ಸಾಗರ: ತಾಳಗುಪ್ಪ ಭಾಗದ ಚೂರಿಕಟ್ಟೆ ಅರಣ್ಯ ಇಲಾಖೆಯ (Forest Department) ನೆಡುತೋಪಿನಲ್ಲಿ ಎಂಪಿಎಂ ನಿಂದ ನೀಲಗಿರಿ (Nilgiri), ಅಕೇಶಿಯಾ (Acacia Plant) ಗಿಡಗಳನ್ನು ನೆಟ್ಟು ಪರಿಸರಕ್ಕೆ (Environment) ಮಾರಕವಾದ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ, ಗುರುವಾರ ರೈತ ಸಂಘದ ವತಿಯಿಂದ ಉಳುಮೆಗೆ ತಂದಿದ್ದ ಟ್ರ್ಯಾಕ್ಟರ್ ತಡೆದು ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೂರಲಕೆರೆ ಚಂದ್ರಶೇಖರ್ ಮಾತನಾಡಿ, ಈ ಭಾಗದಲ್ಲಿ ಎಂಪಿಎಂ ಅಕೇಶಿಯಾ, ನೀಲಗಿರಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ. ನಮ್ಮ ಭಾಗದ ಸಹಜ ಅರಣ್ಯಗಳು ಇದರಿಂದ ನಾಶವಾಗುವ ಸಾಧ್ಯತೆ ಇದೆ. ಈ ಭಾಗದ ರೈತರಿಗೆ ಸೊಪ್ಪು ಮತ್ತು ಜಾನುವಾರುಗಳಿಗೆ ಅಕೇಶಿಯಾ ಮತ್ತು ನೀಲಗಿರಿಯಿಂದ ಮೇವು ದೊರೆಯದಂತೆ ಆಗಿದೆ. ತಕ್ಷಣ ಅರಣ್ಯ ಇಲಾಖೆ ಸಹಜ ಅರಣ್ಯ ಬೆಳೆಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ಮನೆ ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ
ಪರಿಸರವಾದಿ ಪೂರ್ಣಿಮಾ ನವಿಲುಮನೆ ಮಾತನಾಡಿ ಈ ಭಾಗದ ಕೆರೆಕಟ್ಟೆಗಳು ಹೈಬ್ರಿಡ್ ತಳಿಯ ಹಾವಳಿಯಿಂದ ಬತ್ತಿ ಹೋಗಿದೆ. ರೈತರಿಗೆ ಅಸಹಜ ಅರಣ್ಯ ಶಾಪವಾಗುತ್ತಿದೆ. ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುವ ಸಸಿಗಳನ್ನು ನೆಡುವತ್ತ ಸರ್ಕಾರ ಅರಣ್ಯ ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ತುಂತುರು, ಕರಾವಳಿಯಲ್ಲಿ ವ್ಯಾಪಕ ಮಳೆ
ಪ್ರಕಾಶ್ ಗೂರಲುಕೆರೆ ಮಾತನಾಡಿದರು. ರಾಜೇಂದ್ರ ಗಾಲಿಮನೆ, ರಾಘವೇಂದ್ರ ಚೂರಿಕಟ್ಟೆ, ಶ್ರೀಕಾಂತ ಗುಡ್ಡೆಮನೆ, ಗಣಪತಿ, ಕನ್ನಮ್ಮ ಇನ್ನಿತರರು ಹಾಜರಿದ್ದರು.