Site icon Vistara News

Shivamogga News : ಅಬ್ಬಿ ಜಲಪಾತ ಪ್ರವೇಶ ನಿಷೇಧ!

Shivamogga Abbi Falls Entry prohibited

ರಿಪ್ಪನ್‌ಪೇಟೆ: ಸಮೀಪದ ಕೋಡೂರು (Kodur) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಗುಂಡಿ ಅಬ್ಬಿ ಜಲಪಾತಕ್ಕೆ (Abbi Falls) ಪ್ರವಾಸಿಗರು (Tourists) ಹಾಗೂ ಸಾರ್ವಜನಿಕರು ಪ್ರವೇಶಿಸದಂತೆ ಕೋಡೂರು ಗ್ರಾಮ ಆಡಳಿತ ನಿಷೇಧಿಸಿದೆ.

ಪ್ರಕೃತಿಯ ಸೌಂದರ್ಯವನ್ನೇ ಒಡಲಲ್ಲಿ ಇಟ್ಟುಕೊಂಡಿರುವ ತಾಲೂಕು ಹೊಸನಗರ. ಆದರೆ ಇಲ್ಲಿನ ಕೆಲ ತಾಣಗಳು ಅಪಾಯಕಾರಿಯಾಗಿದ್ದು ಪ್ರಕೃತಿ ಸೌಂದರ್ಯ ಸವಿಯಲು ಬಂದ ಅದೆಷ್ಟೋ ಪ್ರವಾಸಿಗರು ಪ್ರಾಣತೆತ್ತ ಉದಾಹರಣೆಗಳಿವೆ‌‌.

ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ವಿವಿಧಡೆಗಳಿಂದ ಪ್ರತಿನಿತ್ಯ ಅಬ್ಬಿ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದು, ಈ ಕಾರಣದಿಂದ ಅಬ್ಬಿ ಜಲಪಾತಕ್ಕೆ ಪ್ರವಾಸಿಗರು ಪ್ರವೇಶಿಸದಂತೆ ಗ್ರಾಮಾಡಳಿತ ನಿಷೇಧಿಸಿದೆ.

ಅಬ್ಬಿ ಜಲಪಾತ

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ಕಳೆದ ಎರಡು ವರ್ಷದ ಹಿಂದೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ಇದೇ ಜಲಪಾತದಲ್ಲಿ ನೀರುಪಾಲಾಗಿದ್ದ. ಇದು ಅಪಾಯಕಾರಿ ಜಲಪಾತವಾಗಿದ್ದು, ಪ್ರವಾಸಿಗರು ನೀರಿಗಿಳಿದರೆ ಅಪಾಯ ತಪ್ಪಿದ್ದಲ್ಲ. ಕೆಲವರಂತೂ ಸೆಲ್ಫಿ, ಫೋಟೋಗ್ರಫಿಯ ಹುಚ್ಚಾಟ ನಡೆಸಲು ಹೋಗಿ ಪ್ರಾಣ ತೆತ್ತಂತಹ ಘಟನೆಗಳ ಜತೆಯಲ್ಲಿ ಮೋಜು ಮಸ್ತಿ ಮಾಡಲು ಹೋದ ಯುವ ಸಮೂಹ ಕಾಲು ಜಾರಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡ ಸಾಕಷ್ಟು ಘಟನೆಗಳು ಇಲ್ಲಿ ನಡೆದಿವೆ . ಈ ಕಾರಣದಿಂದಾಗಿ ಅಬ್ಬಿ ಜಲಪಾತದ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರವೇಶವನ್ನು ನಿಷೇಧಿಸಲಾಗಿದೆ.

Exit mobile version