ಹೊಸನಗರ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಭಕ್ತರ ಶ್ರದ್ಧಾಕೇಂದ್ರವಾದ ಕೊಡಚಾದ್ರಿ (Kodachadri) ಗಿರಿಗೆ ಪ್ರವಾಸಿಗರು (Tourists) ಹಾಗೂ ಭಕ್ತರನ್ನು (Devotees) ನಿರ್ಬಂಧಿಸಿ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ತೀವ್ರವಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ, ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ವಾಹನಗಳು ಹಾಗೂ ಚಾರಣ ಮಾಡುವುದನ್ನು ಸಂಪೂರ್ಣವಾಗಿ ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: Weather Report : ಬೆಂಗಳೂರು ಸೇರಿ ಕರಾವಳಿ, ಮಲೆನಾಡಲ್ಲಿ ನಾಳೆ ಚಿಟಪಟ ಮಳೆ
ವನ್ಯಜೀವಿ ಜೀವಿ ವಿಭಾಗದ ಈ ಕ್ರಮದಿಂದ, ಪ್ರತಿನಿತ್ಯ ಕೊಡಚಾದ್ರಿ ಗಿರಿಗೆ ಪ್ರವಾಸಿಗರನ್ನು ಹೊತ್ತೊಯುವ ನಿಟ್ಟೂರು, ಕೊಲ್ಲೂರು, ಕಟ್ಟಿನಹೊಳೆ, ಸಂಪೆಕಟ್ಟೆ ಗಳ ಸುಮಾರು 150 ಕ್ಕೂ ಹೆಚ್ಚು ಜೀಪ್ ಮಾಲೀಕರು ಮತ್ತು ಚಾಲಕರ ಬದುಕು ದುಸ್ತರವಾಗಲಿದೆ.