Site icon Vistara News

Soraba News: ಕೃಷಿಗೆ ಸಹಕಾರಿಯಾದ ಜೇನು ಅಭಿವೃದ್ಧಿಗೆ ಮುಂದಾಗಿ: ಜೇನು ಕೃಷಿಕ ಗೌತಮ್ ಬಿಚ್ಚುಗತ್ತಿ

Bee Farmer Gautham Bichghatti advises on the development of honey at soraba

ಸೊರಬ: ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯೂ ಮನುಷ್ಯ ಜೀವಿಯ ವಿಕಾಸಕ್ಕೆ, ಅವನ ಬದುಕಿಗೆ ನೆರವಾಗುತ್ತದೆ. ಇಂತಹ ಜೀವಿಗಳಲ್ಲಿ ಜೇನುನೊಣಗಳು ಕೂಡ ಒಂದು ಎಂದು ಜೇನು ಕೃಷಿಕ ಗೌತಮ್ ಬಿಚ್ಚುಗತ್ತಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾನಗಲ್ ತಾಲೂಕು ಬೆಳಗಾಲಪೇಟೆ ವಲಯ ಪ್ರಗತಿ ಬಂಧು ಸಂಘದ ಸದಸ್ಯರಿಗೆ ತಾಲೂಕಿನ ಯಲಸಿ ಗ್ರಾಮದ ಸುವರ್ಣ ನರ್ಸರಿಯಲ್ಲಿ ಜೇನುಕೃಷಿಯ ಕುರಿತು ಅವರು ಮಾಹಿತಿ ನೀಡಿದರು.

ಕೃಷಿಯ ಹೆಚ್ಚುವರಿ ಗಳಿಕೆಗೆ ನಮ್ಮ ಶ್ರಮಕ್ಕಿಂತಲೂ ಜೇನು ನೊಣಗಳ ಶ್ರಮ ಅಪಾರ, ಬಾಯಿಗೆ ಸಿಹಿ ನೀಡುವ ಜತೆಗೆ ಕೃಷಿಗೆ ಸಹಕಾರಿ ಆಗಿರುವ ಜೇನು ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಇದನ್ನೂ ಓದಿ: Planning to retire early : 40 ವರ್ಷಕ್ಕೇ ನಿವೃತ್ತಿಯಾಗಲು ಬಯಸುತ್ತೀರಾ? ಮೊದಲು ಈ ಪ್ರಶ್ನೆಗಳನ್ನು ಕೇಳಿ

ತಾಲೂಕು ಎಸ್ಕೆಡಿಆರ್ಡಿಪಿ ಕೃಷಿ ಮೇಲ್ವಿಚಾರಕ ಲೋಕೇಶ್ ದೊಡ್ಡಬಾರ್ಕಿ ಮಾತನಾಡಿ, ಸ್ವಾವಲಂಬನೆ ಜೀವನ ನಿರ್ವಹಣೆಗೆ ಇಂತಹ ಸಾಧಕ ಕೃಷಿಕರ ಮಾರ್ಗದರ್ಶನ, ಪ್ರಾತ್ಯಕ್ಷಿಕೆ ಕೊಡಿಸಿ ರೈತರಿಗೆ ನೆರವಾಗುವ ಉದ್ಧೇಶ ಈ ಯೋಜನೆಯದ್ದಾಗಿದ್ದು, ಪ್ರಚಾರದ ಆಸೆ ಪಡದೇ ಕಾಯಕವೇ ಕೈಲಾಸ ಎಂದು ಸಾಧನೆಗೈದಿರುವ ಸಾಧಕರ ಸಹಕಾರದ ಮೂಲಕ ತರಬೇತಿ ನೀಡಲಾಗುತ್ತದೆ. ಶಿಬಿರದ ಸಾರ್ಥಕತೆಯೆ ಇಂತಹ ಸಾಧಕರಿಗೆ ನೀಡುವ ಅತಿ ದೊಡ್ಡ ಗೌರವ ಎಂದರು.

ತಾಲೂಕಿನ ಮಾದರಿ ಕೃಷಿ ಘಟಕಗಳಾದ ತಿಮ್ಮಾಪುರದ ಜಿತ್ತುನಾಬಿ ಅವರ ಹಾಳೆ ತಟ್ಟೆ ತಯಾರಿಕೆ, ಬಿಳುವಾಣಿ ರೇಣುಕರಾಜ್ ಅವರ ಮಲ್ಲಿಗೆ ಕೃಷಿ ಪ್ರಾತ್ಯಕ್ಷಿಕೆ, ಮಾವಲಿ ಗ್ರಾಮದ ಪ್ರಕಾಶಗೌಡ ಅವರ ಸಮಗ್ರ ಕೃಷಿ ಘಟಕಗಳಿಗೆ ಭೇಟಿ ನೀಡಿ ಪ್ರಗತಿಬಂಧು ಸದಸ್ಯರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: Road Accident : ಸವಾರನ ಎದೆಗೆ ಅಪ್ಪಳಿಸಿತ್ತು ಮತ್ತೊಂದು ಬೈಕ್‌!

ಹಾನಗಲ್ ತಾಲೂಕು ಕೃಷಿ ಮೇಲ್ವಿಚಾರಕ ಮಾಲತೇಶ್, ಟಿ. ಉಮೇಶ್, ಜೇನು ಘಟಕದ ಶರತ್, ಹೊಯ್ಸಳ, ಸತೀಶ್ ಜೊಯ್ಸ್, ವಿಲಾಸ್ ಸೇರಿದಂತೆ ಶಿಬಿರಾರ್ಥಿಗಳು, ಇತರರು ಪಾಲ್ಗೊಂಡಿದ್ದರು.

Exit mobile version