Site icon Vistara News

Shivamogga News: ವೈದ್ಯರ ನಿರ್ಲಕ್ಷ್ಯ ಆರೋಪ; ಇಂಜೆಕ್ಷನ್ ನೋವಿನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿ ಬಾಲಕಿ!

Allegation of doctors negligence Girl in fear of losing her leg due to injection pain

ಹೊಸನಗರ: ಅನಾರೋಗ್ಯದ (Illness) ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ (Government hospital) ಬಂದಿದ್ದ 7 ವರ್ಷದ ಬಾಲಕಿಗೆ ವೈದ್ಯರು ನೀಡಿದ್ದ ಇಂಜೆಕ್ಷನ್‌ನಿಂದ (Injection) ಈಗ ಆಕೆ ನಡೆಯಲಾರದ ಸ್ಥಿತಿಗೆ ತಲುಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ತಾಲೂಕಿನ ನಗರ ಸಮೀಪದ ಬೈಸೆ ಗ್ರಾಮದ ಬಡ ಕೂಲಿ ಕಾರ್ಮಿಕ ಕುಟುಂಬದ ವ್ಯಥೆ ಇದು. ವೈದ್ಯರ ನಿರ್ಲಕ್ಷ್ಯದಿಂದಾಗಿ ತಮ್ಮ ಮಗಳು ಕಾಲು ಊರಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಗೋಳಿಡುತ್ತಿದ್ದಾರೆ.

ಇದನ್ನೂ ಓದಿ: ನಾಯಿಮರಿ ಬೇಕೆಂದು ತಂದು ಬೇಸ್ತುಬಿದ್ದ ಯುವತಿ; ಬೆಳೆದು ನಿಂತಾಗ ಅದು ನಾಯಿಯೇ ಆಗಿರಲಿಲ್ಲ, ಈಕೆ ಫುಲ್ ಶಾಕ್​!

ಘಟನೆಯ ಹಿನ್ನಲೆ

ಇಲ್ಲಿನ ಸುಳುಗೋಡಿನ ಅಂಬಿಕಾ ಮತ್ತು ಸುಂದರ ದಂಪತಿಯ ಮಗಳಾದ ಶ್ರವಂತಿಯು ಎರಡನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಶ್ರವಂತಿಗೆ ಮೇ 29 ರಂದು ಜ್ವರ ಕಾಣಿಸಿಕೊಂಡಿತ್ತು. ಅದೇ ರಾತ್ರಿ ನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಆರೋಗ್ಯ ತಪಾಸಣೆಯ ಬಳಿಕ ಮಗುವಿನ ಸೊಂಟಕ್ಕೆ ಇಂಜೆಕ್ಷನ್ ನೀಡಿದ್ದಾರೆ. ಬಳಿಕ ಬಾಲಕಿ ಕಾಲು ಊರಲು ಸಾಧ್ಯವಾಗದೇ. ಇರುವೆ ಹರಿದ ಹಾಗೆ ಆಗುತ್ತದೆ ಎಂದು ರೋಧಿಸಿದ್ದಾಳೆ. ಇದು ಸರಿಯಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಆಸ್ಪತ್ರೆಯಿಂದ ಮನೆಗೆ ಬಂದು ರಾತ್ರಿ ಕಳೆದು ಬೆಳಗಾದರೂ ಬಾಲಕಿ ಕಾಲು ಊರಲಾಗದೆ ನರಳಿದ್ದಾಳೆ. ಆತಂಕಗೊಂಡ ಪೋಷಕರು ಮತ್ತೆ ನಗರ ಸರ್ಕಾರಿ ಆಸ್ಪತ್ರೆಗೆ ಮಗಳನ್ನು ಕರೆತಂದಿದ್ದಾರೆ. ವೈದ್ಯರ ಸೂಚನೆ ಮೇರೆಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ 5 ದಿನ ಚಿಕಿತ್ಸೆ ನೀಡಲಾಗಿದೆ. ಶ್ರವಂತಿಯ ಕಾಲಿನಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ. ಮತ್ತೆ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ 4 ದಿನ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Amrish Puri: ಮೊಗ್ಯಾಂಬೋ ಸಿನಿಮಾದಲ್ಲಿ ಇರಲೇ ಇಲ್ಲ ಅಮರೀಶ್‌ ಪುರಿ! ಸಿನಿಮಾ ಹಿಂದಿನ ರೋಚಕ ಕಥೆಯಿದು

ಜೂನ್ 1 ರಿಂದ ಶಾಲೆ ಆರಂಭವಾಗಿದ್ದು, ಶಾಲೆಗೆ ಹೋಗಲಾಗದೆ ಶ್ರವಂತಿ ಪರಿತಪಿಸುತ್ತಿದ್ದಾಳೆ. ಶಾಲೆಗೆ ಹೋಗುವ ತಯಾರಿಯಲ್ಲಿದ್ದ ಮಗುವಿಗೆ ನಡೆಯಲಾಗದೇ ಮನೆಯಲ್ಲೇ ಕೂರುವಂತಾಗಿದೆ. ವೈದ್ಯರು ಸ್ಪಂದಿಸಿ ಚಿಕಿತ್ಸೆ ನೀಡಿದ್ದರು. ಆಸ್ಪತ್ರೆಗೆ ಒಳ ಹೋಗುವಾಗ ನಡೆದುಕೊಂಡು ಹೋಗಿದ್ದ ಬಾಲಕಿ ವಾಪಸ್‌ ಬರುವಾಗ ನಡೆಯುತ್ತಿರಲಿಲ್ಲ. ವೈದ್ಯರು ನೀಡಿದ ಇಂಜೆಕ್ಷನ್ ಯಾವುದು? ಚಿಕಿತ್ಸೆ ಹೇಗೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.

Exit mobile version