ರಿಪ್ಪನ್‌ಪೇಟೆ: ಸುರಕ್ಷಾ ಕವಚದಂತೆ ಧರಿಸುವ ಬಳೆಗಳು ಭಾರತೀಯ ಸಂಸ್ಕೃತಿಯಲ್ಲಿ (Indian Culture) ಸ್ತ್ರೀಯರಿಗೆ ಕೇವಲ ಅಲಂಕಾರ ವಸ್ತುವಾಗಿರದೇ ಶಾರೀರಿಕ-ಮಾನಸಿಕ ಆರೋಗ್ಯ (Health) ವರ್ಧಿಸುವಂತೆ ಮಾಡುತ್ತದೆ ಎಂದು ಹೊಂಬುಜದ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತಿಳಿಸಿದರು.
ನವರಾತ್ರಿಯ ಏಳನೇಯ ದಿನವಾದ ಶನಿವಾರ ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾಸ್ಥಳವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಹೊಂಬುಜ ಜೈನ ಮಠದಲ್ಲಿ ಪರಂಪರಾನುಗತ ಬಳೆಗಳಿಂದ ಅಲಂಕರಿಸಿದ ಅಭೀಷ್ಠವರ ಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯವರಿಗೆ ಆಗಮೋಕ್ತ ಶಾಸ್ತ್ರದನ್ವಯ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಅಷ್ಟವಿಧಾರ್ಚನೆ ಪೂಜೆಯ ಬಳಿಕ ಫಲ-ಪುಷ್ಪಗಳನ್ನು ಸಮರ್ಪಿಸಿ ಭಕ್ತವೃಂದದವರು ಜಿನನಾಮ ಸ್ತೋತ್ರಗಳನ್ನು ಪಠಿಸಿದರು.
ಇದನ್ನೂ ಓದಿ: SBI Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ
ಶ್ರೀ ಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ಪೂರ್ವ ಪದ್ಧತಿಯಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಇದನ್ನೂ ಓದಿ: Job Fair: ಮೈಸೂರಿನಲ್ಲಿ ನ. 19ರಂದು ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ
ನವರಾತ್ರಿ ಪೂಜೆ, ಸಂಗೀತ ಕಾರ್ಯಕ್ರದಲ್ಲಿ ದೇಶದ ಹಾಗೂ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು. ಸೇವಾಕರ್ತೃರಾದ ಬೆಂಗಳೂರಿನ ಚೂಡಾಮಣಿ ರವಿರಾಜ್ ಜೈನ್ ಅವರನ್ನು ಶ್ರೀಗಳವರು ಆಶೀರ್ವದಿಸಿದರು. ಪುರೋಹಿತ ಪದ್ಮರಾಜ ಇಂದ್ರರವರು ಪೂಜಾ ವಿಧಿ ನೆರವೇರಿಸಿದರು.