ಶಿವಮೊಗ್ಗ: ಶಿವಮೊಗ್ಗ (Shivamogga News) ನಗರದ ಸಂಚಾರ ವೃತ್ತದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ, ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಸಿಟಿ ಬಸ್ ಸ್ಟ್ಯಾಂಡ್‍ಗಳ ಕುರಿತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚಿತ ಬಸ್ ಸ್ಟ್ಯಾಂಡ್‍ಗಳಲ್ಲಿ ಮಾತ್ರ ಸಿಟಿ ಬಸ್ ನಿಲ್ಲಿಸಲು ಆದೇಶಿಸಿದ್ದಾರೆ.
ನಗರದ ವ್ಯಾಪ್ತಿಯಲ್ಲಿ ನಿತ್ಯ 61 ಸಿಟಿ ಬಸ್‍ಗಳು ಸಂಚರಿಸುತ್ತಿದ್ದು, ಎಲ್ಲಾ ಸಿಟಿ ಬಸ್ ಚಾಲಕರು ಜಿಲ್ಲಾಡಳಿತದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಬಸ್ ನಿಲ್ದಾಣಗಳಲ್ಲಿ ಬಸ್‍ಗಳನ್ನು ನಿಲ್ಲಿಸದೇ ಪ್ರಯಾಣಿಕರು ಕೈ ತೋರಿಸಿದ ಕಡೆಯಲ್ಲೆಲ್ಲ ರಸ್ತೆ ಮಧ್ಯದಲ್ಲೇ ಬಸ್‍ಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಅವರ ಹಿಂದೆ ಬರುವ ವಾಹನಗಳು ಮುಂದೆ ಅಥವಾ ಹಿಂದೆ ಹೋಗಲು ಆಗದೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತಿದೆ. ಆದ್ದರಿಂದ ಕೆಳಕಂಡ ಅಧಿಸೂಚಿತ ಸಿಟಿ ಬಸ್‍ಗಳಲ್ಲಿ ಮಾತ್ರ ಬಸ್‍ಗಳನ್ನು ನಿಲುಗಡೆ ಮಾಡಬೇಕೆಂದು ಆದೇಶಿಸಲಾಗಿದೆ.
ಇದನ್ನೂ ಓದಿ | Ram Mandir | 2024ರ ಜನವರಿಯಲ್ಲಿ ಭಕ್ತರಿಗೆ ರಾಮಮಂದಿರ ಮುಕ್ತ, ಅಮಿತ್ ಶಾ ಮಹತ್ವದ ಘೋಷಣೆ
ಅಧಿಸೂಚಿತ ಬಸ್‍ಸ್ಟ್ಯಾಂಡ್‍ಗಳ ವಿವರ
ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ಎಚ್ ರಸ್ತೆಯ ಶಿವಪ್ಪ ನಾಯಕ ವೃತ್ತದ ಬಸ್ ಸ್ಟ್ಯಾಂಡ್, ಸರ್ಕಾರಿ ಮೈನ್ ಮಿಡ್ಲ್ ಸ್ಕೂಲ್ ಎದುರು, ಕರ್ನಾಟಕ ಸಂಘ ಬಸ್ ಸ್ಟಾಪ್, ಡಿಡಿಪಿಐ ಕಚೇರಿ ದ್ವಾರದ ಬಳಿ, ಕೃಷ್ಣ ಕೆಫೆ ಹೋಟೆಲ್ ಎದುರು, ಮೀನಾಕ್ಷಿ ಭವನ, ಕರ್ನಾಟಕ ಪಬ್ಲಿಕ್ ಶಾಲೆ ಎದುರು, ತುಂಗಾ ಹೊಳೆ ಬಸ್ ಸ್ಟಾಪ್, ಹೊಳೆಹೊನ್ನೂರು ಕ್ರಾಸ್ ಎನ್‍ಸಿಸಿ ಆಫೀಸ್ ಹತ್ತಿರ, ಮಹಾದೇವಿ ಟಾಕೀಸ್, ವಿದ್ಯಾನಗರ ಗಣೇಶ್ ಭವನ, ಗಣಪತಿ ದೇವಸ್ಥಾನ ಬಲಭಾಗ ವಿದ್ಯಾನಗರ, ಸಹ್ಯಾದ್ರಿ ಕಾಲೇಜ್ ಹತ್ತಿರ ವಿದ್ಯಾನಗರ, ದೂರದರ್ಶನ ಕೇಂದ್ರದ ಬಳಿ, ಎಂ ಆರ್ ಎಸ್ ಸರ್ಕಲ್ ಎಡಭಾಗ, ಎಂ ಆರ್ ಎಸ್ ಸರ್ಕಲ್ ಬಲಭಾಗ, ಹರಿಗೆ, ಹಾಥಿನಗರ ಕ್ರಾಸ್, ಶುಗರ್ ಫ್ಯಾಕ್ಟರಿ, ಮಲವಗೊಪ್ಪ ಚನ್ನಬಸವೇಶ್ವರದ ದೇವಸ್ಥಾನದ ಹತ್ತಿರ, ಕಾಡಾ ಆಫೀಸ್ ಎದುರು.
