ಹೊಸನಗರ: ಪಟ್ಟಣದ ಬಸ್ ನಿಲ್ದಾಣದಲ್ಲಿನ (Bus stand) ಮಳಿಗೆಗಳು (shops )ಹಾಗೂ ಹೊಟೇಲ್ (Hotel) ಗೆ ಟೆಂಡರ್ (Tender) ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ, ತೆರೆಯುವಂತೆ ಆಗ್ರಹಿಸಿ, ಹೊಸನಗರದ ವರ್ತಕರ ಸಂಘ ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆ (Protest) ನಡೆಸಿದರು.
ಹೊಸನಗರ ತಾಲೂಕು ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ಅವರ ನೇತೃತ್ವದಲ್ಲಿ ಇಲ್ಲಿನ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರೆವಣಿಗೆ ನಡೆಸಿ, ಒತ್ತಾಯಿಸಲಾಯಿತು. ಬಳಿಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಪ್ರಭಾರ ತಹಸೀಲ್ದಾರ್ ರಾಕೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಪಟ್ಟಣದ ಮೂಲ ಸ್ಥಾನದಲ್ಲಿರುವ ಬಸ್ ನಿಲ್ದಾಣದ 8 ಅಂಗಡಿಗಳನ್ನು ತಕ್ಷಣ ಪಟ್ಟಣ ಪಂಚಾಯತಿಯವರು ಟೆಂಡರ್ ಪ್ರಕ್ರಿಯೆ ಮುಗಿಸಬೇಕು ಹಾಗೂ ಬಸ್ ನಿಲ್ದಾಣದ ಹೋಟೆಲ್ ಬಾಗಿಲು ಮುಚ್ಚಿದ್ದು ತಕ್ಷಣ ಹರಾಜು ಮಾಡಿ ಹೋಟೆಲ್ ತೆರೆಯಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: MiG-29: ಪಾಕ್- ಚೀನಾ ಬೆದರಿಕೆಗೆ ಭಾರತದ ಉತ್ತರ; ಶ್ರೀನಗರದಲ್ಲಿ ಮಿಗ್- 29 ಸ್ಕ್ವಾಡ್ರನ್
ಪಟ್ಟಣ ಪಂಚಾಯತಿಗೆ ಸೇರಿರುವ ಸುಮಾರು 8 ಮಳಿಗೆಗಳ ಜತೆಗೆ ಹೋಟೆಲ್ ಖಾಲಿ ಇದೆ. ಸುಮಾರು 11 ವರ್ಷಗಳಿಂದ ಬಸ್ ನಿಲ್ದಾಣದ ಮೇಲಿರುವ ಲಾಡ್ಜ್ ಗಳಿಗೆ ಇನ್ನೂ ಬಾಡಿಗೆಗೆ ಬಂದಿಲ್ಲ ಇಲ್ಲಿಯವರೆಗೆ ಪಟ್ಟಣ ಪಂಚಾಯತಿಗೆ ಸುಮಾರು 10 ಕೋಟಿ ರೂ. ನಷ್ಟು ನಷ್ಟ ಉಂಟಾಗಿದೆ.
ಇದಕ್ಕೆ ಅವೈಜ್ಞಾನಿಕ ದರ ನಿಗದಿಪಡಿಸಿದ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿ ಕಾರಣವಾಗಿದೆ, ತಕ್ಷಣ ಬಸ್ ನಿಲ್ದಾಣದ ಅಂಗಡಿಗಳು, ಹೋಟೆಲ್‌ಗಳು, ಲಾಡ್ಜ್ ಗಳನ್ನು ಟೆಂಡರ್ ಕರೆಯಬೇಕು ಹಾಗೂ ಹೊಸನಗರ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಹೊಸನಗರದಲ್ಲಿಯೇ ವಾಸವಿರುವಂತೆ ಶಾಸಕರು ಸೂಚಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: IND vs WI: ಭಾರತದ ಸರಣಿ ಸಮಬಲದ ಯೋಜನೆಗೆ ಮಳೆ ಅಡ್ಡಿ ಸಾಧ್ಯತೆ
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಹರೀಶ್ ಕೆ.ಆರ್, ಉಪ ಕಾರ್ಯದರ್ಶಿ ವಾದಿರಾಜ್‌ರ ಭಟ್, ಉಪಾಧ್ಯಕ್ಷರಾದ ಸುದೇಶ್ ಕಾಮತ್, ಶಿವಕುಮಾರ್, ಖಜಾಂಚಿ ದೀಪಕ್ ಸ್ವರೂಪ್, ವಿಠಲ್‌ರಾವ್, ನಿಂಗಮೂರ್ತಿ, ಪೂರ್ಣೇಶ್ ಸುರೇಶ ಬಿ.ಎಸ್, ವಿನಾಯಕ ಹೆದ್ಲಿ, ಪ್ರವೀಣ, ಭೋಜಪ್ಪ ಗೌಡ, ಪ್ರಶಾಂತ್, ವಿನಯಕುಮಾರ್, ಗುರುರಾಜ್, ಗೌತಮ್, ವಿಜಯ ಕುಮಾರ್, ಸುಧೀಂದ್ರ ಪಂಡಿತ್ ಮನೋಹರ, ರಾಘವೇಂದ್ರ ಗಣೇಶ, ವರ್ತಕರು ಪಾಲ್ಗೊಂಡಿದ್ದರು.