Site icon Vistara News

Shivamogga News: ಹೊಸನಗರದಲ್ಲಿ ಉಪನ್ಯಾಸಕನಿಗೆ ಜೀವ ಬೆದರಿಕೆ; ಪ್ರಕರಣ ದಾಖಲು

Hosanagar Police Station

ಹೊಸನಗರ: ಕಾಲೇಜು ಉಪನ್ಯಾಸಕರೊಬ್ಬರ (Lecturer) ಮನೆಯ ಕಾಂಪೌಂಡ್ ಆವರಣಕ್ಕೆ ಸುಮಾರು 15 ಜನರ ಗುಂಪು ಅತಿಕ್ರಮಣ ಪ್ರವೇಶ ಮಾಡಿ, ಜೀವ ಬೆದರಿಕೆ (Life threat) ಹಾಕಿದ ಘಟನೆ ಪಟ್ಟಣದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಡೆದಿದೆ.

ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಜನ್‌ಕುಮಾರ್ ಎಂಬವವರಿದ್ದ ಬಾಡಿಗೆ ಮನೆಯ ಆವರಣಕ್ಕೆ ಶನಿವಾರ ತಡರಾತ್ರಿ ಪ್ರವೇಶಿಸಿ, ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Weather Report : ಕರಾವಳಿಯಲ್ಲಿ ನಾಳೆ ಗುಡುಗು ಸಹಿತ ವ್ಯಾಪಕ ಮಳೆ

ಮನೆಯ ಒಳಗಡೆ ಮಹಿಳೆಯೊಬ್ಬರನ್ನು ಇರಿಸಿಕೊಂಡಿದ್ದೀಯಾ, ನಾವು ತಪಾಸಣೆ ಮಾಡಬೇಕು. ಬಾಗಿಲು ತೆಗೆಯದಿದ್ದರೆ, ಬಾಗಿಲು ಒಡೆದು ಒಳ ಪ್ರವೇಶಿಸುವುದಾಗಿ ತಿಳಿಸಿ ಜೀವ ಬೆದರಿಕೆ ಹಾಕಿದ್ದಾರೆ.

ವಿಷಯ ತಿಳಿದು ಪೊಲೀಸರು ಹಾಗೂ ಮನೆಯ ಮಾಲಿಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಅನೈತಿಕ ಚಟುವಟಿಕೆ ಕಂಡುಬರದ ಹಿನ್ನಲೆಯಲ್ಲಿ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಯುವಕರ ಗುಂಪಿಗೆ ಬುದ್ದಿ ಹೇಳಿದ್ದಾರೆ.

ಇದನ್ನೂ ಓದಿ: Himavad Gopalaswamy Betta : ಒಮ್ಮೆಯಾದರೂ ನೋಡಲೇಬೇಕು ಹಿಮವದ್‌ ಗೋಪಾಲಸ್ವಾಮಿ ಬೆಟ್ಟ!

ಅಂಜನ್‌ಕುಮಾರ್ ನೀಡಿರುವ ದೂರಿನ ಮೇರೆಗೆ ಪಟ್ಟಣದ ನಿವಾಸಿ ಮಂಜುನಾಥ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

Exit mobile version