ಇದನ್ನೂ ಓದಿ | Karnataka Election : ಮುಂದುವರಿದ ಜೆ.ಪಿ. ನಡ್ಡಾ ಮಠ ಯಾತ್ರೆ; ಸಮುದಾಯ ಆಧಾರಿತ ಮತ ಬೇಟೆ ತೀವ್ರ
ಹೊಳೆಹೊನ್ನೂರು ರಸ್ತೆಯ ಸಿದ್ದೇಶ್ವರ ನಗರ 2ನೇ ಕ್ರಾಸ್, ಕೆನರಾ ಬ್ಯಾಂಕ್ ಎದುರು, ಗುರುಪುರ, ಸುಬ್ಬಯ್ಯ ಮೆಡಿಕಲ್ ಕಾಲೇಜ್. ಎನ್‍ಆರ್ ಪುರ ರಸ್ತೆಯಲ್ಲಿ ಜ್ಯೋತಿ ನಗರ, ವಡ್ಡಿನಕೊಪ್ಪ, ಮುಖ್ಯ ಅಂಚೆ ಕಚೇರಿ ಎದುರು, ತಾನಿಷ್ಕ ಜ್ಯುವೆಲರ್ಸ್ ಎದುರು, ತಾಲೂಕು ಕಚೇರಿ ಎದುರು. ಬಾಲರಾಜ್ ಅರಸ್ ರಸ್ತೆಯಲ್ಲಿ ಕೆಇಬಿ ಸರ್ಕಲ್, ಮುಖ್ಯ ರೈಲ್ವೆ ನಿಲ್ದಾಣ. ಹೊನ್ನಾಳಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್, ಶ್ರುತಿ ಶೋ ರೂಮ್ ಎದುರು ಹೊನ್ನಾಳಿ ರಸ್ತೆ(ಶಾಂತಿನಗರ), ನಾಗಪ್ಪ ರ್ಸಲ್ ಶಾಂತಿನಗರ, ಪೇಸ್ ಕಾಲೇಜ್ ಎದುರು, ತ್ಯಾವರೆ ಚಟ್ನಳ್ಳಿ.
ಸವಳಂಗ ರಸ್ತೆಯ ಈದ್ಗಾ ಮೈದಾನದ ಎದುರು(ಡಿಸಿ ಕಚೇರಿ ಎದುರು), ಜಯನಗರ ಠಾಣೆಯ ಹತ್ತಿರ, ವಂದನಾ ಬೇಕರಿ ಬಳಿ, ಉಷಾ ನರ್ಸಿಂಗ್ ಹೋಂ ಹತ್ತಿರ, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್, ಜೆಎನ್‍ಎನ್‍ಸಿಇ ಕಾಲೇಜ್, ಅಕ್ಷರ ಕಾಲೇಜ್ ಬಳಿ, ಕೃಷಿ ಕಾಲೇಜ್ ಬಳಿ, ಬಸವನಗಂಗೂರು ಕ್ರಾಸ್, ರತ್ನಾಕರ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ಕುವೆಂಪು ನಗರ ಎ ಬ್ಲಾಕ್ ವಿದ್ಯಾಭಾರತಿ ಕಾಲೇಜ್ ಬಳಿ, ಎನ್‍ಇಎಸ್ ಲೇಔಟ್ ಕುವೆಂಪು ನಗರ. 100 ಅಡಿ ರಸ್ತೆಯ ನಿರ್ಮಲ ಹಾಸ್ಪಿಟಲ್ ಹತ್ತಿರ, ರಾಜೇಂದ್ರ ನಗರ ಚಾನಲ್ ಬಳಿ, ಗಾಂಧಿನಗರ, ಗಣಪತಿ ದೇವಸ್ಥಾನ ರವೀಂದ್ರ ನಗರ, ಬ್ಲಡ್ ಬ್ಯಾಂಕ್ ಹತ್ತಿರ ಮಾತ್ರ ನಿಲುಗಡೆ ಮಾಡಬೇಕು.
