Site icon Vistara News

Shivamogga News: ಮಾ.13ರಿಂದ ರಾಜ್ಯಾದ್ಯಂತ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಿ ಧರಣಿ

Naganna Gowda shivamogga

#image_title

ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯುಜಿಡಿ ಕಾರ್ಮಿಕರು, ಎಸ್‌ಟಿಪಿ ಆಪರೇಟರ್‌ಗಳು ನೀರು ಸರಬರಾಜು ಸಹಾಯಕರನ್ನು ಪೌರ ಕಾರ್ಮಿಕರ ನೇರ ಪಾವತಿಗೆ ಒಳಪಡಿಸುವಂತೆ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಹೊರ ಗುತ್ತಿಗೆ ನೌಕರರ (Outsourcing Employees) ಸಂಘ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ (ಮಾ.6) ಮಾತನಾಡಿದ ರಾಜ್ಯ ಸಂಘದ ಅಧ್ಯಕ್ಷ ನಾಗಣ್ಣ ಗೌಡ, “ಫೆ.22ರಂದು ನಡೆಸಿದ ಹೋರಾಟದ ವೇಳೆ ಸರ್ಕಾರ ನೇರ ಪಾವತಿ ಘೋಷಿಸದಿದ್ದಲ್ಲಿ ಮಾ.13 ರಿಂದ ರಾಜ್ಯದ 330 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರು ಸ್ಥಗಿತಗೊಳಿಸಿ ಮುಖ್ಯಮಂತ್ರಿಗಳ ಮನೆ ಎದುರು ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಸಿತ್ತು. ಈಗ ಧರಣಿಯನ್ನು ಆರಂಭಿಸಲಾಗುವುದು” ಎಂದರು.

ಇದನ್ನೂ ಓದಿ: ಬ್ರಿಟಿಷ್​ ಆಳ್ವಿಕೆಗೂ ಪೂರ್ವ ಭಾರತದಲ್ಲಿ ವಿದ್ಯಾವಂತರ ಪ್ರಮಾಣ ಶೇ.70ರಷ್ಟಿತ್ತು, ಇಂಗ್ಲಿಷರಿಂದಲೇ ವ್ಯವಸ್ಥೆ ಹಾಳಾಯ್ತು: ಮೋಹನ್ ಭಾಗವತ್​

“ಈ ಬಗ್ಗೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆದಿದೆ. 1976ರ ಮುನಿಸಿಪಲ್ ಕಾಯ್ದೆ ಪ್ರಕಾರ ಎಲ್ಲ ಕಾರ್ಮಿಕರನ್ನು ಪೌರ ಕಾರ್ಮಿಕರೆಂದೇ ಗುರುತಿಸಲಾಗಿದೆ. ಆದರೆ, ಕಸ ಗುಡಿಸುವ ಪೌರ ಕಾರ್ಮಿಕರನ್ನಷ್ಟೇ ನೇರ ಪಾವತಿ ಹಾಗೂ ಕಾಯಂಗೊಳಿಸಿದ ಸರ್ಕಾರವು ಸ್ವಚ್ಛತೆಯಲ್ಲಿ ತೊಡಗಿಕೊಂಡ ಇನ್ನುಳಿದ ಪೌರ ಕಾರ್ಮಿಕರನ್ನು ನೇರ ಪಾವತಿಗೆ ತರಲಿಲ್ಲ” ಎಂದು ಹೇಳಿದರು.

“ಪೌರ ಕಾರ್ಮಿಕರಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಕಾರ್ಮಿಕರನ್ನು ಒಡೆದಾಳುವ ನೀತಿ ಅನುಸರಿಸುತ್ತಿದೆ. ನೇರ ಪಾವತಿ ಜಾರಿ ಮಾಡುವುದರಿಂದ ಸರ್ಕಾರಕ್ಕೆ ಶೇ. 18 ಜಿಎಸ್‌ಟಿ ಉಳಿತಾಯವಾಗಲಿದೆ. ಆದರೂ ಹೊರ ಗುತ್ತಿಗೆ ಏಜೆನ್ಸಿಗಳ ಲಾಬಿಗೆ ಮಣಿದಿರುವ ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ಇನ್ನುಳಿದ ಹೊರ ಗುತ್ತಿಗೆ ನೌಕರರ ನೇರ ಪಾವತಿಗೆ ಹಿಂದೇಟು ಹಾಕುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ಮಂಗಳೂರು ಸ್ಫೋಟ : ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಶಾರಿಕ್‌ ಪೂರ್ಣ ಚೇತರಿಕೆ; ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಮತ್ತೆ 10 ದಿನ NIA ಕಸ್ಟಡಿಗೆ

“ಬಹುತೇಕ ಗುತ್ತಿಗೆ ಏಜೆನ್ಸಿಗಳು ಬಿಜೆಪಿ ಸರ್ಕಾರದ ಬೆಂಬಲಿಗರಾಗಿದ್ದಾರೆ. ಈ ಬಿಜೆಪಿ ಬೆಂಬಲಿಗರು ಬೆರಳಣಿಕೆಯ ಏಜೆನ್ಸಿಗಳ ಹಿತಕಾಯುವ ಸಲುವಾಗಿ ಸಾವಿರಾರು ಹೊರ ಗುತ್ತಿಗೆ ನೌಕರರ ಹಿತಾಸಕ್ತಿಯನ್ನು ಬಲಿಪಶು ಮಾಡಲಾಗಿದೆ. ಈ ಸರ್ಕಾರ ಸ್ಪಷ್ಟವಾಗಿ ಹೊರ ಗುತ್ತಿಗೆ ಏಜೆನ್ಸಿಗಳ ಲಾಬಿಗೆ ಮಣಿದಿರುವ ನಿದರ್ಶನ ಇದಾಗಿದೆ” ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಪಾಲಿಕೆಯ ಹೊರ ಗುತ್ತಿಗೆ ನೌಕರರಾದ ಮನು, ಚಂದ್ರು, ಬಸವರಾಜ ಮತ್ತು ಸುರೇಶ್ ಮೊದಲಾದವರಿದ್ದರು.

ಇದನ್ನೂ ಓದಿ: Development: ಮುಂದುವರಿದ ಒಳಗೊಳ್ಳುವಿಕೆಯ ಅಭಿವೃದ್ಧಿಯ ಅನ್ವೇಷಣೆ

Exit mobile version