Site icon Vistara News

Shivamogga News: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆಟ, ಪಾಠ ಸಮನಾಗಿ ಪ್ರೋತ್ಸಾಹಿಸಿ: ಪ್ರಸನ್ನನಾಥ ಸ್ವಾಮೀಜಿ

adichunchanagiri math Prasannanatha Swamiji BGS School shivamogga

#image_title

ಶಿವಮೊಗ್ಗ: ‘ವಿದ್ಯಾರ್ಥಿಗಳನ್ನು ಆಟ, ಪಾಠ ಎರಡೂ ವಿಷಯಗಳಲ್ಲಿ ಸಮನಾಗಿ ಪ್ರೋತ್ಸಾಹಿಸಬೇಕು’ (Shivamogga News) ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ನಗರದ ಗುರುಪುರ ಬಡಾವಣೆಯಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಬಿಜಿಎಸ್ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪೋಷಕರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ʼಕೇವಲ ಒಂದು ವಿಷಯದಲ್ಲಿ ಮಾತ್ರ ಮಕ್ಕಳನ್ನು ಪ್ರೋತ್ಸಾಹಿಸಿದರೆ ಸಾಲದು, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಆಟ-ಪಾಠ ಎರಡೂ ಕೂಡ ಸಮನಾಗಿ ಬೇಕಾಗುತ್ತದೆ’ ಎಂದು ಹೇಳಿದರು.

ಇದನ್ನೂ ಓದಿ: PM Modi Tripura Campaign: ತ್ರಿಪುರ ರಾಜ್ಯವನ್ನು ಭಯ-ಹಿಂಸಾಚಾರ ಮುಕ್ತಗೊಳಿಸಿದೆ ಬಿಜೆಪಿ ಸರ್ಕಾರ: ಪ್ರಧಾನಿ ಮೋದಿ

‘ಮಗು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತದೆಯೋ, ಆ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ದುರಂತವೆಂದರೆ ನಮ್ಮ ಪೋಷಕರು ತಮ್ಮ ಮನದ ಆಸೆಯನ್ನು ಮಗುವಿನ ಮೇಲೆ ಹೇರುತ್ತಿದ್ದಾರೆ. ಇದರಿಂದ ಮಗು ತನ್ನ ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಶಿಕ್ಷಕರು ಕೂಡ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ʼಕೆಲವು ಮಕ್ಕಳು ಆಟ-ಪಾಠ ಎರಡರಲ್ಲಿಯೂ ಆಸಕ್ತಿಯನ್ನು ತೋರುವುದಿಲ್ಲ. ಅಂತಹ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಆ ಮಗುವಿನಲ್ಲಿ ಆಸಕ್ತಿಯನ್ನು ಕೆರಳಿಸಬೇಕು, ಅದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಪ್ರತಿಯೊಂದು ಮಗುವಿನಲ್ಲಿಯೂ ತನ್ನದೇ ಆದ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ತೆಗೆಯುವಂತಹ ಕಾರ್ಯ ಮಾಡಬೇಕಾದದ್ದು ಎಲ್ಲರ ಜವಾಬ್ದಾರಿʼ ಎಂದರು.

ಇದನ್ನೂ ಓದಿ: IND VS AUS: ಅಶ್ವಿನ್​ ಸ್ಪಿನ್​ ದಾಳಿಗೆ ತತ್ತರಿಸಿದ ಆಸೀಸ್​; ಭಾರತಕ್ಕೆ ಇನಿಂಗ್ಸ್​ ಗೆಲುವು

ʼಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಗು ರ‍್ಯಾಂಕ್ ಬಂದರೆ ಸಾಕು ಎಂಬ ಗುರಿಯನ್ನು ಹೊಂದಿರುತ್ತಾರೆ. ರ‍್ಯಾಂಕ್ ಬರುವುದರಿಂದ ಮಗು ತನ್ನ ಜೀವನವನ್ನು ಭದ್ರ ಮಾಡಿಕೊಂಡಂತಾಗುತ್ತದೆ. ಆದರೆ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಿದರೆ ನಿಮ್ಮ ಮಕ್ಕಳು ವಿಶ್ವದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಅದರ ಹಿರಿಮೆ ನಿಮಗೆ ಸಲ್ಲುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ, ಆ ಮೂಲಕ ವಿಶ್ವದಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರಿಸಲು ಕೈಜೋಡಿಸಿʼ ಎಂದು ಕಿವಿ ಮಾತು ಹೇಳಿದರು.

ಇದನ್ನೂ ಓದಿ: Amit Shah in Karavali : ಕರಾವಳಿಯಲ್ಲಿ ಅಮಿತ್‌ ಶಾ ಹವಾ, ಆರುವರೆ ಗಂಟೆ ಕಾಲ ಮಿಂಚಿನ ಸಂಚಾರಕ್ಕೆ ಕ್ಷಣಗಣನೆ

ʼಪ್ರಧಾನ ಮಂತ್ರಿಯಾದರೂ ದೇಶಕ್ಕೆ ಸೀಮಿತರಾಗುತ್ತಾರೆ. ಒಬ್ಬ ಕ್ರೀಡಾಪಟು ವಿಶ್ವದ ಆಸ್ತಿಯಾಗುತ್ತಾನೆ. ಇದರ ಸೂಕ್ಷ್ಮತೆಯನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಭಾರತ ರತ್ನ ಪ್ರಶಸ್ತಿಗೂ ಕೂಡ ಭಾಜನರಾಗುವ ಅವಕಾಶವಿದೆʼ ಎಂದು ಹೇಳಿದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕ ಹಿರಣ್ಣಯ್ಯ ಹೆಗಡೆ, ವಾಸಪ್ಪ ಗೌಡ, ಸತೀಶ್ ಡಿ.ವಿ ., ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್, ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗುರುಪುರ ಪ್ರಾಂಶುಪಾಲ ಸುರೇಶ್, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಇದನ್ನೂ ಓದಿ: GST Collection record : ಜನವರಿಯಲ್ಲಿ 6,085 ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಹೊಸ ದಾಖಲೆ ಬರೆದ ರಾಜ್ಯ: ಬೊಮ್ಮಾಯಿ ಹರ್ಷ

Exit mobile version