ಇದನ್ನೂ ಓದಿ | Sumalatha Ambarish | ವರಿಷ್ಠರು ಮಾತಾಡಿದ್ದು ನಿಜ, ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧರಿಸಿಲ್ಲ ಎಂದ ಸುಮಲತಾ ಅಂಬರೀಶ್
ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಿಳಘಟ್ಟ ಕ್ರಾಸ್‍ನಿಂದ ಗೋಪಾಲಗೌಡ ಬಡಾವಣೆ ಬಸ್ ನಿಲ್ದಾಣದವರೆಗಿನ ರಸ್ತೆಯ ಮಿಳಘಟ್ಟ, ಲಕ್ಷ್ಮೀ ಕ್ಯಾಂಟೀನ್, ಪದ್ಮಾ ಟಾಕಿಸ್, ಅಣ್ಣಾ ನಗರ ಚಾನೆಲ್, ಗೋಪಾಲ ವಿನಾಯಕ ಸರ್ಕಲ್, ಗುಡ್‍ಲಕ್ ಸರ್ಕಲ್, ವೃದ್ಧಾಶ್ರಮ. ಗೋಪಾಲ ಗೌಡ 100 ಅಡಿ ರಸ್ತೆಯ ಗೋಪಾಲ ಗೌಡ ಮೋರ್ ಶಾಪ್ ಹತ್ತಿರ, ಗೋಪಾಲ ಗೌಡ ಬಡಾವಣೆಯ ಎಚ್ ಪಿ ಪೆಟ್ರೋಲ್ ಬಂಕ್ ಎದುರು. ವಿಜಯನಗರ ಮುಖ್ಯ ರಸ್ತೆಯ ನೇತಾಜಿ ಸರ್ಕಲ್, ದ್ರೌಪದಮ್ಮ ಸರ್ಕಲ್. ತುಂಗಾನಗರ 100 ಅಡಿ ರಸ್ತೆಯ ಚಾಲುಕ್ಯ ನಗರ(ಎಲ್‍ಎಚ್‍ಎಸ್), ಚಾಲುಕ್ಯ ನಗರ(ಆರ್‌ಎಚ್‌ಎಸ್), ಚಾಲುಕ್ಯ ನಗರ ಓಪನ್ ಗ್ರೌಂಡ್, ತುಂಗಾ ನಗರ ಪಿಎಚ್‍ಸಿ ಹೊರ ವರ್ತುಲ, ತುಂಗಾನಗರ ಪೊಲೀಸ್ ಠಾಣೆ.
ಸಾಗರ ರಸ್ತೆಯ ಮೆಗ್ಗಾನ್ ಆಸ್ಪತ್ರೆ(ಹೊರಗೆ), ಎಸ್‍ಪಿ ಕಚೇರಿ ಎದುರು, ದೊಡ್ಡಪೇಟೆ ಪೊಲೀಸ್(ಎಲ್‍ಎಚ್‍ಎಸ್), ಎಪಿಎಂಸಿ ಹತ್ತಿರ(ಎಲ್‍ಎಚ್‍ಎಸ್), ಎಪಿಎಂಸಿ ಹತ್ತಿರ (ಆರ್‌ಎಚ್‌ಎಸ್), ಬಿ. ಕೃಷ್ಣಪ್ಪ ಸರ್ಕಲ್(ಆಲ್ಕೊಳ ಸರ್ಕಲ್), ಡಿವಿಜಿ ಸರ್ಕಲ್ (ಎಲ್‍ಎಚ್‍ಎಸ್), ಹೋಟೆಲ್ ಅಶೋಕ ಗ್ರಾಂಡ್, ಹೋಟೆಲ್ ಅಶೋಕ ಗ್ರಾಂಡ್ ಚರ್ಚ್ ಎದುರು, ನಂಜಪ್ಪ ಲೈಫ್‍ಕೇರ್ ಹತ್ತಿರ, ಗಾಡಿಕೊಪ್ಪ, ಮಹೇಂದ್ರ ಶೋ ರೂಮ್ ಎದುರುಗಡೆ, ಕಾಸ್ಮೊ ಕ್ಲಬ್ ಎದುರು, ಪ್ರೊ. ಬಿ. ಕೃಷ್ಣಪ್ಪ ಫ್ರೀ ಲೆಫ್ಟ್.
