ಶಿವಮೊಗ್ಗ: ವಿದ್ಯಾನಗರದ ವೃತ್ತಾಕಾರದ ರೈಲ್ವೆ ಓವರ್ ಬ್ರಿಡ್ಜ್ (Railway Over Bridge) ಕಾಮಗಾರಿಯ ಪ್ರಗತಿ ವೀಕ್ಷಣೆ ಮಾಡಿದ ಸಂಸದ ಬಿ.ವೈ ರಾಘವೇಂದ್ರ (MP B.Y. Raghavendra) ಅವರು 44 ಕೋಟಿ ರೂ. ವೆಚ್ಚದ ರೈಲ್ವೆ ಮೇಲು ಸೇತುವೆಯನ್ನು ಆ. 15ರೊಳಗೆ ಉದ್ಘಾಟನೆ ಮಾಡುವಂತೆ ಸೂಚನೆ ನೀಡಿದರು.
ನಂತರ ಮಾತನಾಡಿದ ಅವರು, ವೃತ್ತಾಕಾರದ ಸೇತುವೆಯ ಎರಡು ತುದಿಗಳ ಜೋಡಣೆ ಬಾಕಿ ಇದ್ದು, ಕಾಮಗಾರಿಯ ಬಗ್ಗೆ ಲಕ್ನೋದಿಂದ ಪರಿಶೀಲನಾ ತಂಡ ಈಗಾಗಲೇ ಮೂರು ಭೇಟಿ ನೀಡಿದೆ. ಆ.15 ಕ್ಕೆ ಲೋಕಾರ್ಪಣೆ ಮಾಡಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: Lionel Messi: ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ನೀಡಿದ ಲಿಯೋನೆಲ್ ಮೆಸ್ಸಿ!
ಕಡದಕಟ್ಟೆ, ಸವಳಂಗ ರಸ್ತೆ, ಸೋಮಿನ ಕೊಪ್ಪದಲ್ಲಿ ಅಂಡರ್ ಬ್ರಿಡ್ಜ್ ಮತ್ತು ಓವರ್ ಬ್ರಿಡ್ಜ್ ಗಳ ಕಾಮಗಾರಿ ನಡೆಯುತ್ತಿದೆ. ಡಿಸೆಂಬರ್ ಒಳಗೆ ಎಲ್ಲಾ ರೈಲ್ವೆ ಕಾಮಗಾರಿಯನ್ನು ಲೋಕಾರ್ಪಣೆ ಮಾಡಲು ರೈಲ್ವೆ ಜನರಲ್ ಮ್ಯಾನೇಜರ್ ಜೊತೆ ಸಭೆ ನಡೆಸಲಾಗಿದೆ. ಬೈಪಾಸ್‌ನ ಮತ್ತೊಂದು ತುಂಗ ನದಿ ಸೇತುವೆಯೂ ಸಹ ಈ ವೇಳೆಯಲ್ಲಿ ಉದ್ಘಾಟನೆ ಮಾಡಲಿದ್ದೇವೆ ಎಂದರು.
ಡಬ್ಬಲ್ ಎಂಜಿನ್ ಸರ್ಕಾರದ ಕಾಮಗಾರಿಗಳ ಕುರಿತು ಟೀಕೆ ಮಾಡಲಾಗುತ್ತಿದೆ. ಈ ಬಗ್ಗೆ ಪಟ್ಟು ಹಿಡಿದು ಕೂರಲಿದ್ದೇನೆ. ಯಾವ ಯಾವ ಕಾಮಗಾರಿಗಳನ್ನು ಮುಗಿಸಿದ್ದೇವೆ ಎಂದು ಪಟ್ಟಿಕೊಟ್ಟು ತೋರಿಸಲಿದ್ದೇನೆ ಎಂದು ಸವಾಲು ಎಸೆದರು.
