Site icon Vistara News

Shivamogga News: ಗೃಹ, ಅಡುಗೆ ಕಾರ್ಮಿಕ, ಕ್ಷೌರಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಿ: ಕುಪೇಂದ್ರ ಆಯನೂರು

Kupendra Ayanur shivamogga

#image_title

ಶಿವಮೊಗ್ಗ: “ವಿದ್ಯಾನಿಧಿ ಯೋಜನೆಯನ್ನು ಗೃಹ ಕಾರ್ಮಿಕರ, ಅಡುಗೆ ಕಾರ್ಮಿಕರ (Cooking workers) ಮತ್ತು ಕ್ಷೌರಿಕರ ಅಸಂಘಟಿತ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಬೇಕು” ಎಂದು ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಆಗ್ರಹಿಸಿದೆ.

ಪತ್ರಿಕಾ ಭವನದಲ್ಲಿ ಸೋಮವಾರ (ಮಾ.6) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಸ್ಥಾಪಕ ಅಧ್ಯಕ್ಷ ಕುಪೇಂದ್ರ ಆಯನೂರು, “ರಾಜ್ಯದಲ್ಲಿ ವಿವಿಧ ಸಮಸ್ಯೆಗಳೊಂದಿಗೆ ಬದುಕು ಕಟ್ಟಿಕೊಂಡಿರುವ ಅಸಂಘಟಿತ ಕಾರ್ಮಿಕ ಸಮೂಹ ತನ್ನ ಕಾಯಕವನ್ನು ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸಫಲವಾಗಿಲ್ಲ. ಚಾಲಕರು ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚನೆಯನ್ನು ಅನುಷ್ಠಾನಗೊಳಿಸಿದ್ದರೆ ರಾಜ್ಯದ 25 ಲಕ್ಷ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳು ದೊರಕಲು ಸಾಧ್ಯವಾಗುತ್ತಿತು” ಎಂದರು.

ಇದನ್ನೂ ಓದಿ: Bill Gates: ಬ್ರಿಡ್ಜ್​ ಚಾಂಪಿಯನ್​ಶಿಪ್​ ವಿಜೇತ ಅನ್ಶುಲ್ ಭಟ್ ಭೇಟಿಯಾದ ಬಿಲ್ ಗೇಟ್ಸ್

“ಆದರೆ ಇದನ್ನು ಸರ್ಕಾರ ಮಾಡದೆ ಹಿಂದೆ ಚಾಲಕ ಮತ್ತು ನಿರ್ವಾಹಕರಿಗೆ ಇದ್ದ ಅಪಘಾತ ವಿಮೆಯನ್ನು ಕ್ಲೀನರ್ ಮತ್ತು ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಸ್ತರಿಸಿದ್ದಾರೆ ಅಷ್ಟೆ.  ಇದನ್ನೇ ಮಂಡಳಿಯನ್ನಾಗಿ ಮಾಡಿದ್ದರೆ ಇವರಿಗೆ ಇನ್ನೂ ಉತ್ತಮ ಸೌಲಭ್ಯ ಸಿಗುತ್ತಿತ್ತು. ಈಗಲಾದರೂ ಮುಖ್ಯಮಂತ್ರಿಯು ಮಂಡಳಿಯನ್ನು ರಚನೆ ಮಾಡಲು ಸಂಘ ಒತ್ತಾಯಿಸುತ್ತದೆ” ಎಂದರು.

ಇದನ್ನೂ ಓದಿ: Shivarajkumar: ʻಜವಾನ್‌ʼ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌?

“ಅಸಂಘಟಿತ ಕಾರ್ಮಿಕ ವಲಯದಲ್ಲಿ ಇರುವ 11 ವಲಯಗಳ ಜತೆಯಲ್ಲಿ ಅಡುಗೆ ಕಾರ್ಮಿಕರನ್ನು, ಮಾಂಸದ ಅಂಗಡಿಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ, ಬ್ಯೂಟಿಪಾರ್ಲರ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸೇರಿಸಿದರೆ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತದೆ. ತಕ್ಷಣ ಈ ಬೇಡಿಕೆಗಳ ಅನುಷ್ಠಾನವಾಗಬೇಕು ಎಂದು ಸಂಘವು ಸರ್ಕಾರವನ್ನು ಒತ್ತಾಯಿಸುವುದು. ಒಂದು ವೇಳೆ ಅನುಷ್ಠಾನಗೊಳ್ಳದಿದ್ದಲ್ಲಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಂಘವು ನೀಡುವುದು” ಎಂದು ಹೇಳಿದರು.

ಇದನ್ನೂ ಓದಿ: International Women’s Day 2023 : ಮಹಿಳಾ ದಿನಾಚರಣೆ ಆರಂಭವಾಗಿದ್ದು ಹೇಗೆ? ಏನಿದರ ಮಹತ್ವ?

ಸಂಘದ ರಾಜ್ಯಾಧ್ಯಕ್ಷ ಕೇಶವಮೂರ್ತಿ ಕೆ. ಪೇಟ್ಕರ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಮೇಘಾ ಮೋಹನ ಜೆಟ್ಟಿ, ಕಾನೂನು ಸಲಹೆಗಾರ ಚೇತನ್ ಲಕ್ಕಪ್ಪ, ಬ್ರಾಹ್ಮಣ ಅಡುಗೆ ತಯಾರಕ ಸಂಘದ ಅಧ್ಯಕ್ಷ ಜಿ.ಕೆ. ಮಾಧವ ಮೂರ್ತಿ, ಸುರೇಖಾ ಪಾಲಾಕ್ಷಪ್ಪ ಹಾಜರಿದ್ದರು.

ಇದನ್ನೂ ಓದಿ: Delhi Liquor policy case: ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನ

Exit mobile version