Site icon Vistara News

Shivamogga News: ಸೊರಬ; ಬೆನ್ನೂರು, ಜಡೆ ಗ್ರಾಮ ಪಂಚಾಯಿತಿಗಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Election of new president and vice president for Bennur Grama Panchayat

ಸೊರಬ: ತಾಲೂಕಿನ ಚಂದ್ರಗುತ್ತಿ (Chandragutti) ಹೋಬಳಿಯ ಬೆನ್ನೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ (President and Vice president) ಆಯ್ಕೆಯ ಚುನಾವಣೆಯಲ್ಲಿ (Election) ಬಿಜೆಪಿ (BJP) ಬೆಂಬಲಿತರಾದ ಶಿಲ್ಪಾರವಿ ಅಧ್ಯಕ್ಷರಾಗಿ ಹಾಗೂ ಎ. ಮಂಜುನಾಥ್ ನಾಯ್ಕ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಅ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 9 ಸದಸ್ಯರ ಬಲವುಳ್ಳ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರು ಬಿಜೆಪಿಯವರಾಗಿದ್ದು ಎಲ್ಲರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಚಂದ್ರಕಲಾ ಹಾಗೂ ಶಿಲ್ಪಾ ರವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎ. ಮಂಜುನಾಥ ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಅದರೇ ಚಂದ್ರಕಲಾ ಅವರು ಚುನಾವಣೆ ಉದ್ದೇಶಕ್ಕೆ ನೀಡಿರುವ ಜಾತಿ ಪ್ರಮಾಣ ಪತ್ರ ಒದಗಿಸದೆ ಇರುವ ಕಾರಣ ನಾಮಪತ್ರವನ್ನು ತಿರಸ್ಕರಿಸಲಾಯಿತು.

ಇದನ್ನೂ ಓದಿ: NCC Training : ಎನ್‌ಸಿಸಿ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದಲ್ಲಿ ಐಟಿಐ ಸೆಂಟ್ರಲ್‌ ಶಾಲೆಯ NCC TEAM ಭಾಗಿ

ಅಂತಿಮವಾಗಿ ಕಣದಲ್ಲಿ ಶಿಲ್ಪಾ ರವಿ ಮಾತ್ರ ಉಳಿದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ದಂಡಾವತಿ ಜಲಾನಯನ ಯೋಜನೆಯ ವಿಭಾಗದ ಸಹಾಯಕ ಅಭಿಯಂತರ ಸಂಪತ್ ಕುಮಾರ್ ಅವರು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.

ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಚಂದ್ರಗುತ್ತಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜು ಕೆಂಚಿಕೊಪ್ಪ, ಮುಖಂಡರಾದ ಡಾ. ಜ್ಞಾನೇಶ್ ಕೊಡಕಣಿ, ಮಾಜಿ ಜಿಪಂ ಸದಸ್ಯ ಗುರುಕುಮಾರ ಪಾಟೀಲ್, ಈಶ್ವರ ಚನ್ನಪಟ್ಟಣ, ಪರಮೇಶ್ ಮಣ್ಣತ್ತಿ, ಸುರೇಶ್ ಉದ್ರಿ, ಗ್ರಾಪಂ ಸದಸ್ಯರಾದ ರಾಧಮ್ಮ, ಎಂ.ಕೆ, ದೇವರಾಜ, ಯಶೋಧ, ಎಸ್. ವಿನಾಯಕ್ ಈರಮ್ಮ, ಸಣ್ಣಪ್ಪ, ಸೇರಿದಂತೆ ಇತರರಿದ್ದರು.

ಜಡೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಸೊರಬ ತಾಲೂಕಿನ ಜಡೆ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಮಿತ್‍ಗೌಡ ಅಧ್ಯಕ್ಷರಾಗಿ ಹಾಗೂ ಲಕ್ಷಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.

