ಶಿವಮೊಗ್ಗ: ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ, ಉದ್ಯಮಿ ಎಂ.ವೇಣುಗೋಪಾಲ್ (೮೩) (M Venugopal) ಭಾನುವಾರ (ಫೆ.೧೯) ನಿಧನ ಹೊಂದಿದ್ದಾರೆ. ರೋಟರಿ ಚಿತಾಗಾರದಲ್ಲಿ ಸಂಜೆಯೇ ಅಂತ್ಯಕ್ರಿಯೆ ನೆರವೇರಿತು.
ಇವರಿಗೆ ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಮಾಳೂರು ಮೂಲದ ಶಿವಮೊಗ್ಗಕ್ಕೆ ಪ್ರಪ್ರಥಮ ಬಾರಿಗೆ ಖಾಸಗಿ ಬಸ್ ಸೇವೆ ಆರಂಭಿಸಿದ್ದ ಮೋಟಾರು ಮಂಜಪ್ಪ ಅವರ ಪುತ್ರರಾದ ವೇಣುಗೋಪಾಲ್ ಅವರು ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿರುವ ಪಿಯರ್‌ಲೈಟ್ ಲೈರ್ಸ್ ನಿರ್ದೇಶಕರಾಗಿದ್ದರು. ರೋಟರಿ, ಶಿವಮೊಗ್ಗ ಶಂಕರ ಮಠ, ಹೊಯ್ಸಳ ಹೆಲ್ತ್ ಕೇರ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ಪ್ರಚಾರ ಬಯಸದೆ ಕೊಡುಗೈ ದಾನಿಯಾಗಿದ್ದರು. ತಮ್ಮ ಅಂತಿಮ ದಿನಗಳಲ್ಲಿ ಹೊಯ್ಸಳ ಡಯಾಲಿಸೀಸ್ ಸೆಂಟರ್‌ಗೆ ತಮ್ಮ ತಂದೆಯವರ ಹೆಸರಿನಲ್ಲಿ ೩೫ ಲಕ್ಷ ರೂ. ನೀಡಿ ಬಡ ರೋಗಿಗಳ ಡಯಾಲಿಸೀಸ್‌ಗೆ ಆಸರೆಯಾಗಿದ್ದರು. ನೆರವು ಬಯಸಿ ಹೋದವರಿಗೆ ಎಂದಿಗೂ ನಿರಾಶೆ ಮಾಡದೆ ನೆರವು ನೀಡುತ್ತಿದ್ದರು. ಆದರೆ ಅವರು ನೀಡಿದ ನೆರವನ್ನು ಪ್ರಚಾರ ಮಾಡುತ್ತಿರಲಿಲ್ಲ.
ಇದನ್ನೂ ಓದಿ: Meta Paid Service: ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗೂ ಬಂತು ಪಾವತಿ ಚಂದಾದಾರಿಕೆ ಸೇವೆ! ತಿಂಗಳಿಗೆ ಎಷ್ಟು ಹಣ?
ಸಂತಾಪ
ವೇಣುಗೋಪಾಲ್ ನಿಧನಕ್ಕೆ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘ, ಶೃಂಗೇರಿ ಶಂಕರ ಮಠ, ಜಿಲ್ಲಾ ಬ್ರಾಹ್ಮಣ ಮಹಾಸಭಾ, ರೋಟರಿ ಸಂಸ್ಥೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ತೀವ್ರ ಸಂತಾಪ ಸೂಚಿಸಿದೆ. ಹೊಯ್ಸಳ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಂ.ಶಂಕರ್, ಸಮಾಜದ ಅಧ್ಯಕ್ಷ ಪ್ರಭಾಕರ್, ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ಪ್ರಮುಖರಾದ ಸೋಗಾನೆ ರಮೇಶ್, ಕೇಶವಮೂರ್ತಿ, ಚಂದ್ರಶೇಖರ್, ಕೃಷ್ಣ ರಾವ್, ನಾಗಭೂಷಣ್, ಸೋಗಾನೆ ವೆಂಕಟನಾರಾಯಣ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಕೆ.ಎಸ್.ಎಸ್.ಐ.ಡಿ.ಸಿ. ಎಸ್.ದತ್ತಾತ್ರಿ, ಆಶ್ರಮ ಸಮಿತಿಯ ಸದಸ್ಯ ಯಶೋಧರ ಹೆಗಡೆ ಮತ್ತಿತರರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ: Online Fraud : ಯೂಟ್ಯೂಬ್ ವಿಡಿಯೊ ಲೈಕ್ ಮಾಡಿ ಹಣ ಗಳಿಸಲು ಹೋಗಿ 10 ಲಕ್ಷ ರೂ. ಕಳೆದುಕೊಂಡ ಮಹಿಳೆ! ಇರಲಿ ಎಚ್ಚರ