Site icon Vistara News

Shivamogga News: ಫೆ.19ರಂದು ವಿಕ್ರಮ ವಾರಪತ್ರಿಕೆಯಿಂದ ʻಸುಂದರ ಮಲೆನಾಡಿನ ಧೀಮಂತ ಅರಸರುʼ ಲೋಕಾರ್ಪಣೆ

Vikrama Weekly Coffee Table Book Launched shivamogga

#image_title

ಶಿವಮೊಗ್ಗ: ವಿಕ್ರಮ ವಾರಪತ್ರಿಕೆಯಿಂದ ಸುಂದರ ಮಲೆನಾಡಿನ ಧೀಮಂತ ಅರಸರು ಕಾಫಿ ಟೇಬಲ್ ಬುಕ್‌ನ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಮಲೆನಾಡಿನ ಅರಸು ಮನೆತನಗಳ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವು ನಗರದ ಕರ್ನಾಟಕ ಸಂಘದಲ್ಲಿ ಫೆ.19 ರಂದು ನಡೆಯಲಿದೆ.

ಸಾಗರದ ಹಿರಿಯ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾ ಜೋಯಿಸ್ ಅವರು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಮೇಶ ಯತಗಲ್ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೊದಲ ಗೋಷ್ಠಿ ನಡೆಯಲಿದ್ದು, ಹಿರಿಯ ಇತಿಹಾಸ ಸಂಶೋಧಕ ಡಾ.ಎಸ್.ಜಿ.ಸಾಮಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಳದಿ ಅರಸು ಮನೆತನ ಕುರಿತು ಸಾಗರದ ಹಿರಿಯ ಇತಿಹಾಸ ಸಂಶೋಧಕ ಡಾ.ಕೆಳದಿ ವೆಂಕಟೇಶ ಜೋಯಿಸ್ ಮತ್ತು ಸೋದೆ ಅರಸು ಮನೆತನ ಕುರಿತು ಶಿರಸಿಯ ಇತಿಹಾಸಕಾರ ಡಾ.ಲಕ್ಷ್ಮೀಶ್ ಸೋಂದಾ ಮಾತನಾಡುವರು.

ಇದನ್ನೂ ಓದಿ: National Green Hackathon: ಬೆಂಗಳೂರಿನಲ್ಲಿ ಫೆ.16ರಿಂದ ರಾಷ್ಟ್ರೀಯ ಹಸಿರು ಹ್ಯಾಕಥಾನ್; 12 ರಾಜ್ಯಗಳ ವಿದ್ಯಾರ್ಥಿನಿಯರು ಭಾಗಿ

ಮಧ್ಯಾಹ್ನ 12.15ಕ್ಕೆ ಆರಂಭವಾಗುವ ಎರಡನೇ ಗೋಷ್ಠಿಯ ಅಧ್ಯಕ್ಷತೆಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಆರ್.ಶೇಜೇಶ್ವರ ವಹಿಸಲಿದ್ದು, ಗೇರುಸೊಪ್ಪೆಯ ಸಾಳ್ವರು ಕುರಿತು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಹಾಗೂ ಬಿಳಗಿ ಅರಸರು ಕುರಿತು ಸಿದ್ದಾಪುರದ ಶಿಕ್ಷಕಿ ವಿನೋದಾ ಭಟ್ ಬೆಟ್ಟಳ್ಳಿ ಮಾತನಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಮೂರನೇ ಗೋಷ್ಠಿ ನಡೆಯಲಿದ್ದು, ಹಿರಿಯ ಇತಿಹಾಸ ಸಂಶೋಧಕ ಖಂಡೋಬರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ಚಿಕ್ಕಮಗಳೂರಿನ ಅರಸು ಮನೆತನಗಳು ಕುರಿತು ಚಿಕ್ಕಮಗಳೂರಿನ ಇತಿಹಾಸ ಸಂಶೋಧಕ ಶ್ರೀ ಹಿರೇನಲ್ಲೂರು ಪಾಂಡುರಂಗ ಮತ್ತು ಹೊಂಬುಜದ ಸಾಂತರಸರು ಕುರಿತು ಹಿರಿಯ ವಿದ್ವಾಂಸ ಹಾದಿಗಲ್ಲು ಲಕ್ಷ್ಮೀನಾರಾಯಣ ಮಾತನಾಡಲಿದ್ದಾರೆ. ಸಂಜೆ 3.30 ರಿಂದ 4.15ರವರೆಗೆ ಸಂವಾದ ನಡೆಯಲಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Cheteshwar Pujara : ನನಗಿನ್ನೂ 35 ವರ್ಷ, ಈಗಲೇ ನಿವೃತ್ತಿ ಹೇಳುವ ಯೋಜನೆಯಿಲ್ಲ ಎಂದು ತಿಳಿಸಿದ ಪೂಜಾರ

Exit mobile version