Site icon Vistara News

Shivamogga News: ಹೊಳೆಹೊನ್ನೂರು ಪಟ್ಟಣಕ್ಕೆ ಪುರಪ್ರವೇಶ ಮಾಡಿದ ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಗಳು

Shri Sathyatma Theertha Shri of Uttaradi Math has entered Holehonnur town

ಹೊಳೆಹೊನ್ನೂರು: ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು 28ನೇ ಚಾತುರ್ಮಾಸ್ಯದ (Chaturmasya) ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಹೊಳೆಹೊನ್ನೂರು (Holehonnur) ಪಟ್ಟಣಕ್ಕೆ ಪುರಪ್ರವೇಶ ಮಾಡಿದರು.

ಶ್ರೀಪಾದಂಗಳವರ ಆಗಮನದ ಹಿನ್ನೆಲೆಯಲ್ಲಿ ರಾಜಬೀದಿಯನ್ನು ದೀಪಾಲಂಕೃತಗೊಳಿಸಲಾಗಿತ್ತು. ಹೊಳೆಹೊನ್ನೂರು ಬಸ್‌ಸ್ಟಾಂಡ್ ಬಳಿಯಿಂದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರನ್ನು ಅದ್ಧೂರಿ ಮೆರವಣಿಗೆಯ ಮೂಲಕ ಬರ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ: Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!

ಮೊದಲು ಪ್ರಾಣದೇವರ ದರ್ಶನ ಮಾಡಿದ ಸ್ವಾಮೀಜಿಯವರು ನಂತರ ತಮ್ಮ ಪೀಠದ ಪೂರ್ವಯತಿಗಳಾದ ಶ್ರೀ ಸತ್ಯಧರ್ಮತೀರ್ಥರ ದರುಶನ ಪಡೆದರು. ನಂತರ ಚಾತುರ್ಮಾಸ್ಯ ಕಾಲದಲ್ಲಿ ಸಂಸ್ಥಾನ ಪೂಜೆ ನೆರವೇರಿಸಲೆಂದೇ ನೂತನ ನಿರ್ಮಿಸಲಾಗಿರುವ ಪೂಜಾ ಮಂದಿರದಲ್ಲಿ ಶ್ರೀ ದಿಗ್ವಿಜಯ ಮೂಲ ರಾಮ ದೇವರ ಪೆಟ್ಟಿಗೆಯನ್ನಿರಿಸಿ ಮಂಗಳಾರತಿ ಮಾಡಿದರು.

ನಂತರ ನಡೆದ ವಿದ್ವತ್ ಸಭೆಯಲ್ಲಿ ಸಮಸ್ತ ಭಕ್ತರ ಪರವಾಗಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವಂತೆ ಶ್ರೀಗಳವರಲ್ಲಿ ವಿಜ್ಞಾಪಿಸಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಶ್ರೀಗಳು ಚಾತುರ್ಮಾಸ್ಯ ಸೇವಾ ಕೌಂಟರ್ ಅನ್ನು ಉದ್ಘಾಟಿಸಿದರು.

ಇದನ್ನೂ ಓದಿ: Online Fraud: ಆನ್‌ಲೈನ್‌ನಲ್ಲಿ ಸ’ಮೋಸ’ ಆರ್ಡರ್‌ ಮಾಡಿ 1.4 ಲಕ್ಷ ರೂ. ಕಳೆದುಕೊಂಡ ಡಾಕ್ಟರ್

ಈ ಸಂದರ್ಭದಲ್ಲಿ ಉತ್ತರಾದಿಮಠದ ದೀವಾನರಾದ ಶಶಿಆಚಾರ್ಯ, ವಿದ್ವಾಂಸರಾದ ನವರತ್ನ ಸುಬ್ಬಣ್ಣ ಆಚಾರ್ಯ, ನವರತ್ನ ಶ್ರೀನಿವಾಸ ಆಚಾರ್ಯ, ನವರತ್ನ ಪುರುಷೋತ್ತಮ ಆಚಾರ್ಯ, ಶಿವಮೊಗ್ಗ ಜಿಲ್ಲೆಯ ಉತ್ತರಾದಿಮಠದ ಮಠಾಧಿಕಾರಿಗಳಾದ ಬಾಳಗಾರು ಜಯತೀರ್ಥಆಚಾರ್ಯ, ರಘೂತ್ತಮ ಆಚಾರ್ಯ ಸಂಡೂರು ಇತರರು ಉಪಸ್ಥಿತರಿದ್ದರು.

Exit mobile version