ಕೇಂದ್ರ ಸಚಿವ ಪಿಯಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಕಾರ್ಖಾನೆ ನೀಡಲು ಮನವಿ ಮಾಡಿರುವೆ. ಕೇಂದ್ರ ಲೋಕೋಪಯೋಗಿ ಸಚಿವ ಗಡ್ಕರಿ ಅವರಿಗೆ ಕಳಸವಳ್ಳಿ ಸೇತುವೆ ಉದ್ಘಾಟನೆಗೆ ಬರುವಂತೆ ಆಹ್ವಾನಿಸಿದ್ದೇನೆ. ಈ ಸೇತುವೆ ಉದ್ಘಾಟನೆಗೆ ಸಚಿವರು ಬರುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು, ಶಿವಮೊಗ್ಗದ ರಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ: Power Cut : ಬೆಂಗಳೂರಿಗರೇ ನಾಳೆ ಈ ಟೈಂನಲ್ಲಿ ಈ ಏರಿಯಾದಲ್ಲಿ ಪವರ್ ಕಟ್
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ಉಚಿತ ವಿದ್ಯುತ್ ಎಂದು ಹೇಳಿ ಮತ್ತೊಂದು ಕಡೆ ದರಗಳನ್ನೇರಿಸುವ ಮೂಲಕ ಜನಸಾಮಾನ್ಯರಿಗೆ ಹೊರೆಯನ್ನ ಮಾಡುತ್ತಿದೆ. ಸೋಲಾರ್ ಹಾಕಿಸಿಕೊಂಡವರಿಗೆ ಸಬ್ಸಿಡಿಯನ್ನೂ ಸಹ ಸರ್ಕಾರ ಕಡಿತಗೊಳಿಸಿದೆ. ರೈತರ ಪಂಪ್‌ಸೆಟ್ ಗಳ ಮೇಲೆ ಹೊರೆ ಹಾಕುತ್ತಿದೆ ಎಂದರು.
ವೃತ್ತಾಕಾರದ ಸೇತುವೆಯಿಂದ ಅನುಕೂಲಗಳು
ವೃತ್ತಾಕಾರದ ರೈಲ್ವೆ ಮೇಲು ಸೇತುವೆಯಿಂದ ಭೂಸ್ವಾಧೀನದ ಖರ್ಚನ್ನು ತಪ್ಪಿಸಲಾಗಿದೆ. ಇದು ಇಡೀ ರಾಜ್ಯದಲ್ಲಿಯೇ ವಿಶೇಷ ವಿನ್ಯಾಸದ ಸೇತುವೆಯಾಗಿದೆ, ಈ ಸೇತುವೆಗೆ ಬಳಸಿರುವ ವೈಡೆಡ್ ಸ್ಲಾಬ್ ಗಳಲ್ಲಿ 8 ಪೈಪ್ ಗಳನ್ನ ಹಾಕಲಾಗಿದೆ. ಇದು ಗಟ್ಟಿ ಮುಟ್ಟಾಗಿರುತ್ತದೆ. ಕಾಂಕ್ರಿಟ್ ಬಳಕೆ ಕಡಿಮೆ ಆಗಿದೆ. 17 ಪಿಲ್ಲರ್ ಗಳನ್ನ ಜೋಡಿಸಲಾಗಿದೆ. ಅಬೆಟ್ ಮೆಂಟ್ ಗಳಿವೆ. ಫುಟ್‌ಪಾತ್ ಇದೆ. 920 ಮೀಟರ್ ಉದ್ದ ಇದೆ ಹಾಗೂ 13½ ಮೀಟರ್ ಅಗಲವಿದೆ. ಬ್ರಿಡ್ಜ್ ಕೆಳಗೆ ವಿಶಾಲವಾದ ಜಾಗ ಉಳಿಯುವುದರಿಂದ ಇದರಲ್ಲಿ ಜಿಲ್ಲಾಡಳಿತ ಏನು ಬಳಕೆ ಮಾಡಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ: Infosys : ಇನ್ಫೋಸಿಸ್‌ನಲ್ಲಿ ಈ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆಯೇ ರದ್ದು
ಈ ಸಂದರ್ಭದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ, ಪಾಲಿಕೆ ಸದಸ್ಯರು ಮತ್ತಿತರರು ಇದ್ದರು.