Site icon Vistara News

Shivamogga News: ಸಾಗರದ ಉಪವಿಭಾಗಾಧಿಕಾರಿ ಕಚೇರಿಯ ನಿವೃತ್ತ ನೌಕರ ಕೃಷ್ಣಪ್ಪಗೆ ಬೀಳ್ಕೊಡುಗೆ

Special Farewell to retired employee Krishnappa at Sagara

ಸಾಗರ: ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಡಿ. ದರ್ಜೆ ನೌಕರನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ (Retirement) ಹೊಂದಿದ ಕೃಷ್ಣಪ್ಪ ಅವರಿಗೆ ಸೋಮವಾರ ಬೀಳ್ಕೊಡುಗೆ ಕಾರ್ಯಕ್ರಮ (Farewell program) ಹಮ್ಮಿಕೊಳ್ಳಲಾಗಿತ್ತು.

ಸಾಗರ ಉಪವಿಭಾಗಾಧಿಕಾರಿ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿಶೇಷ ಗೌರವದೊಂದಿಗೆ ಬೀಳ್ಕೊಡಲಾಯಿತು.

ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ನಿವೃತ್ತಿಯಾದ ಡಿ ದರ್ಜೆ ನೌಕರ ಕೃಷ್ಣಪ್ಪ ಅವರನ್ನು ತಮ್ಮ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಮನೆಗೆ ತಲುಪಿಸಿ, ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಡಿ ದರ್ಜೆ ನೌಕರ ಮತ್ತು ಅಧಿಕಾರಿ ಎನ್ನುವ ಬೇಧಭಾವ ತೋರದೇ ಇರುವ ಅಧಿಕಾರಿಗಳ ಕಾರ್ಯ ಮಾದರಿಯಾಯಿತು.

Exit mobile version