Site icon Vistara News

Shivamogga News: ಅಕ್ರಮ ಗೋವು ಸಾಗಾಟ; ಜಾನುವಾರುಗಳ ಸಹಿತ ಆರೋಪಿಗಳ ವಶ

Illegal cow transportation Custody of accused along with cattle at Ripponpet

ರಿಪ್ಪನ್‌ಪೇಟೆ: ಸಮೀಪದ ತಳಲೆ ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ (Illegal cow transportation) ಮಾಡುತ್ತಿದ್ದ ಆರೋಪಿಗಳನ್ನು (accused) ವಾಹನ ಸಮೇತ ವಶಕ್ಕೆ ಪಡೆದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ತಳಲೆ ವೃತ್ತದಲ್ಲಿ ಮುಗುಡ್ತಿ ಅರಣ್ಯ ವಲಯದ ಸಿಬ್ಬಂದಿಗಳು ತಡರಾತ್ರಿ ಗಸ್ತಿನಲ್ಲಿರುವಾಗ ಕಳಸೆ ಬೆಳ್ಳೂರು ಮಾರ್ಗದಿಂದ ರಿಪ್ಪನ್ ಪೇಟೆಯತ್ತ ಚಲಿಸುತ್ತಿದ್ದ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ನೆಡೆಸಿದಾಗ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Match Fixing : ಶ್ರೀಲಂಕಾದ ಮಾಜಿ ಕ್ರಿಕೆಟಿಗನಿಗೆ ಪ್ರಯಾಣ ನಿಷೇಧ

ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರಿಪ್ಪನ್ ಪೇಟೆ ಪೊಲೀಸರು ಐದು ಜಾನುವಾರುಗಳು ಹಾಗೂ ಮೂವರು ಆರೋಪಿಗಳನ್ನು ಮತ್ತು ಗೂಡ್ಸ್ ವಾಹನವೊಂದನ್ನು ವಶಕ್ಕೆ ಪಡೆಯಲಾಗಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.

ಈ ಸಂಧರ್ಭದಲ್ಲಿ ಸ್ಥಳೀಯ ಗೋ ರಕ್ಷಕರಾದ ಹೊಸನಗರ ತಾಲೂಕು ಬಜರಂಗದಳದ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೆರೆಹಳ್ಳಿ, ಮಧುಸೂದನ್ ರವರು ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು ಹಾಗೂ ಇಂತಹ ಅಕ್ರಮ ಕೃತ್ಯಗಳು ಎಸಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕಾರ್ಯಚರಣೆಯಲ್ಲಿ ಪಿಎಸ್ಐ ಪ್ರವೀಣ್ ಎಸ್ ಪಿ, ಉಮೇಶ್ ಕೆ ಎಚ್, ಸಂತೋಷ್, ಶಿವಕುಮಾರ್ ಪಾಲ್ಗೊಂಡಿದ್ದರು.

Exit mobile version