Site icon Vistara News

Shivamogga News: ಶಿಕ್ಷಣ ಸಚಿವರ ಕ್ಷೇತ್ರದ ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಛತೆ; ಸ್ಥಳೀಯರ ಆಕ್ರೋಶ

Student

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕ್ಷೇತ್ರದ (Shivamogga News) ಶಾಲೆಯೊಂದರಲ್ಲಿ ಮಕ್ಕಳಿಂದ ಕೆಲಸ ಮಾಡಿರುವುದು ಕಂಡುಬಂದಿದೆ. ಶಾಲೆಯ ಮೇಲ್ಚಾವಣಿ ಮೇಲೆ ಹತ್ತಿ ಮಕ್ಕಳು ಕಸ ಗುಡಿಸಿದ್ದು, ಇದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ಉರ್ದು ಶಾಲೆಯ ಮೇಲ್ಚಾವಣಿ ಹೆಂಚುಗಳ ಮೇಲಿದ್ದ ಕಸವನ್ನು ಎರಡನೇ ತರಗತಿ ವಿದ್ಯಾರ್ಥಿ ಸ್ವಚ್ಛಗೊಳಿಸಿದ್ದಾನೆ. ಶಾಲೆಯ ಮುಖ್ಯ ಶಿಕ್ಷಕರಿಂದ ಎಡವಟ್ಟಿನಿಂದ ಈ ಘಟನೆ ನಡೆದಿದೆ. ಮಕ್ಕಳಿಂದ ಕೆಲಸ ಮಾಡಿಸಿದ ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿರುವ ಶಿಕ್ಷಕರು, ಶಾಲೆ ಮೇಲೆ ಹತ್ತಿದಾಗ ಏನಾದರೂ ಎಡವಟ್ಟು ಆಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಹುಣಸೆಘಟ್ಡದ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಶಾಲಾ ಕೆಲಸಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶ ಹೊರಡಿಸಿದ್ದರು. ಆದರೆ, ಇದೀಗ ಮಂಡಗದ್ದೆ ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಛತೆ ಮಾಡಿಸಿರುವುದು ನಡೆದಿದೆ.

ಇದನ್ನೂ ಓದಿ | Hindu Temple: ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಡಿ: ಸರ್ಕಾರಕ್ಕೆ ವಿಜಯೇಂದ್ರ ಸಲಹೆ

ಶಿಕ್ಷಕರ ತಪ್ಪು ಕಂಡು ಬಂದರೆ ಕ್ರಮ ಎಂದ ಡಿಡಿಪಿಐ

ಘಟನೆ ಸಂಬಂಧ ಶಿವಮೊಗ್ಗ ಡಿಡಿಪಿಐ ಪರಮೇಶ್ವರಪ್ಪ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಶಿಕ್ಷಕರ ತಪ್ಪು ಕಂಡು ಬಂದಿಲ್ಲ. ಮಕ್ಕಳು ಶಟ್ಲ್‌ ಕಾಕ್ ತೆಗೆದುಕೊಳ್ಳಲು ಹೆಂಚಿನ ಮೇಲೆ ಹತ್ತಿದ್ದಾರೆ. ಈ ಬಗ್ಗೆ ವರದಿ ನೀಡಲು ತೀರ್ಥಹಳ್ಳಿ ಬಿಇಒಗೆ ಸೂಚನೆ ನೀಡಿದ್ದೇನೆ. ಶಿಕ್ಷಕರ ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಮಕ್ಕಳಿಂದ ಕೆಲಸ ಮಾಡಿಸಬಾರದು ಎಂದು ಈಗಾಗಲೇ ಶಿಕ್ಷಣ ಇಲಾಖೆಯಿಂದ ಸೂಚನೆ ಇದೆ. ಶಿಕ್ಷಕರ ಸೂಚನೆ ಮೇರೆಗೆ ಮಕ್ಕಳು ಕಸ ಕ್ಲೀನ್ ಮಾಡಿದರೆ ಅದು ತಪ್ಪು. ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Lakshmi Hebbalkar : ನಿಮ್ಮ ಕ್ಷೇತ್ರದಲ್ಲೂ ಗೃಹಲಕ್ಷ್ಮಿ ಸಕ್ಸಸ್‌; ಸಿದ್ದು ಸವದಿಗೆ ಸಚಿವೆ ಹೆಬ್ಬಾಳ್ಕರ್‌ ತಿರುಗೇಟು

ಮಕ್ಕಳಿಂದ ಕೆಲಸ ಮಾಡಿಸಿದ ಘಟನೆ ಬಗ್ಗೆ ವಿಸ್ತಾರ್ ನ್ಯೂಸ್‌ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಮಂಡಗದ್ದೆ ಗ್ರಾಮದ ಉರ್ದು ಶಾಲೆಗೆ ತೀರ್ಥಹಳ್ಳಿ ಬಿಇಒ ಗಣೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version