Site icon Vistara News

Shivamogga News: ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚನೆ; ಸರ್ಕಾರವನ್ನು ಅಭಿನಂದಿಸಿದ ರೇಣುಕಾನಂದ ಸ್ವಾಮೀಜಿ

Renukananda Swamiji Shivamogga

#image_title

ಶಿವಮೊಗ್ಗ : ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾದ ಈಡಿಗ ಸಮುದಾಯದ (Idiga community) ಎಲ್ಲಾ ೨೬ ಒಳಪಂಗಡಗಳನ್ನು ಪ್ರತಿನಿಧಿಸುವ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವನ್ನು ರಚನೆ ಮಾಡಿರುವ ರಾಜ್ಯ ಸರ್ಕಾರವನ್ನು ಹೊಸನಗರ ತಾಲೂಕು ನಿಟ್ಟೂರಿನ ಶ್ರೀ ನಾರಾಯಣಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ.

ಶಿವಮೊಗ್ಗ ಪತ್ರಿಕಾಭವನದಲ್ಲಿ ಮಂಗಳವಾರ (ಫೆ.೨೧) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, “ಈಡಿಗ, ಬಿಲ್ಲವ, ದೀವರು, ನಾಮಧಾರಿ ಸೇರಿದಂತೆ ೨೬ ಒಳಪಂಗಡಗಳನ್ನು ಒಳಗೊಂಡ ಈಡಿಗ ಸಮುದಾಯದ ಅಭಿವೃದ್ಧಿಗೆ ಅಭಿವೃದ್ಧಿ ನಿಗಮ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಸಮಸ್ತ ಕುಲಬಾಂಧವರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಅನೇಕ ವರ್ಷಗಳ ಬೇಡಿಕೆಯಾದ ನಿಗಮವನ್ನು ಸರಕಾರ ರಚನೆ ಮಾಡಿ ಆದೇಶ ಹೊರಡಿಸಿರುವುದು ಹರ್ಷ ತಂದಿದೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿರುವ ಮಂತ್ರಿಗಳಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಸಹಕರಿಸಿದ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಕೆ.ಎಸ್.ಈಶ್ವರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: Sindhuri Vs Roopa : ಡಿ. ರೂಪಾ ರಿಲೀಸ್‌ ಮಾಡಿದ ವಾಟ್ಸ್‌ಆಪ್‌ ಚಾಟ್‌ ನಕಲಿ; ಸಿಂಧೂರಿ ಪತಿ ವಾದವೇನು?

“ಕಳೆದ ತಿಂಗಳು ನಾವು ರಾಜ್ಯ ಈಡಿಗ ಸಂಘ, ಬಿಲ್ಲವ ಸಂಘ ಸೇರಿದಂತೆ ಹಲವು ಸಂಘಟನೆಗಳು ಶಾಸಕರಾದ ಹರತಾಳು ಹಾಲಪ್ಪ, ಸಚಿವ ಸುನಿಲ್ ಕುಮಾರ್ ಅವರೊಡಗೂಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಅಂದೇ ನಿಗಮ ಘೋಷಣೆ ಆಗಿತ್ತಾದರೂ ಆದೇಶ ಆಗಿರಲಿಲ್ಲ. ಈ ಸಂಬಂಧ ಆದೇಶ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ನಿಗಮಕ್ಕೆ ಕನಿಷ್ಠ ಪಕ್ಷ ೫೦೦ ಕೋಟಿ ರೂ.ಗಳನ್ನು ಮೀಸಲಿಡಬೇಕು. ನಿಗಮ ಬೇಕೆಂದು ಸಮಾಜ ಬಾಂಧವರು ರಾಜ್ಯಾದ್ಯಂತ ಹೋರಾಟ ಮಾಡಿದ್ದಾರೆ. ಸ್ವಾಮೀಜಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದರು. ಎಲ್ಲರ ಹೋರಾಟದ ಫಲವಾಗಿ ಸರಕಾರ ಈಗ ನಿಗಮ ಘೋಷಣೆ ಮಾಡಿದೆ. ರಾಜ್ಯದ ಸಮಸ್ತ ಈಡಿಗ ಸಮುದಾಯದ ಧ್ವನಿಗೆ ಸರಕಾರ ಮನ್ನಣೆ ನೀಡಿರುವುದು ನಮಗೆ ಸಂತೋಷ ತಂದಿದೆ. ನಿಗಮದ ಕಾರ್ಯಚಟುವಟಿಕೆಯನ್ನು ಸರ್ಕಾರ ಶೀಘ್ರ ಆರಂಭಿಸಬೇಕು” ಎಂದು ರೇಣುಕಾನಂದ ಸ್ವಾಮೀಜಿ ಒತ್ತಾಯಿಸಿದರು.

