ಸೊರಬ: ಪಟ್ಟಣದ ಎಚ್.ಪಿ.ಆರ್. ನರ್ಸಿಂಗ್ ಕಾಲೇಜಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸೊರಬ ಪ್ರೆಸ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಕಾರ್ಗಿಲ್ ಯುದ್ಧದ ನೆನಪಿಗೆ ವಿಜಯೋತ್ಸವ ದಿನ (Kargil Vijay Divas) ಆಚರಿಸಲಾಯಿತು.
ನಿವೃತ್ತ ಯೋಧ ಜಗದೀಶ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು ವಿಜಯ ಗಳಿಸಿದ ದಿನವನ್ನು ಪ್ರತಿ ವರ್ಷ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Koppala News: ನಿರಂತರ ಮಳೆ; ಮುನ್ನೆಚ್ಚರಿಕೆ ಕ್ರಮ ವಹಿಸಿ: ಸಚಿವ ಶಿವರಾಜ್ ತಂಗಡಗಿ
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ರಾಘವೇಂದ್ರ ಟಿ. ಮಾತನಾಡಿ, ದೇಶ ಪ್ರೇಮವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಂಡರೆ ಸಹಜವಾಗಿ ಮತ್ತಷ್ಟು ನಾವು ಮಾಡುವ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆಯಲು ಸಾಧ್ಯ. ಇದರಿಂದ ನಾವು ಹುಟ್ಟಿದ ನೆಲದ ಬಗ್ಗೆ ಅಭಿಮಾನ ಹೊಂದುವ ಜತೆಗೆ ದೇಶ ರಕ್ಷಣೆಗಾಗಿ ದುಡಿಯುವ ಯೋಧರು ಹಾಗೂ ರೈತರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಕಾರ್ಗಿಲ್ ಯುದ್ಧದ ವಿಜಯೋತ್ಸವದ ಅಂಗವಾಗಿ ನಿವೃತ್ತ ಯೋಧರನ್ನು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ: James Anderson: ನಿವೃತ್ತಿ ಸುಳಿವು ನೀಡಿದ ಜೇಮ್ಸ್ ಆ್ಯಂಡರ್ಸನ್
ಈ ವೇಳೆ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ದಿನಕರಭಟ್ ಭಾವೆ, ನೋಪಿಶಂಕರ್, ಮಹೇಶ್ ಗೋಖಲೆ, ವಾಣಿ, ಪ್ರಾಂಶುಪಾಲ ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಇದ್ದರು.