ರಿಪ್ಪನ್‌ಪೇಟೆ: ಸಮೀಪದ ಕೆಂಚನಾಲ (Kenchanala) ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಆಧ್ಯಕ್ಷರಾಗಿ (President) ಕಾಂಗ್ರೆಸ್ (Congress) ಬೆಂಬಲಿತ ಸದಸ್ಯ ಉಬೇದುಲ್ಲಾ ಷರೀಫ್, ಉಪಾಧ್ಯಕ್ಷರಾಗಿ (Vice President) ಕಾಂಗ್ರೆಸ್ ಬೆಂಬಲಿತ ಸದಸ್ಯೆ ರಮ್ಯ ಶಶಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
9 ಸದಸ್ಯರನ್ನು ಹೊಂದಿರುವ ಕೆಂಚನಾಲ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಉಬೇದುಲ್ಲಾ ಷರೀಫ್ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ರಮ್ಯ ಶಶಿಕುಮಾರ್ ನಾಮಪತ್ರ ಸಲ್ಲಿಸಿದ್ದರು. ನಿಗದಿತ ಅವಧಿಯೊಳಗೆ ಬೇರೆ ಯಾರು ನಾಮಪತ್ರ ಸಲ್ಲಿಸದೇ ಇರುವುದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: Education News : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮೊತ್ತ 25 ಸಾವಿರ ರೂ.ಗೆ ಏರಿಕೆ
ಚುನಾವಣಾಧಿಕಾರಿಯಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಸಹಾಯಕ ಕಾರ್ಯಪಾಲಕ ಶಿವಪ್ರಸಾದ್ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್, ಬಿ.ಪಿ. ರಾಮಚಂದ್ರ, ಈಶ್ವರಪ್ಪ ಗೌಡ, ಮಂಜುನಾಥ್ ಮಳವಳ್ಳಿ, ಮಂಜುನಾಥ್ ಮಾದಾಪುರ ಹಾಗೂ ಇತರರು ಶುಭಾಶಯ ಕೋರಿದರು.
ಇದನ್ನೂ ಓದಿ: Tilak Varma: ವಿರಾಟ್ ಕೊಹ್ಲಿಯ ದಾಖಲೆ ಮುರಿಯಲು ಸಿದ್ಧವಾದ ತಿಲಕ್ ವರ್ಮಾ
ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಸದಸ್ಯರಾದ ಪುಟ್ಟಮ್ಮ, ಮೊಹಮ್ಮದ್ ಷರೀಫ್, ಲಕ್ಷ್ಮಮ್ಮ, ಹೂವಮ್ಮ, ಕೃಷ್ಣೋಜಿರಾವ್, ಇತರರಿದ್ದರು.