ಇದನ್ನೂ ಓದಿ: WPL 2023: ವನಿತೆಯರ ಪ್ರೀಮಿಯರ್‌ ಲೀಗ್‌: ಟಾಟಾಗೆ ಟೈಟಲ್‌ ಪ್ರಾಯೋಜಕತ್ವ

“ಸಮಾಜದ ನೇತರರಾದ ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ , ಸ್ವಾಮಿರಾವ್ ಅವರು ಅನೇಕ ರೈತರಿಗೆ ಹಕ್ಕುಪತ್ರ ಕೊಡಿಸಲು ಹೋರಾಟ ಮಾಡಿದ್ದಾರೆ. ಆದರೆ ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಹಾಗೆಯೇ ಇದೆ. ಈ ಬಗ್ಗೆ ಸರಕಾರ ಆದ್ಯತೆ ನೀಡಿ ರೈತರಿಗೆ ಉಳುವ ಭೂಮಿಗೆ ಹಕ್ಕುದಾರಿಕೆ ಕೊಡಬೇಕು” ಎಂದು ಮನವಿ ಮಾಡಿದರು.

ಉದ್ಯಮಿ ಹಾಗೂ ಈಡಿಗ ಸಮಾಜದ ಪ್ರಮುಖ ಸುರೇಶ್ಬಾಳೆಗುಂಡಿ ಮಾತನಾಡಿ, “ಸರ್ಕಾರ ಚುನಾವಣೆಯ ಹೊಸ್ತಿಲಲ್ಲಿ ನಿಗಮ ಘೋಷಣೆ ಮಾಡಿರುವುದು ರಾಜಕೀಯ ಕಾರಣ ಎಂದು ಹೇಳಲಾಗುವುದು. ಸರ್ಕಾರಿ ಆದೇಶ ಆದ ಮೇಲೆ ಮುಂದೆ ಯಾವ ಸರ್ಕಾರ ಬಂದರೂ ಮುಂದಿನ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುತ್ತದೆ” ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

“ರಾಜ್ಯ ಸರಕಾರ ದೊಡ್ಡ ಸಮುದಾಯದ ಬೇಡಿಕೆಗೆ ಸ್ಪಂದಿಸಿರುವುದು ಸಮಾಜಕ್ಕೆ ನೀಡಿದ ಗೌರವ. ಇದಕ್ಕೆ ಕಾರಣರಾದ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಸಮಾಜದ ವಿವಿಧ ಸಂಘಟನೆಗಳಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ” ಎಂದರು.

ಇದನ್ನೂ ಓದಿ: Kannada New Movie: ಸೈನ್ಸ್ ಫಿಕ್ಷನ್ ‘ಮಂಡಲ’ದಲ್ಲಿದೆ ಅನುಭವಿ ಕಲಾವಿದರ ದಂಡು: ಮಾರ್ಚ್ 10ರಂದು ತೆರೆಗೆ

“ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ನಮ್ಮ ಸಮಾಜದ ಪ್ರಶ್ನಾತೀತ ನಾಯಕರು, ಈಡಿಗ ಸಮಾಜದ ಅಸ್ಮಿತೆಯಾದ ಎಸ್.ಬಂಗಾರಪ್ಪ ಅವರ ಹೆಸರನ್ನು ಇಡಬೇಕೆಂಬ ಬೇಡಿಕೆ ಸಮಾಜದ್ದಾಗಿತ್ತು. ಈ ಸಂಬಂಧ ಈಗಾಗಲೇ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಸಮುದಾಯದ ನಾಯಕರ ನಾಮಕರಣ ಮಾಡಿದ್ದರೆ, ಸಂತೋಷವಾಗುತಿತ್ತು. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Assembly Session: ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿದ ಮಹಿಳಾಧಿಕಾರಿಗಳ ಕಿತ್ತಾಟ: ಎಚ್‌. ವಿಶ್ವನಾಥ್‌ ಪ್ರಸ್ತಾಪ

ಬ್ರಹ್ಮಶ್ರೀ ನಾರಾಯಣಗುರು ಜಿಲ್ಲಾ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ ಅವರು ಮಾತನಾಡಿ, “ಈಡಿಗ ಸಮಾಜದ ಹಲವು ಬೇಡಿಕೆಗಳಲ್ಲಿ ನಿಗಮ ಬೇಡಿಕೆಯನ್ನು ಈಡೇರಿಸಿರುವುದು ಸಂತಸ ತಂದಿದೆ” ಎಂದು ಹೇಳಿದರು.

ಈಡಿಗ ಸಮಾಜದ ಪ್ರಮುಖರಾದ ಎ.ಬಿ.ರುದ್ರಪ್ಪ, ಡಿ.ದೇವಪ್ಪ, ಸುದರ್ಶನ, ಕೃಷ್ಣಪ್ಪ, ವೀಣಾ ವೆಂಕಟೇಶ್, ಮಹೇಶ್ ಬ್ಲೂಮನ್, ಬಂಡಿ ದಿನೇಶ್, ಹೊಸಮನೆ ಉಮೇಶ್ ಮತ್ತಿತರರಿದ್ದರು.

ಇದನ್ನೂ ಓದಿ: Ram Charan: ಅಮೆರಿಕದ ಜನಪ್ರಿಯ ಟಾಕ್ ಶೋ ʻಗುಡ್ ಮಾರ್ನಿಂಗ್ ಅಮೆರಿಕʼದಲ್ಲಿ ಆರ್‌ಆರ್‌ಆರ್ ನಟ ರಾಮ್‌ಚರಣ್ ಮುಖ್ಯ ಅತಿಥಿ!

Exit mobile version