Site icon Vistara News

Shivamogga News: ಕೂಡಲೇ ಆರ್ಯ ಈಡಿಗರ ಅಭಿವೃದ್ಧಿ ನಿಗಮ ಸ್ಥಾಪಿಸಲು ಜಿಲ್ಲಾ ಆರ್ಯ ಈಡಿಗರ ಸಂಘ ಒತ್ತಾಯ

Arya Edigara Sangha shivamogga

#image_title

ಶಿವಮೊಗ್ಗ: “ಆರ್ಯ ಈಡಿಗರ ಅಭಿವೃದ್ಧಿ ನಿಗಮ ಕೂಡಲೇ ಸ್ಥಾಪನೆಯಾಗಬೇಕು” ಎಂದು ಜಿಲ್ಲಾ ಆರ್ಯ ಈಡಿಗರ ಸಂಘ (Arya Edigara Sangha) ಒತ್ತಾಯಿಸಿದೆ.

ಸೋಮವಾರ (ಫೆ.೨೦) ಪತ್ರಿಕಾಗೋಷ್ಠಿ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, “ಸರ್ಕಾರ 3 ತಿಂಗಳ ಹಿಂದೆ ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಆದರೆ ಭರವಸೆ ಹುಸಿಯಾಗಿದ್ದು, ಬಜೆಟ್‌ ನಲ್ಲಿ ಈ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ಈಡಿಗ ಸಮಾಜವು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ. ಸರಾಯಿ ಸೇಂದಿ ಮಾಡುತ್ತಾ ಬದುಕುತ್ತಿದ್ದ ಈ ಸಮಾಜಕ್ಕೆ ಈಗ ಅದೂ ಇಲ್ಲ” ಎಂದು ದೂರಿದರು.

“ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ಕೂಡ ಇಲ್ಲವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕೂಡ ಹಾಗೆಯೇ ಉಳಿದಿದೆ. ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳು ಹದಿನೈದು ದಿನದ ಒಳಗಾಗಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ ಅದು ಹಾಗೇ ಉಳಿದಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೂಡ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ನಮ್ಮ ಸಮುದಾಯವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ” ಎಂದು ದೂರಿದರು.

ಇದನ್ನೂ ಓದಿ: Onion price reduction : ರಾಜ್ಯದ ಮಾರುಕಟ್ಟೆಗೆ ಪೂರೈಕೆಯಲ್ಲಿ ಹೆಚ್ಚಳ, ಈರುಳ್ಳಿ, ಆಲೂಗಡ್ಡೆ ದರ ಇಳಿಕೆ

“ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಸಂಬಂಧ ಇನ್ನೂ ಯಾವ ತೀರ್ಮಾನವೂ ಆಗಿಲ್ಲ. ಈ ಹಿಂದೆ ನಮ್ಮ ಸಮಾಜದ ವತಿಯಿಂದ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನಾಯಕ ಬಂಗಾರಪ್ಪನವರ ಹೆಸರಿಡುವಂತೆ ಮನವಿ ಮಾಡಿದ್ದೆವು. ಈಗಲೂ ಬಂಗಾರಪ್ಪನವರ ಹೆಸರನ್ನೇ ಇಡಬೇಕು ಎಂದು ಒತ್ತಾಯಿಸುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Sindhuri Vs Roopa : ಓದುವಾಗಲೇ 3 ಬಾರಿ ಕಾಲೇಜು ಬದಲಾಯಿಸಿದ್ದ ರೋಹಿಣಿ ಸಿಂಧೂರಿ; ಅವರ ಈ ವಿಷಯಗಳು ನಿಮಗೆ ಗೊತ್ತೇ?

Exit mobile version