Site icon Vistara News

Shivamogga News | ಬಿ.ಸಿ.ಪಾಟೀಲರ ತಂದೆ-ತಾಯಿ ಪುತ್ಥಳಿ ಅನಾವರಣ

Statue unveiled b c patil parents

ಶಿವಮೊಗ್ಗ: ಬದುಕಿನಲ್ಲಿ ತಂದೆ-ತಾಯಿ ಗುರುಹಿರಿಯರ ಆಶೀರ್ವಾದ ಬಹುಮುಖ್ಯ ಎಂದು ಕೃಷಿ ಸಚಿವರೂ ಆಗಿರುವ ಗದಗ-ಚಿತ್ರದುರ್ಗ ಉಸ್ತುವಾರಿ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.

ಸಚಿವರ ಸ್ವಗ್ರಾಮವಾದ ಸೊರಬ ತಾಲೂಕಿನ ಯಲಿವಾಳ ಗ್ರಾಮದ ತೋಟದಲ್ಲಿ ಬಿ.ಸಿ. ಪಾಟೀಲರು ಕುಟುಂಬಸ್ಥರು ಸಹೋದರರೊಂದಿಗೆ ತಂದೆ ಚನ್ನಬಸವನಗೌಡ ದೊಡ್ಡಮಲ್ಲನಗೌಡ ಪಾಟೀಲ್ ಹಾಗೂ ತಾಯಿ ಶಿವಮ್ಮ ಪಾಟೀಲ್ ಇವರ ಪುತ್ಥಳಿತಯನ್ನು ಸೋಮವಾರ (ಜ.೧೬) ಅನಾವರಣಗೊಳಿಸಿದರು.

ತಂದೆ, ತಾಯಿಯರು ನೈಜ ದೈವಗಳಾಗಿದ್ದು, ಬದುಕಿನ ಬಹುದೊಡ್ಡ ಪ್ರೇರಣೆಯಾಗಿದ್ದಾರೆ. ಬಹು ದಿನಗಳಿಂದ ತಂದೆ, ತಾಯಿಯ ಪುತ್ಥಳಿ ನಿರ್ಮಾಣ ಮಾಡಬೇಕೆಂಬ ಮನದಾಸೆ ಇಂದು ಈಡೇರಿದಂತಾಗಿದೆ. ತಂದೆ, ತಾಯಿಗಳು ಮಕ್ಕಳ ಮೊದಲ ದೈವವಾಗಿದ್ದು, ಅವರ ಮಾರ್ಗದರ್ಶನ ಮಕ್ಕಳ ಬದುಕಿನ ದಾರಿದೀಪವಾಗಿದೆ. ತಂದೆ, ತಾಯಿಯ ಆಶೀರ್ವಾದ ಎನ್ನುವುದು ದೈವದ ಬಲದಂತೆ ಸದಾ ಇರುತ್ತದೆ ಎಂದು ಹೇಳಿದರು.

ಪುತ್ಥಳಿ ಅನಾವರಣ ಸಂದರ್ಭದಲ್ಲಿ ಸಚಿವರ ಪತ್ನಿ ವನಜಾ ಪಾಟೀಲ್, ಪುತ್ರಿಯರಾದ ಸೃಷ್ಟಿ ಪಾಟೀಲ್, ಸೌಮ್ಯ ಪಾಟೀಲ್, ಸಹೋದರ ಅಶೋಕ್ ಪಾಟೀಲ್ ಸೇರಿದಂತೆ ಬಿ.ಸಿ.ಪಾಟೀಲರ ಅಭಿಮಾನಿಗಳು, ಕುಟುಂಬದ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ | School Bus | ಚನ್ನಪಟ್ಟಣದ ಬಳಿ ಹಳ್ಳಕ್ಕೆ ನುಗ್ಗಿದ ಶಾಲಾ ಬಸ್‌: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

Exit mobile version