Site icon Vistara News

Shivamogga News: ಸಾರ್ವಜನಿಕರ ಸಹಕಾರದಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯ ಸಾಧ್ಯ: ಶಾಸಕ ಅಶೋಕ ನಾಯ್ಕ್

MLA Ashok Naik shivamogga

#image_title

ಶಿವಮೊಗ್ಗ: ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಸರ್ಕಾರದ ಯೋಜನೆಗಳು ಫಲಪ್ರದವಾಗಿ ಸಾರ್ವಜನಿಕರಿಗೆ ತಲುಪಿ ಯೋಜನೆ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಶಿವಮೊಗ್ಗ (Shivamogga News) ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ್ ಹೇಳಿದರು.

ಶಿವಮೊಗ್ಗದ ಎಲ್‌ಬಿಎಸ್ ನಗರದಲ್ಲಿ ಕುಟುಂಬ ಮಿಲನ ಹಾಗೂ ಸಾಂಸ್ಕೃತಿಕ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಡಾವಣೆಗಳಲ್ಲಿ ಪಾರ್ಕ್, ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕರ ಮಾರ್ಗದರ್ಶನ, ಸಹಕಾರ ಹಾಗೂ ಸಲಹೆ ಅಗತ್ಯವಾಗಿದೆ. ಇದರಿಂದ ಸರ್ಕಾರದ ಅನುದಾನ ಸದ್ವಿನಿಯೋಗವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Court order : ಬಸ್ಸಿನಲ್ಲಿ ಸೀಮೆಎಣ್ಣೆ ಸಾಗಿಸಲು ಯತ್ನಿಸಿದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ, 5000 ರೂ. ದಂಡ ವಿಧಿಸಿದ ಕೋರ್ಟ್‌

ಮಹಾನಗರ ಪಾಲಿಕೆಯ ಸದಸ್ಯ ಇ.ವಿಶ್ವಾಸ್ ಮಾತನಾಡಿ, ಎಲ್‌ಬಿಎಸ್ ನಗರ ಬಡಾವಣೆಯ ಅಭಿವೃದ್ಧಿಗೆ ಸಂಪೂರ್ಣ ಪ್ರಯತ್ನ ನಡೆಸಿದ್ದು, ನಗರದಲ್ಲಿ ಸುಂದರ ಬಡಾವಣೆಯಾಗಿ ರೂಪುಗೊಳ್ಳುತ್ತಿದೆ. ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅಶೋಕ ‌ ನಾಯ್ಕ್ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಯೂತ್ ಹಾಸ್ಟೆಲ್ ಸಹಕಾರದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕಲಾವಿದ ಜಿ.ವಿಜಯ್‌ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: Puneeth Rajkumar: ಪುನೀತ್ ರಾಜ್ ಕುಮಾರ್ ರಸ್ತೆ ಇಂದು ಉದ್ಘಾಟನೆ: ರಾಜಕೀಯಕ್ಕೆ ಬಳಕೆ ಆಯ್ತಾ ಅಪ್ಪು ಹೆಸರು?

ಎಲ್ ಬಿ ಎಸ್ ನಗರ ಪಾರ್ಕ್ ಸಮಿತಿಯ ಅಧ್ಯಕ್ಷ ಸಿ.ಪಿ.ವೀರಣ್ಣ ಮಾತನಾಡಿ, ಬಡಾವಣೆ ನಿವಾಸಿಗಳ ಪರಸ್ಪರ ಒಡನಾಟ, ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಕಲಾವಿದ ಜಿ.ವಿಜಯ್‌ ಕುಮಾರ್ ಅವರು ಹಾಸ್ಯಗೀತೆ, ಕನ್ನಡ ಹಳೆಯ ಚಿತ್ರಗೀತೆಗಳನ್ನು ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು. ಪ್ರಮುಖರಾದ ಮಹಾಬಲೇಶ್ವರ ಹೆಗಡೆ, ರಾಜೇಂದ್ರ ಪ್ರಸಾದ್, ರಾಜೀವ್ ಪಾಂಡುರಂಗಿ, ನಾಗರಾಜ್, ಮಂಜುನಾಥ್, ಡಾ. ರಾಜೇಂದ್ರ, ಗೋಪಾಲ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್.ವಾಗೀಶ್, ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯ ಕುಮಾರ್, ನಿರ್ದೇಶಕರಾದ ಮಲ್ಲಿಕಾರ್ಜುನ ಕಾನೂರ್, ಮಮತಾ, ಸುರೇಖಾ ಮತ್ತು ಎಲ್ ಬಿ ಎಸ್ ನಗರದ ನಿವಾಸಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇದನ್ನೂ ಓದಿ: Kiara Sidharth Wedding : ಕಿಯಾರಾ ಮತ್ತು ಸಿದ್ದಾರ್ಥ್‌ ಜಾತಕ ಎಷ್ಟರ ಮಟ್ಟಿಗೆ ಕೂಡಿ ಬರುತ್ತೆ?

Exit mobile version