣ, “ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿರುವುದು ನಮಗೆಲ್ಲ ಅತ್ಯಂತ ಸಂಭ್ರಮ ತಂದಿದೆ. ಇದು ನಮ್ಮ ಕನಸಿನ ವಿಮಾನ ನಿಲ್ದಾಣ. ಶಿವಮೊಗ್ಗಕ್ಕೆ ಒಂದು ಕಲಶಪ್ರಾಯ. ಹಿರಿಮೆ, ಗರಿಮೆ. ಇಂತಹ ಸಂತೋಷದ ವಿಷಯವನ್ನು ನಾವೆಲ್ಲ ಸಂಭ್ರಮಿಸಬೇಕಾಗಿದೆ” ಎಂದರು.

ಇದನ್ನೂ ಓದಿ: 5 ಲಕ್ಷಕ್ಕೆ ಕೈಚಾಚಿದ ಪಂಜಾಬ್​ ಆಪ್​ ಶಾಸಕ ಅರೆಸ್ಟ್​; ಭ್ರಷ್ಟಾಚಾರ ಆರೋಪದಡಿ ಬಂಧಿತನಾಗುತ್ತಿರುವ 2ನೇ ಎಂಎಲ್​ಎ ಇವರು!

“ಈ ಹಿನ್ನೆಲೆಯಲ್ಲಿ ಗಾಳಿಪಟಗಳನ್ನು ಹಾರಿಸುವ ಮೂಲಕ ವಿಮಾನ ಹಾರಾಟಕ್ಕೆ ನಾವು ಸ್ವಾಗತ ಕೋರುತ್ತೇವೆ. ನಮ್ಮ ಸಂಭ್ರಮ ಮುಗಿಲು ಮುಟ್ಟುವ ಸೂಚನೆ ಅದು. ಮುಗಿಲೆತ್ತರಕ್ಕೆ ನಮ್ಮ ಮಲೆನಾಡು ಇದೆ. ಯಾರು ಬೇಕಾದರೂ ಅಲ್ಲಿ ಗಾಳಿಪಟ ಹಾರಿಸಬಹುದಾಗಿದೆ. ಹಾಗೆಯೇ ಸಂಗೀತ ರಸಮಂಜರಿ ಕಾರ್ಯಕ್ರಮ ಕೂಡ ನಡೆಯಲಿದೆ. ಸ್ಥಳೀಯ ಕಲಾವಿದರು ಇದರಲ್ಲಿ ಭಾಗವಹಿಸುತ್ತಾರೆ. ಮತ್ತು ರಾತ್ರಿ 7 ಗಂಟೆಗೆ ಸಿಡಿಮದ್ದುಗಳ ಪ್ರದರ್ಶನವಿದೆ. ಕತ್ತಲನ್ನು ಕಿತ್ತೊಗೆಯುವ ಬೆಳಕಿನ ಹಬ್ಬದ ಸಂಕೇತವಾಗಿದೆ. ಒಟ್ಟಾರೆ ಇದೊಂದು ಸಂಭ್ರಮದ ಮುಗಿಲೆತ್ತರಕ್ಕೆ ಮಲೆನಾಡು ಎಂಬ ವಿನೂತನ ಕಾರ್ಯಕ್ರಮವಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: SSC MTS Recruitment 2023 : ಎಸ್‌ಎಸ್‌ಎಲ್‌ಸಿ ಆದವರಿಗೆ ಎಂಟಿಎಸ್‌ ಹುದ್ದೆ; ಅರ್ಜಿ ಸಲ್ಲಿಸಲು ಇಂದು ಕೊನೆ ದಿನ

Exit mobile version