Site icon Vistara News

Shivamogga News: ಸರ್ಕಾರಿ ಬಸ್ ಸೌಕರ್ಯ ಕಲ್ಪಿಸಲು ಮಹಿಳೆಯರು, ವಿದ್ಯಾರ್ಥಿನಿಯರ ಆಗ್ರಹ

Demand for government bus on Shivamogga Hosanagar

ರಿಪ್ಪನ್‌ಪೇಟೆ: ಶಿವಮೊಗ್ಗ-ಹೊಸನಗರ ಮತ್ತು ಸಾಗರ-ತೀರ್ಥಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಸೌಕರ್ಯ (Bus facility) ಕಲ್ಪಿಸುವಂತೆ ಅಗ್ರಹಿಸಿ, ಶುಕ್ರವಾರ ಮಹಿಳೆಯರು ನಾಡಕಚೇರಿಯ ಅಧಿಕಾರಿಗಳ ಮೂಲಕ ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಡಿ ಹೊಸನಗರ ತಾಲೂಕಿನ ಮಹಿಳೆಯರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು ವಂಚಿತರಾಗಿದ್ದು, ಈ ಹಿನ್ನೆಲೆಯಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಈ ಕುರಿತು ಗಮನಹರಿಸಿ ಶಿವಮೊಗ್ಗ- ಹೊಸನಗರ ಮತ್ತು ಸಾಗರ-ತೀರ್ಥಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಬಿಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ: Yoga Day 2023: ಸೂರ್ಯ ನಮಸ್ಕಾರ… ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ!

ನಾಡಕಚೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮಹಿಳೆಯರಾದ ನಾಗರತ್ನ ದೇವರಾಜ್ ಪದ್ಮ ಸುರೇಶ್, ಲೀಲಾ ಉಮಾಶಂಕರ, ಮಂಜುಳ ಕೇತಾರ್ಜಿ ರಾವ್, ಮಹಾಲಕ್ಷ್ಮಿ, ಸುಧಾ ನೇರಲಮನೆ ಇತರರು ಮಾತನಾಡಿ, ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯಂತೆ ಈಗಾಗಲೇ ರಾಜ್ಯ ವ್ಯಾಪಿ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಮಹಿಳೆಯರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಓಡಾಡುವಂತಾಗಿದ್ದು, ನಮ್ಮೂರಿಗೆ ಈ ಸಾರಿಗೆ ವ್ಯವಸ್ಥೆಯಿಲ್ಲದೆ ಖಾಸಗಿ ಬಸ್ ಮೂಲಕ ಪ್ರಯಾಣಿಸಬೇಕಾಗಿದ್ದು ತಕ್ಷಣ ಸರ್ಕಾರ ಇತ್ತ ಗಮನಹರಿಸಿ ಮಲೆನಾಡಿನ ಮಹಿಳೆಯರಿಗೂ ಉಚಿತ ಬಸ್ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Weather Report: ಕರಾವಳಿಯಲ್ಲಿ ಮುಂದುವರಿದ ಮಳೆಯಾಟ; ಒಳನಾಡಿನಲ್ಲಿ ಕೊಂಚ ಬ್ರೇಕ್‌

ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನೀಯರಾದ ಬಿಂದು,ನಾಗರತ್ನ,ಗೀತಾ, ದೀಪಾ, ನಾಗಶ್ರೀ, ನವ್ಯಶ್ರೀ, ಶ್ವೇತಾ,ಲೀಲಾವತಿ,ಕಲಾವತಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Exit mobile version