ಸೊರಬ: ವಿದ್ಯಾರ್ಥಿಗಳು (Students) ಬಾಲ್ಯದಿಂದಲೇ (Childhood) ನಿರಂತರ ಅಧ್ಯಯನ ಮತ್ತು ಬರವಣಿಗೆಯಲ್ಲಿ (Writing) ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಬಹುದೊಡ್ಡ ಸಾಹಿತಿಗಳಾಗಿ ಹೊರಹೊಮ್ಮಬಹುದು. ಸಾಹಿತ್ಯ (Literature) ರಚನೆಯಲ್ಲಿ ಜೀವನಾನುಭವ ಸಹ ಮುಖ್ಯ ಎಂದು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಭದ್ರಾಪುರ ಹೇಳಿದರು.
ಚಂದ್ರಗುತ್ತಿಯ ಶ್ರೀ ರೇಣುಕಾಂಬ ಪ್ರೌಢಶಾಲೆಯಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಸೊರಬ ತಾಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಂಗೀತ ಸೆಳೆತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ind vs wi : ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಕೆರಿಬಿಯನ್ ದ್ವೀಪಕ್ಕೆ ಹಾರಿದ ತಿಲಕ್ ವರ್ಮಾ, ಆವೇಶ್ ಖಾನ್
ಸಾಹಿತಿಗಳು ಮತ್ತು ಸಂಶೋಧಕರಿಗೆ ಪ್ರಾದೇಶಿಕ ಗಡಿಗಳ ಮಿತಿ ಇಲ್ಲ. ಕಾಲಘಟ್ಟದ ಮಿತಿಯೂ ಸಹ ಇಲ್ಲ. ಯಾವುದೇ ಸಾಹಿತ್ಯ ಸಂಪತ್ತು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಪೂರಕವಾಗಿರಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಸಾಹಿತ್ಯ ರಚನೆಯಾಗಬೇಕು. ನಿತ್ಯ ಜೀವನದಲ್ಲಿ ನೋಡುವ ಮತ್ತು ಕೇಳುವ ಘಟನೆಗಳೇ ಸಾಹಿತ್ಯ ರಚನೆ ಮತ್ತು ಸೆಳೆತಕ್ಕೆ ವಸ್ತುಗಳಾಗಬಹುದು ಎಂದರು.
ಸಂಗೀತ ಸೆಳೆತ ವಿಷಯ ಕುರಿತು ಮಾತನಾಡಿದ ಸಂಗೀತ ಶಿಕ್ಷಕ ಪ್ರವೀಣ್ ಭಂಡಾರಿ, ಸಾಹಿತ್ಯ ಮತ್ತು ಸಂಗೀತ ಪರಸ್ಪರ ಸಂಬಂಧ ಹೊಂದಿವೆ. ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಸಂಗೀತ ಕಲಿಯುವುದು ಮತ್ತು ರಾಗಬದ್ಧವಾಗಿ ಹಾಡುವುದು ಎಲ್ಲರಿಗೂ ಸಾಧ್ಯ, ನಿರಂತರ ಅಭ್ಯಾಸ ಬೇಕು ಅಷ್ಟೇ ಎಂದರು.
ಯುವಕವಿ ವಿನೋದ್ ವಾಲ್ಮೀಕಿ ಮಾತನಾಡಿ, ಸಮಕಾಲಿನ ಘಟನೆಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಾಗಿ ಅಕ್ಷರ ರೂಪದಲ್ಲಿ ದಾಖಲಿಸುವ ಪ್ರಯತ್ನ ಮಾಡಬೇಕು ಎಂದರು.
ಇದನ್ನೂ ಓದಿ: Agniveer Recruitment 2023: ವಾಯುಪಡೆಗೆ ಅಗ್ನಿವೀರರ ನೇಮಕ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಶಶಿಕುಮಾರ್ ಮಾತನಾಡಿ, ಸಾಹಿತ್ಯ ಮತ್ತು ಸಂಗೀತದ ಆಸಕ್ತಿಯನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರೇರಣೆ ಆಗಬಲ್ಲವು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತನ್ನು ಅಭಿನಂದಿಸುತ್ತೇನೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಯಲ್ಲೋಜಿ ರಾವ್, ಶಿರಸಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಈರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರವೀಣ್ ಭಂಡಾರಿ ಸಂಗೀತ ರಸದೌತಣ ನೀಡಿದರು. ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಈ ವೇಳೆ ಶಿಲ್ಪಾ ಹೆಗಡೆ, ಆನಂದ, ಅಕ್ಷತಾ ಮತ್ತು ಸಂಗೀತಾಭ್ಯಾಸದ ವಿದ್ಯಾರ್ಥಿ ಅಭಿಲಾಷ್ ಉಪಸ್ಥಿತರಿದ್ದರು.
ಇದನ್ನೂ ಒದಿ: Team India : 9 ವರ್ಷಗಳ ಬಳಿಕ ಒಡಿಐ ಪಂದ್ಯವನ್ನಾಡಲಿರುವ ಜಯದೇವ್ ಉನಾದ್ಕಟ್
ಶಿಕ್ಷಕರಾದ ಮಂಜುನಾಥ ಬ್ಯಾಡಗಿ ನಿರೂಪಿಸಿದರು, ಲಿಂಗನಗೌಡ್ರು ಸ್ವಾಗತಿಸಿದರು, ಮಧುಚಂದ್ರ ವಂದಿಸಿದರು.