ರಿಪ್ಪನ್‌ಪೇಟೆ: ಸಮೀಪದ ಹರತಾಳು ಗ್ರಾಮದಲ್ಲಿ (Haratalu village) ಬಹು ದಿನಗಳ ಬೇಡಿಕೆಯಾದ ಸರ್ಕಾರಿ ಸಾರಿಗೆ ಬಸ್ (KSRTC bus) ಸೌಕರ್ಯಕ್ಕೆ ಸಾಗರ ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹರತಾಳು ಗ್ರಾಮದ ಜನತೆಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ, ಹರತಾಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನಾಗರಿಕರ ಬಹು ದಿನಗಳ ಬೇಡಿಕೆ ಇಂದು ಈಡೇರಿದೆ ಎಂದರು.
ಇದನ್ನೂ ಓದಿ: Dolphin Catching : ಮೀನಿನ ಜತೆ ಡಾಲ್ಫಿನ್ ಅನ್ನೂ ಹಿಡಿದು ತಿಂದ ಮೀನುಗಾರರು! ಮುಂದೇನಾಯ್ತು?
ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ನನ್ನ ಮೊದಲ ಆದ್ಯತೆಯಾಗಿದೆ, ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸರ್ಕಾರದ ಮೂಲಭೂತ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಹರತಾಳು ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಗ್ರಾ.ಪಂ. ವತಿಯಿಂದ ನೂತನ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಇದನ್ನೂ ಓದಿ: Hardik Pandya : 18 ದಿನಗಳಲ್ಲಿ 8 ಪಂದ್ಯಗಳನ್ನು ಆಡಲಿದ್ದಾರೆ ಹಾರ್ದಿಕ್ ಪಾಂಡ್ಯ!
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಿ.ಜಿ. ಕೋರಿ, ತಾಲೂಕು ಪಂಚಾಯ್ತಿ ಪ್ರಭಾರಿ ಇಓ ನರೇಂದ್ರ ಕುಮಾರ್, ಹರತಾಳು ಗ್ರಾಪಂ ಅಧ್ಯಕ್ಷ ಎಸ್.ಈ.ಶಿವಪ್ಪ, ಮುಖಂಡರಾದ ಕಲಗೋಡು ರತ್ನಾಕರ್, ಬಿ.ಜೆ.ನಾಗರಾಜ್, ಬಿ.ಜೆ.ಚಂದ್ರಮೌಳಿ, ಏರಿಗಿ ಉಮೇಶ್ ಹಾಗೂ ಸಾಕಮ್ಮ, ನಾಗರತ್ನ, ಸತ್ಯವತಿ, ರವಿ, ಶಿವಮೂರ್ತಿ, ನಾರಾಯಣಪ್ಪ, ರವಿಂದ್ರ ಕೆರೆಹಳ್ಳಿ, ರಮೇಶ್ ಫ್ಯಾನ್ಸಿ , ಜಿ.ಆರ್.ಗೋಪಾಲಕೃಷ್ಣ, ಮಹಾಮಲ, ಚಿದಂಬರ್ ಸೇರಿದಂತೆ ಹರತಾಳು ಗ್ರಾಮಸ್ಥರು ಮತ್ತು ಇತರರು ಪಾಲ್ಗೊಂಡಿದ್ದರು.