ಇದನ್ನೂ ಓದಿ | Actor Kishore | ಕೆಜಿಎಫ್-2 ನೋಡಿಲ್ಲ, ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದ ಕಾಂತಾರ ನಟ ಕಿಶೋರ್!
ಸೋಮಿನಕೊಪ್ಪ ರಸ್ತೆಯ ಕಾಶಿಪುರ ಮುಖ್ಯರಸ್ತೆ, ಎಸ್ ಆರ್ ಎಸ್ ಶಾಮಿಯಾನ ಎದುರು, ಸೋಮಿನಕೊಪ್ಪ ಮುಖ್ಯರಸ್ತೆ, ಆದರ್ಶನಗರ, ಸೋಮಿನಕೊಪ್ಪ ಮುಖ್ಯ ರಸ್ತೆ. ವಿನೋಬನಗರ 100 ಅಡಿ ರಸ್ತೆಯ ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ, ಇಂದಿರಾ ಗಾಂಧಿ ಸರ್ಕಲ್(ಆರ್‌ಎಚ್‌ಎಸ್), ಶಿವಾಲಯ ವಿನೋಬನಗರ, ಹಳೇ ಜೈಲ್ ರಸ್ತೆ ಹತ್ತಿರ(ಫ್ರೀಡಂ ಪಾರ್ಕ್), ಲಕ್ಷ್ಮೀ ಚಿತ್ರಮಂದಿರದ ಬಳಿ, ಮಾಧವ ನೆಲೆ ಹತ್ತಿರ, ಕಲ್ಲಹಳ್ಳಿ, ಕಾಶಿಪುರ ರಸ್ತೆ. ಜೈಲ್ ರಸ್ತೆಯ ಹೊಸಮನೆ ಬಡಾವಣೆ, ಬೊಮ್ಮನಕಟ್ಟೆ ರಸ್ತೆಯ ಬೊಮ್ಮನಕಟ್ಟೆ(ಆರ್‍ಹೆಚ್‍ಎಸ್), ಬೊಮ್ಮನಕಟ್ಟೆ(ಎಲ್‍ಹೆಚ್‍ಎಸ್). ಎನ್‍ಟಿ ರಸ್ತೆಯ ಎನ್‍ಟಿ ರಸ್ತೆ ಎದುರು ಎಚ್ ಪಿ ಪೆಟ್ರೋಲ್ ಬಂಕ್, ಮಂಡ್ಲಿ(ಎಲ್ ಎಚ್‍ಎಸ್), ಮಂಡ್ಲಿ (ಆರ್‌ಎಚ್‌ಎಸ್). ಬೈಪಾಸ್ ರಸ್ತೆಯ ತುಂಗಾ ನದಿಯ ಹೊಸ ಸೇತುವೆ, ಸೂಳೆಬೈಲು(ಎಲ್ ಎಚ್‍ಎಸ್), ಊರುಗಡೂರು(ಆರ್‌ಎಚ್‌ಎಸ್ ), ಬೈಪಾಸ್ ರಸ್ತೆ ನರ್ಸಿಂಗ್ ಕಾಲೇಜ್ ಹತ್ತಿರ ನಂಜಪ್ಪ ಬಡಾವಣೆ, ಊರುಗಡೂರು(ಎಲ್ ಎಚ್‍ಎಸ್), ಸೂಳೆಬೈಲ್(ಆರ್‍ಹೆಚ್‍ಎಸ್), ನಿಸರ್ಗ ಲೇಔಟ್, ಪ್ರಿಯಾಂಕಾ ಲೇಔಟ್ ಈ ಸಿಟಿ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‍ಗಳನ್ನು ನಿಲ್ಲಿಸಬೇಕೆಂದು ಆದೇಶಿಸಲಾಗಿದೆ.
ಇದನ್ನೂ ಓದಿ | Virat Kohli | ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ದಂಪತಿ: ಮಗಳ ವಿಡಿಯೊ ವೈರಲ್!