ರಿಪ್ಪನ್‌ಪೇಟೆ: ಕೆನಡಾದ (Canada) ಟೊರಾಂಟೋ (Toronto) ನಗರದ ಜಿನಮಂದಿರದಲ್ಲಿ 24 ತೀರ್ಥಂಕರರ ಭವ್ಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ವಿಧಿ-ವಿಧಾನಗಳ ನೇತೃತ್ವ, ಜೈನ ಧರ್ಮದ ಬಗ್ಗೆ ಪ್ರವಚನ ಹಾಗೂ ದಿವ್ಯ ಮಾರ್ಗದರ್ಶನ ನೀಡಲು ಹೊಸನಗರ ತಾಲೂಕಿನ ಹೊಂಬುಜ ಅತಿಶಯ ಶ್ರೀಕ್ಷೇತ್ರ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕೆನಡಾ ದೇಶದ ಟೊರಾಂಟೋ ನಗರಕ್ಕೆ ಸೋಮವಾರ ತೆರಳಿದರು.
ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಅತಿಶಯ ಶ್ರೀಕ್ಷೇತ್ರ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪಟ್ಟಾಭಿಷಿಕ್ತರಾಗಿ 11 ವರ್ಷದ ಬಳಿಕ ಪ್ರಥಮ ಬಾರಿಗೆ ವಿದೇಶದಲ್ಲಿ ಜೈನ ಧರ್ಮದ ಬಗ್ಗೆ ಪ್ರವಚನ ನೀಡಲಿದ್ದಾರೆ. ಜೂ. 24 ರಿಂದ 28 ರವರೆಗೆ ಟೊರಂಟೋ ಜಿನಮಂದಿರದ ಪಂಚಕಲ್ಯಾಣ ವಿಧಾನಗಳಿವೆ.
ಇದನ್ನೂ ಓದಿ: Bangalore Traffic: ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ ಡ್ರೋನ್ ಕಣ್ಗಾವಲು; ಹೀಗಿರಲಿದೆ ಮೇಲ್ನೋಟ!
ಹೊಂಬುಜ ಶ್ರೀ ಕ್ಷೇತ್ರದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀಕ್ಷೇತ್ರಪಾಲ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀಗಳವರಿಗೆ ಶ್ರೀಮಠದ ಭಕ್ತರಿಂದ, ಪುರೋಹಿತವರ್ಗ, ಸಿಬ್ಬಂದಿ ಭಕ್ತಿಪೂರ್ವಕ ಶುಭಾಶಯಗಳನ್ನು ಸಮರ್ಪಿಸಲಾಯಿತು.
ಇದನ್ನೂ ಓದಿ: Yoga For Senior Citizens: ಹಿರಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?
ಜೈನ ಧರ್ಮದ ಧಾರ್ಮಿಕ ಪೂಜಾ ವಿಧಿ, ಧರ್ಮಸಿದ್ಧಾಂತ, ಆಚಾರ ವಿಚಾರ ಮತ್ತು ಆಹಾರವಿಧಿ-ಪರಿಸರ ರಕ್ಷಣೆಯೊಂದಿಗೆ ಶೈಕ್ಷಣಿಕ ಪ್ರಗತಿಗಾಗಿ ಪ್ರಭಾವನಾ ಪ್ರವಚನ ನೀಡಲಿದ್ದಾರೆ ಎಂದು ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಮಾಧ್ಯಮದವರಿಗೆ ತಿಳಿಸಿದರು.