Site icon Vistara News

Shivamogga News: ಹೊಸನಗರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲಾವಣಿ, ಜಾನಪದ ಗೀತೆ ಸ್ಪರ್ಧೆ

Lavani, folk song competition for high school students at Hosanagara.

ಹೊಸನಗರ: ಜನಪದ (Folk) ಸಾಹಿತ್ಯಕ್ಕೆ ಬರಹಗಾರರಿಲ್ಲ. ಜನರಿಂದ (People) ಜನರಿಗೆ, ಬಾಯಿಂದ ಬಾಯಿಗೆ ಹಳ್ಳಿಗರ ನುಡಿಯಿಂದ ನುಡಿದ ಹಾಡೇ ಜನಪದ ಗೀತೆಯ (Folk song) ಸಾಹಿತ್ಯವಾಗಿದೆ ಎಂದು ರಾಜ್ಯ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಂ. ಪರಮೇಶ್‌ ಹೇಳಿದರು.

ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಹಾಗೂ ತಾಲೂಕು ಸಮಿತಿ ಹೊಸನಗರ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲಾವಣಿ ಮತ್ತು ಜಾನಪದ ಗೀತೆ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಜಾನಪದ ಹುಟ್ಟು ಹಳ್ಳಿಗಳಲ್ಲಿ ಜನರ ಬಾಯಿಯಿಂದ ಬಾಯಿಗೆ ಒಂದು ಕುಟುಂಬ ವರ್ಗದವರಿಗೆ ಒಂದು ಊರಿನಿಂದ ಜಾನಪದ ಸಾಹಿತ್ಯ ರಚನೆಯಾಗಿದೆಯೇ ಹೊರತು ಯಾವುದೇ ಬರಹಗಾರರಿಂದ ರಚನೆಯಾಗಿಲ್ಲ ಎಂದ ಅವರು, , ಜನಪದ ಸಾಹಿತ್ಯ ಭಾರತ ದೇಶದಲ್ಲಿಯೇ ರಾಜ್ಯ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Chandrayaan 3: ಚಂದ್ರಯಾನದ ಯಶಸ್ಸಿನಿಂದ ಭಾರತಕ್ಕೆ ಆಗುವ ಲಾಭಗಳೇನು?

ಜಾನಪದದಲ್ಲಿ ಮನುಷ್ಯನು ತಿಳಿದುಕೊಳ್ಳಬಹುದಾದ ಅನೇಕ ವಿಷಯಗಳಿದ್ದು, ಅದನ್ನು ಪ್ರತಿಯೊಬ್ಬರೂ ಬೇಕಾಗಿರುವ ಹಾಡುಗಳನ್ನು, ಕವನಗಳನ್ನು ತಿಳಿದುಕೊಳ್ಳುವ ಮೂಲಕ ಜಾನಪದ ಸಾಹಿತ್ಯವನ್ನು ಪ್ರಪಂಚದ ತುಂಬ ಹಬ್ಬಿಸಬೇಕೆಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಕೆ.ಜಿ ವೆಂಕಟೇಶ್‌, ಜಾನಪದದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮವನ್ನು ರಾಮಕೃಷ್ಣ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಡಿ.ಎಂ. ದೇವರಾಜ್‌ ಉದ್ಘಾಟಿಸಿ, ಜಾನಪದ ಸಾಹಿತ್ಯದ ಬಗ್ಗೆ ವಿವರಿಸಿದರು.

ಇದನ್ನೂ ಓದಿ: Weather Report : ರಾಜ್ಯದಲ್ಲಿ ಕ್ಷೀಣಿಸಿದ ಮಳೆ ; ಆತಂಕದಲ್ಲಿ ರೈತಾಪಿ ವರ್ಗ

ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹ, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ, ಪತ್ರಕರ್ತ ನಗರ ರಾಘವೇಂದ್ರ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ಹಾಗೂ ನಾಗೇಶ ಕೆ.ಜಿ, ರಾಧಿಕಾ ರತ್ನಾಕರ್ ಶ್ರೇಷ್ಠಿ, ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು, ಉಪಾಧ್ಯಾಯರು ಉಪಸ್ಥಿತರಿದ್ದರು.

Exit mobile version