17 ಸದಸ್ಯರ ಬಲವುಳ್ಳ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಬ’ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ‘ಅ’ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ಗೌಡ ಅವರು ನಾಮಪತ್ರ ಹಿಂಪಡೆದರು. ನಂತರ ನಡೆದ ಚುನಾವಣೆಯಲ್ಲಿ ಅಮಿತ್ ಗೌಡ 12 ಮತಗಳನ್ನು ಪಡೆದರೆ, ಎಸ್. ರಾಜು 5 ಮತಗಳನ್ನು ಪಡೆದರು. ಅಮಿತ್‍ಗೌಡ ಅಧ್ಯಕ್ಷರಾಗಿ ಆಯ್ಕೆಯಾದರು.

ಇದನ್ನೂ ಓದಿ: Gruha Lakshmi Scheme : ಆಗಸ್ಟ್‌ 27ಕ್ಕೆ ಎಲ್ಲರ ಮನೆಗೆ ಗೃಹಲಕ್ಷ್ಮಿ; ಸಿಗಲಿದೆ ಪಿಂಕ್‌ ಸ್ಮಾರ್ಟ್‌ ಕಾರ್ಡ್‌!

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮಮ್ಮ 13 ಪಡೆದರೆ, ಎಸ್. ಕೆಂಚಮ್ಮ ನಾಲ್ಕು ಮತಗಳನ್ನು ಪಡೆದರು. ಲಕ್ಷಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಧನಂಜಯಪ್ಪ ಕರ್ತವ್ಯ ನಿರ್ವಹಿಸಿದರು. ಗ್ರಾಪಂ ಪಿಡಿಒ ಎಸ್. ಚಿದಾನಂದ ಸಹಕರಿಸಿದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಜಡೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾದರು.

ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದ ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿಲ್ಲದಿದ್ದರೂ ಸಹ ಗ್ರಾಪಂ ಸದಸ್ಯರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದಾರೆ. ಕ್ಷೇತ್ರದಲ್ಲಿ ಸುಮಾರು 18 ಗ್ರಾಪಂ ಆಡಳಿತ ಬಿಜೆಪಿಯ ತೆಕ್ಕೆಗೆ ಬರಲಿದೆ. ಜಡೆ ಪಂಚಾಯಿತಿಯಲ್ಲಿ ಈ ಹಿಂದಿನ ಅಧ್ಯಕ್ಷರು ಉತ್ತಮವಾಗಿ ಆಡಳಿತ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉತ್ತಮವಾದ ಜನಪರ ಆಡಳಿತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಈ ವೇಳೆ ನೂತನ ಅಧ್ಯಕ್ಷ ಅಮಿತ್ ಗೌಡ ಮಾತನಾಡಿದರು.

ಇದನ್ನೂ ಓದಿ: Beauty Product Awareness: ಆನ್‌ಲೈನ್‌ನಲ್ಲಿ ಬ್ಯೂಟಿ ಪ್ರಾಡಕ್ಟ್‌ ಆರ್ಡರ್‌ ಮಾಡುವಾಗ ಇದು ತಿಳಿದಿರಲಿ

ಗ್ರಾಪಂ ಸದಸ್ಯರಾದ ನಾಗರಾಜ ಗೌಡ, ಪಾಲಾಕ್ಷಪ್ಪ, ರಮೇಶ, ವಿರೂಪಾಕ್ಷಪ್ಪ, ಶೋಭಮ್ಮ, ಪೂಜಾ, ಸುಜಾತಮ್ಮ, ಶೈಲಾ, ಮುಖಂಡರಾದ ಡಾ.ಎಚ್.ಇ. ಜ್ಞಾನೇಶ್, ಗುರುಕುಮಾರ್ ಪಾಟೀಲ್, ರಾಜುಗೌಡ ತುಮರಿಕೊಪ್ಪ, ನಾಗರಾಜ ಗೌಡ, ಪ್ರಕಾಶ್ ಗೌಡ, ಅಭಿಷೇಕ್ ಗೌಡ ಬೆನ್ನೂರು, ಸುರೇಶ್ ಉದ್ರಿ, ಶಿವಮೂರ್ತಿ ಗೌಡ, ನಾಗರಾಜ ಕಲ್ಕೊಪ್ಪ, ರಾಘವೇಂದ್ರ ಜಡೆ, ವಿನಯ್ ಗೌಡ, ಶಿವಕುಮಾರ್ ಗೌಡ ಸೇರಿದಂತೆ ಇತರರಿದ್ದರು.

Exit mobile version